9th October 2024
Share
GURUSIDDARADYA, GOVINDAPPA, BASAVRAJ, SHSHIKUMAR, NARASIMHA MURTHY
PROMOD, RAJAGOPAL & SRINIVAS

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್ ನಲ್ಲಿ  ಸುಮಾರು 150 ವಿವಿಧ ಜಾತಿಯ ಔಷಧಿ, ವಾಣಿಜ್ಯ, ಹಣ್ಣು ಮತ್ತು ಕಾಡು ಗಿಡಗಳನ್ನು ಸಂಗ್ರಹಿಸಿ ನಾಟಿ ಮಾಡಲಾಗಿದೆ. ಕ್ಯಾಂಪಸ್ ನಲ್ಲಿ ಹಾಲಿ ಇರುವ ಇನ್ನೂ ಕೆಲವು ಗಿಡಗಳ ಜಾತಿಗಳನ್ನು ಗುರುತಿಸಬೇಕಿದೆ.

ನಾವು 2021 ಜುಲೈ 25 ರೊಳಗೆ ಸುಮಾರು 100 ಜಾತಿಯ ಗಿಡಗಳನ್ನು ಸಂಗ್ರಹಿಸಿ ಹಾಕಲು ಗುರಿ ಹೊಂದಿದ್ದೆವು. ನಿಗದಿತ ಅವಧಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ಸಂಗ್ರಹಿಸಲಾಗಿದೆ. ಆಗಸ್ಟ್ 15 ರೊಳಗೆ ಸುಮಾರು 340 ವಿವಿಧ ಜಾತಿಯ  ಗಿಡ, ಬಳ್ಳಿ, ಬೀಜಗಳನ್ನು ಹಾಕಲು ಗುರಿ ನಿಗದಿ ಪಡಿಸಿಕೊಳ್ಳಲಾಗಿದೆ.’

ರೈತರ ಆದಾಯವನ್ನು ದುಪ್ಪಟ್ಟು ಮಾಡಬೇಕಾದಲ್ಲಿ, ರೈತ ತನ್ನ ಜಮೀನಿÀನಲ್ಲಿ ಯಾವ ರೀತಿ ಮರಗಿಡಗಳನ್ನು ಹಾಕಬೇಕು ಎಂಬ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸುವುದಾಗಿ ಕೆಲವು ಪರಿಣಿತರು ತಿಳಿಸಿದ್ದಾರೆ. ಈ ಬಗ್ಗೆ ಸರ್ಕಾರದ ವಿವಿಧ ಇಲಾಖೆಗಳ ಪಾತ್ರವೇನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಸಲಹೆ ನೀಡಲಾಗಿದೆ.

ರಾಜ್ಯದ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಆಯುಷ್ ಇಲಾಖೆಗಳು ಯಾವ ಚಿಂತನೆ ನಡೆಸಿವೆ, ಬಾಯಿ ಮಾತಿನಲ್ಲಿ ‘2022 ರೊಳಗೆ ರೈತರ ಆದಾಯ ದುಪ್ಪಟ್ಟು’ ಮಾಡುತ್ತೇವೆ ಎಂದು ಹೇಳಲಾಗುತ್ತಿದೆಯೋ ಅಥವಾ ಪ್ರಾಕ್ಟಿಕಲ್ ಆಗಿ ಏನೇನು ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಒಂದು ಕಾರ್ಯಾಗಾರವನ್ನು ಏರ್ಪಡಿಸಲು ಯೋಚಿಸಲಾಗಿದೆ.

ರೈತ ತನ್ನ ಜಮೀನಿÀನಲ್ಲಿ ಯಾವ ಬೆಳೆ ಮತ್ತು ಉಪಬೆಳೆ ಗಿಡ ಹಾಕಿ ಹೆಚ್ಚಿಗೆ ಆದಾಯ ಪಡೆಯುತ್ತಿದ್ದಾನೆ ಎಂಬ ಬಗ್ಗೆ ಪ್ರಗತಿ ಪರ ರೈತರ ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಉತ್ತಮ ಜಾತಿಯ ವಿವಿಧ ಗಿಡಗಳ ಶಕ್ತಿ ಪೀಠ ನರ್ಸರಿ’ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಹತ್ತನೇ ತರಗತಿ ಪರೀಕ್ಷೆ ಬರೆದಿರುವ ಯುವಕನೊಬ್ಬ ಪ್ರತಿಯೊಂದು ಗಿಡಗಳ ಮಹತ್ವದ ಬಗ್ಗೆ ತಿಳಿಸುವ ಸಾಹಸಕ್ಕೆ ಕೈಹಾಕುವುದಾಗಿ ತಿಳಿಸಿದ್ದಾನೆ. ಆತನಿಗೆ ಪ್ರೋತ್ಸಾಹ ನೀಡುವ ಮನಸ್ಸುಗಳು ಬೇಕಾಗಲಿವೆ.

ನಾಟಿ ವೈದ್ಯರ ಸಹಕಾರ ಇಲ್ಲಿ ಅಗತ್ಯವಾಗಿದೆ. ರಾಜ್ಯದ್ಯಾಂತ ನಾಟಿ ವೈದ್ಯರ ಸಂಘಟನೆಗಳ ಜೊತೆ ಸಮಾಲೋಚನೆ ನಡೆಯುತ್ತಿದೆ. ಶಕ್ತಿ ಪೀಠ ಕ್ಯಾಂಪಸ್ ನಲ್ಲಿ 430  ಜಾತಿಯ ಗಿಡಗಳನ್ನು ಹಾಕಿದ ನಂತರವೇ ನಾಟಿ ವೈದ್ಯರನ್ನು ಕ್ಯಾಂಪಸ್ ಗೆ ಕರೆಸಿ ಅವರ ಅಭಿಪ್ರಾಯಗಳನ್ನು ಡಿಜಿಟಲ್ ದಾಖಲೆ ಮಾಡುವ ಆಲೋಚನೆಯನ್ನು ಶ್ರೀ ಗುಸಿದ್ದಾರಾಧ್ಯರವರು, ಶ್ರೀ ಗೋವಿಂದಪ್ಪನವರು ಮತ್ತು ಶ್ರೀ ವೀರಭದ್ರಪಂಡಿತಾರಾದ್ಯರು ವ್ಯಕ್ತ ಪಡಿಸಿದ್ದಾರೆ.

ಹಸಿರು ದಾನಿಗಳು ವಿವಿಧ ಜಾತಿಯ ಗಿಡಗಳ ಸಂಗ್ರಹಕ್ಕೆ ಹಸಿರು ಸೇವೆ ಮಾಡಲು ಮತ್ತೊಮ್ಮೆ ಮನವಿ. ಮಾತನಾಡುವುದು, ಕನಸು ಕಾಣುವುದು, ಬರೆಯುವುದು, ಭಾಷಣ ಮಾಡುವುದು ಸುಲಭ ಕಾರ್ಯ ರೂಪಕ್ಕೆ ತರುವುದು ಎಷ್ಟು ಕಷ್ಟ ಎಂಬ ಅರಿವು ಆಗುತ್ತಿದೆ.’