26th December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ಮಟ್ಟದ ‘ದಿಶಾ ಪೋರ್ಟಲ್’ ನ್ನು ವಿಶೇಷ ಮಾದರಿಯಲ್ಲಿ ವೆಬ್‍ಸೈಟ್ ಮಾಡಿ 2022 ರೊಳಗೆ ಸಂಪೂರ್ಣ ಮಾಹಿತಿ ಅಫ್ ಲೋಡ್ ಮಾಡಲು ದಿನಾಂಕ:29.06.2021 ರಂದು ನಡೆದ ದಿಶಾ ಸಮಿತಿ ಸಭೆಯಲ್ಲಿ  ಚಾಲನೆ ನೀಡಲಾಗಿದೆ.

ಯಶಸ್ವಿಯಾಗಿ ಪೂರ್ಣಗೊಳಿಸಬೇಕಾದರೆ, ಎನ್.ಐ.ಸಿ ಮತ್ತು ಎನ್.ಆರ್.ಡಿ.ಎಂ.ಎಸ್.ಗೆ ಇನ್ನೂ ಹೆಚ್ಚಿನ ನೌಕರರ ಅವಶ್ಯಕತೆಯಿದೆ. ಅವರಿಗೆ ಅಗತ್ಯವಿರುವ ನೌಕರರು ಮತ್ತು ಉಪಕರಣಗಳನ್ನು ತುರ್ತಾಗಿ ನೀಡಲು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಜೊತೆಗೆ ಈ ಕೆಳಕಂಡ ಸಂಸ್ಥೆಗಳ ರಾಜ್ಯ ಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಿ ಯಾರು ಯಾರು ಯಾವ ಕೆಲಸ ಮಾಡಬೇಕು, ಎಷ್ಟು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂಬ ಬಗ್ಗೆ ನಿಗದಿಗೊಳಿಸಬೇಕು.

  1. ಎನ್.ಐ.ಸಿ
  2. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್.
  3. ಎನ್.ಆರ್.ಡಿ.ಎಂ.ಎಸ್.
  4. ಕೆ.ಎಂ.ಡಿ.ಎಸ್.
  5. ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿ.
  6. ಡಿಜಿಟಲ್ ಲೈಬ್ರರಿ
  7. ಅಂಕಿ ಅಂಶಗಳ ಇಲಾಖೆ.
  8. ಜಿಲ್ಲಾ ಪಂಚಾಯತ್ ಪ್ಲಾನಿಂಗ್ ಇಲಾಖೆ.
  9. ತುಮಕೂರು ಜಿಲ್ಲೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯ ಕಂಪ್ಯೂಟರ್ ಆಪರೇಟರ್ ಅಥವಾ ಡಾಟಾ ಆಪರೇಟರ್

ತುಮಕೂರು ಜಿಲ್ಲೆಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯ ಕಂಪ್ಯೂಟರ್ ಆಪರೇಟರ್ ಅಥವಾ ಡಾಟಾ ಆಪರೇಟರ್ ‘ಲಾಗಿನ್ ಪಾಸ್‍ವರ್ಡ್’ ನೀಡಿ ತರಬೇತಿ ನೀಡುವುದು ಅಗತ್ಯವಾಗಿದೆ.

‘ಕಾಲಮಿತಿ ನಿಗದಿ ಗೊಳಿಸಿ ತುರ್ತಾಗಿ ಕೆಲಸ ನಿರ್ವಹಿಸಲು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್. ಪಾಟೀಲ್ ರವರು, ಜಿಲ್ಲಾ ಪಂಚಾಯತ್ ಸಿಇಓ ರವರಾದ ಶ್ರೀ ಮತಿ ಕೆ.ವಿದ್ಯಾಕುಮಾರಿರವರು ಕ್ರಮ ಕೈಗೊಳ್ಳುವುದು ಸೂಕ್ತವಾಗಿದೆ.’

ಜೊತೆಗೆ ಪೋಲೀಸ್ ವರಿಷ್ಠಾಧಿಕಾರಿಗಳು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೀಟ್ ಪೋಲೀಸ್ ಮೂಲಕ ಸಹಕರಿಸಲು ಮನವಿ ಮಾಡಲಾಗಿದೆ. ತುಮಕೂರು ಜಿಲ್ಲೆಯ ಎಲ್ಲಾ ಭಾಗದ ಪೋಲೀಸ್ ಬೀಟ್ ಜಿಐಎಸ್ ಲೇಯರ್’ ಮಾಡಿ, ಅವರವರ ವ್ಯಾಪ್ತಿಯಲ್ಲಿ ಏನೇನು ಕಾಮಗಾರಿ ನಡೆದಿದೆ, ನಡೆಯುತ್ತಿದೆ, ಅಪೂರ್ಣವಾಗಿವೆ ಎಂಬ ಮಾಹಿತಿಗಳನ್ನು ಅಫ್ ಲೋಡ್ ಮಾಡಲಾಗಿದೆಯೇ ಎಂಬ ಬಗ್ಗೆ ಸಹಕರಿಸದರೇ ನಿಜಕ್ಕೂ ದೇಶಕ್ಕೆ ಮಾದರಿಯಾಗಲಿದೆ.

ಪೋಲೀಸ್ ಇಲಾಖೆ ಜನರ ರಕ್ಷಣೆ ಜೊತೆಗೆ ಅಭಿವೃದ್ಧಿ ಗ್ರೀನ್ ಪೋಲೀಸ್’ ಆಗಿಯೂ ಕಾರ್ಯ ನಿರ್ವಹಿಸಿದ ಕೀರ್ತಿ ನಮ್ಮ ಎಸ್.ಪಿ ರವರಿಗೆ ಬರಲಿದೆ. 2022 ಆಗಸ್ಟ್ 15 ರವರೆಗೆ ನಿಮ್ಮ ಸೇವೆ ನಮಗೆ ಅಗತ್ಯವಾಗಿದೆ. ಮುಂದಿನ ನಿರ್ಧಾರ ತಮಗೆ ಬಿಟ್ಟಿದೆ.

 ತುಮಕೂರು ಜಿಲ್ಲೆಯ ಸಚಿವರ, ಸಂಸದರ, ವಿಧಾನಸಭಾ ಸದಸ್ಯರ, ವಿಧಾನ ಪರಿಷತ್ ಸದಸ್ಯರ, ಆಪ್ತಕಾರ್ಯದರ್ಶಿ, ಆಪ್ತ ಸಹಾಯಕರು ಈ ಕಡೆ ಗಮನಹರಿಸಿದರೆ ಇನ್ನೂ ಯಶಸ್ವಿಯಾಗಿ ಸಾಗಲಿದೆ. ಉದಾಸೀನ ಮಾಡಬೇಡಿ ಎಂದು ಸಲಹೆ ನೀಡಿದ್ದೇನೆ. ಇಚ್ಚಿಸಿದರೆ ನಿಮ್ಮ ಪಾತ್ರಗಳ ಬಗ್ಗೆ ತರಬೇತಿ ನೀಡುತ್ತೇವೆ. ಇಚ್ಚಿಸದಿದ್ದಲ್ಲಿ ‘ಉದಾಸೀನವೇ? ಮದ್ದು. ಮೌನಂ ಸರ್ವತ್ರ ಸಾಧನಂ!’