22nd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯಲ್ಲಿ ಮೆಗಾ ಇಂಡಸ್ಟ್ರಿಯಲ್ ಟೆಕ್ಸ್‍ಟೈಲ್ಸ್ ಪಾರ್ಕ್ ಸ್ಥಾಪಿಸಲು ಮಧುಗಿರಿ ತಾಲ್ಲೂಕು, ಕೊರಟಗರೆ ತಾಲ್ಲೂಕು ಮತ್ತು ಶಿರಾ ತಾಲ್ಲೂಕು ಸೇರಿದಂತೆ ಮೂರು ತಾಲ್ಲೂಕುUಳÀ ಸಂಗಮ ರೀತಿಯಲ್ಲಿ ಒಂದೇ ಕಡೆ ಸರ್ಕಾರಿ ಜಮೀನು ಲಭ್ಯವಿರುವ ಬಗ್ಗೆ ಮತ್ತು ಮಧುಗಿರಿ ತಾಲ್ಲೂಕಿನಲ್ಲಿ ಇತರೆ ಕಡೆ ಇರುವ ಸರ್ಕಾರಿ ಜಮೀನು ಬಗ್ಗೆ ಮಧುಗಿರಿ ಉಪವಿಭಾಗಾಧಿಕಾರಿ ಶ್ರೀ ಸೋಮಪ್ಪ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ತುಮಕೂರು ಲೋಕಸಭಾ ಸದಸ್ಯ ಹಾಗೂ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:16.07.2021 ರಂದು ಅವರ ಗೃಹ ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು.

ಒಂದು ವಾರದೊಳಗೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಬಸವರಾಜ್ ರವರು ಉಪವಿಭಾಗಾಧಿಕಾರಿಯವರಿಗೆ ಸೂಚಿಸಿದರು. ಸರ್ಕಾರಿ ಜಮೀನು ಮತ್ತು ಖಾಸಗಿ ಜಮೀನು ಭೂ ಸ್ವಾಧಿನ, ಹೆಚ್.ಎ.ಎಲ್ ಮಾದರಿಯಲ್ಲಿ ಸ್ಥಳಾಂತರ, ಬಗರ್ ಹುಕುಂ ಯೋಜನೆಯಡಿ ಸಲ್ಲಿಸಿರುವ ಅರ್ಜಿಗಳು ಇತ್ಯಾದಿ ಬಗ್ಗೆಯೂ ವಿವರವಾದ ವರದಿ ಸಲ್ಲಿಸಲು ಸಂಸದರು ಸೂಚಿಸಿದರು.

ಪ್ರಸ್ತಾವನೆ ಸಲ್ಲಿಸಿದ ನಂತರ ಸುತ್ತಮುತ್ತಲಿನ ಕೆರೆಗೆ ಎತ್ತಿನ ಹೊಳೆ ಯೋಜನೆಯ ನೀರು ಅಲೋಕೇಷನ್ ಮಾಡಲು ಹಾಗೂ ಇದೇ ಪಾರ್ಕ್‍ನಲ್ಲಿ ಟೆಕ್ಸ್‍ಟೈಲ್ಸ್ ಪಾರ್ಕ್‍ಗೆ ಅನೂಕೂಲವಾಗುವ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲು ಜಮೀನು ನಿಗದಿಗೊಳಿಸಲು ಸಮಾಲೋಚನೆ ನಡೆಸಲಾಯಿತು.

ತುಮಕೂರು ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳು ಮತ್ತು ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಇರುವುದು ಒಂದು ವಿಶೇಷವಾಗಿದೆ. ಮುಂದಿನವಾರ ಜಿಲ್ಲಾಧಿಕಾರಿಗಳು ಈ ಬಗ್ಗೆ ಸಂಬಂಧಿಸಿದವರ ಸಭೆ ನಡೆಸಲು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಉಮಾಶಂಕರ್, ಲೋಕೇಶ್ ಇದ್ದರು.