23rd December 2024
Share

TUMAKURU:SHAKTHI PEETA FOUNDATION

ದಿನಾಂಕ:18.07.2021 ರಂದು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯರವರಾದ ಶ್ರೀಮತಿ ಶಾಲಿನಿ ರಜನೀಶ್ ರವರೊಂದಿಗೆ ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆಯ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯು ಆರಂಭಿಸಲು ಉದ್ದೇಶಿರುವ ಜಿಲ್ಲಾ ಮಟ್ಟದ ದಿಶಾ ಮಾನಿಟರಿಂಗ್ ಸೆಲ್ ಬಗ್ಗೆ ಚರ್ಚೆ ನಡೆಸಿ, ಸೆಲ್ ಹೇಗಿರಬೇಕು ಎಂಬ ಬಗ್ಗೆ  ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಜಿಲ್ಲಾ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀ ಮತಿ ಕೆ.ವಿದ್ಯಾಕುಮಾರಿರವರೊಂದಿಗೆ ದೂರವಾಣಿಯಲ್ಲಿ ವಿಚಾರ ವಿನಿಮಯ ಮಾಡಿಕೊಂಡರು.

ದಿಶಾ ಮಾನಿಟರಿಂಗ್ ಸೆಲ್ ದೇಶಕ್ಕೆ ಮಾದರಿಯಾಗುವಂತೆ ಮಾಡಲು ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಮಹತ್ವದ ಹೊಣೆಗಾರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಒಂದು ಸಾಗರವಿದ್ದಂತೆ. ಸಾವಿರಾರು ಯೋಜನೆಗಳನ್ನು ಜಾರಿಗೊಳಿಸಿದೆ, 2016 ರಲ್ಲಿಯೇ ದಿಶಾ ಸಮಿತಿಗಳು ರಚನೆಯಾದರೂ, ಯಾವ ಇಲಾಖೆ ಯಾವ ಯೋಜನೆ ಮಾಡುತ್ತಿದೆ ಎಂಬುದೇ ಇನ್ನೂ ಸಂಸದರಿಗೆ ಪೂರ್ಣ ಮಾಹಿತಿ ಲಭ್ಯವಿಲ್ಲ. ಹಾಗಿದ್ದರೆ ಅವರು ಹೇಗೆ ದಿಶಾ ಸಭೆ ನಡೆಸುತ್ತಿದ್ದಾರೆ. ಕಾಟಚಾರಕ್ಕೆ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ನನಗೆ ಹುಟ್ಟಿದೆ.

ಹೌದು ನಾನೇ ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿದ್ದರೂ ಇನ್ನೂ ಆನೇಕ ಯೋಜನೆಗಳ ಅರಿವು ನನಗೂ ಆಗಿಲ್ಲ. ದಿಶಾ ಮಾನಿಟರಿಂಗ್ ಸೆಲ್ ದೇಶದ ಎಲ್ಲಾ ಸಂಸದರಿಗೂ ಒಂದು ಮಾದರಿಯಾಗುವಂತೆ ಮಾಡುವುದೇ ದಿಶಾ ಮಾನಿಟರಿಂಗ್ ಸೆಲ್ ಗುರಿಯಾಗಿದೆ.

ಈ ಬಗ್ಗೆ ರಾಜ್ಯ ಮಟ್ಟದ ಎನ್.ಐ.ಸಿ ಯ ಅಧಿಕಾರಿಗಳೊಂದಿಗೂ ದಿನಾಂಕ:18.07.2021 ರಂದು ಸಮಾಲೋಚನೆ ನಡೆಸಲಾಗಿದೆ. ರಾಜ್ಯ ಮಟ್ಟದ ಅಧಿಕಾರಿಯವರು ಲಭ್ಯವಾಗಲಿಲ್ಲದಿದ್ದರೂ ಅವರ ನಂತರ ಅಧಿಕಾರಿಗಹಳೊಂದಿಗೆ ಚರ್ಚೆ ನಡೆಸಲಾಗಿದೆ. ಸಂಸದರ ವೆಬ್ ಸೈಟ್ ಮತ್ತು ದಿಶಾ ಮಾನಿಟರಿಂಗ್ ಪೋರ್ಟಲ್ ಸಾಧಕ-ಬಾಧಕಗಳ ಬಗ್ಗೆ ಚಿಂತನೆ ನಡೆಸಲಾಗಿದೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಲೋಕಸಭಾ ಸದಸ್ಯರ ಅನುದಾನದಲ್ಲಿ ಸುಮಾರು ರೂ 20 ಲಕ್ಷ ಅನುದಾನ ನೀಡಿದ್ದಾರೆ. ತುಮಕೂರು ಜಿಲ್ಲಾ ಪಂಚಾಯತ್ ರೂ 5 ಲಕ್ಷ ಅನುದಾನ ನಿಗದಿ ಮಾಡಿದೆ. ಪೂರ್ಣ ಪ್ರಮಾಣದ ಯೋಜನೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆಯೂ ಶ್ರೀ ಮತಿ ಶಾಲಿನಿ ರಜನೀಶ್ ರವರೊಂದಿಗೆ ಚರ್ಚಿಸಲಾಯಿತು.

ಆಗಸ್ಟ್ ಒಂದರಿಂದ ಕೇಂದ್ರದ ಯೋಜನೆಗಳ ಅರಿವಿನ ಬಗ್ಗೆ ಒಂದು ಡಿಜಿಟಲ್ ಆಂದೋಲವನ್ನೇ ರೂಪಿಸಲು ಚಿಂತನೆ ನಡೆದಿದೆ. ಆಸಕ್ತರು ಸಲಹೆ ನೀಡಲು ಮನವಿ.