TUMAKURU:SHAKTHI PEETA FOUNDATION
ರಾಷ್ಟ್ರಪತಿಯವರು ಮತ್ತು ಪ್ರಧಾನ ಮಂತ್ರಿಯವರು ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಕೋವಿಡ್ ಹಿನ್ನಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಗಮನಹರಿಸಲು ಸೂಚಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ದಿಶಾ ಮಾನಿಟರಿಂಗ್ ಸೆಲ್ ಆರಂಭಿಸಲು ಕ್ರಮ ಕೈಗೊಂಡಿರುವ ಹಿನ್ನಲೆಯಲ್ಲಿ ಎರಡು ಮಾನಿಟರಿಂಗ್ ಸೆಲ್ ಒಂದೇ ಕಡೇ ಸ್ಥಾಪಿಸಿದರೆ ಹೇಗೆ ಎಂಬ ಬಗ್ಗೆ ತುಮಕೂರು ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್ ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯ ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:16.07.2021 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು.
2022 ರೊಳಗೆ ತುಮಕೂರು ಜಿಲ್ಲೆಯನ್ನು ಡಿಜಿಟಲ್ ಡಾಟಾ ಜಿಲ್ಲೆಯಾಗಿ ಘೋಷಣೆ ಮಾಡುವುದು ಹಾಗೂ ಕೋವಿಡ್ 3 ನೇ ಅಲೆಯ ಬಗ್ಗೆ ವಿಶೇಷ ಗಮನಹರಿಸಲು, ಕಳೆದ ಎರಡು ಕೋವಿಡ್ ಅಲೆಗಳ ಡಿಜಿಟಲ್ ಡಾಟಾ ಸಂಗ್ರಹಿಸಲು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಎಡಿಡಿಸಿ ಶ್ರೀ ಚನ್ನಬಸಪ್ಪನವರು, ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ರವರು, ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯ ಶ್ರೀ ಕುಂದರನಹಳ್ಳಿ ರಮೇಶ್, ಲೋಕೇಶ್ ಮತ್ತು ಉಮಶಂಕರ್ ಇದ್ದರು.