16th September 2024
Share

TUMAKURU:SHAKTHIPEETA FOUNDATION

ಶಕ್ತೀಪೀಠ ಕ್ಯಾಂಪಸ್ ನಲ್ಲಿ ‘ಪರಿಸರವೇ ದೇವರು’ ಎಂಬ ಘೋಷಣೆಯೊಂದಿಗೆ ಶಕ್ತಿಪೀಠ ಫೌಂಡೇಷನ್ ಯೋಜನೆ ಆರಂಭಿಸಿದೆ. ಬಹುತೇಕರು ಇಲ್ಲಿಗೆ ಬಂದಾಗ, ಈ ಯೋಜನೆ ಬಗ್ಗೆ ಮಾತನಾಡಿದಾಗ ಮೊದಲು ತಾಯಿ ಶಕ್ತಿದೇವತೆ ದೇವಾಲಯ ನಿರ್ಮಾಣ ಮಾಡಿ, ಉಳಿದ ಎಲ್ಲವನ್ನೂ ತಾಯಿಯೇ ಮಾಡಿಸುತ್ತಾರೆ ಎಂಬ ಸಲಹೆ ನೀಡುತ್ತಾರೆ.

ಆದರೇ ತಾಯಿ ಮಾತ್ರ ನಾನು ಹೇಳಿದ ಹಾಗೆ ಮಾಡು ಎಂಬ ಖಡಕ್ ಆದೇಶ’ ನೀಡಿದ್ದಾರೆ. ಮೊದಲು ಶ್ರೀ ಸತ್ಯಾನಂದರವರ ಪ್ರಕಾರ ಸುಮಾರು ಒಂದು ಕೋಟಿ ಅರವತ್ತೆಂಟು ಲಕ್ಷ ಲೀಟರ್ ಸಾಮಾಥ್ರ್ಯದ ಕೃತಕ ಹಿಂದೂ ಮಹಾ ಸಾಗರ, ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಗಳನ್ನು ಶಕ್ತಿದೇವತೆ ನಿರ್ಮಾಣ ಮಾಡಿಸಿದ್ದಾರೆ.’ ಜಲಮಾತೆಯ/ಗಂಗಾಮಾತೆಯ ಆಶೀರ್ವಾದೊಂದಿಗೆ ಉಳಿದ ಎಲ್ಲಾ ಕೆಲಸಗಳು ಆರಂಭವಾಗಿವೆ.

ಈ ಜಲಸಂಗ್ರಹಾಗಾರಕ್ಕೆ ದೆಶದ ನೂರಾರು ನದಿಗಳ ನೀರನ್ನು ತಂದು ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಶ್ರೀ ಶೈಲದ  ಪಾತಳ ಗಂಗೆ ಮತ್ತು ಅಹೋಬಲದ ತೀರ್ಥಗಳನ್ನು ಹಾಕುವ ಮೂಲಕ  ಔಷಧಿ ಗಿಡಗಳ ಸಂಗ್ರಹ ಆರಂಭವಾಗಿದೆ.

ನಮ್ಮ ಎರಡನೇ ಹಂತದ ಕೆಲಸ ಕ್ಯಾಂಪಸ್ ನಲ್ಲಿ ಹಸಿರು ದೇವತೆಗಳ ಪ್ರತಿಷ್ಠಾಪನೆ. ಜುಲೈ 14 ರಂದು ಅಲೋವೇರಾ ಗಿಡ ಹಾಕುವ ಮೂಲಕ ಆರಂಭವಾದ ಹಸಿರು-ಹಬ್ಬ’  ಆಗಸ್ಟ್ 14 ರೊಳಗೆ ಒಂದು ಹಂತದ ಗಿಡಗಳ ನಾಟಿ ಪೂರ್ಣಗೊಂಡರೆ ನಂತರ ಉಳಿದ ಗಿಡಗಳ ಕಲೆಕ್ಷನ್ ಗೆ ಸ್ವಲ್ಪ ಸಮಯ ಹಿಡಿಯಲಿದೆ.

ಆಯುಷ್ ಗಿಡಗಳನ್ನು ಸಂಗ್ರಹಿಸುವ ಕೆಲಸವನ್ನು ಶ್ರೀ ಗುರುಸಿದ್ದಾರಾಧ್ಯ, ಶ್ರೀ ಗೋವಿಂದಪ್ಪನವರ ತಂಡ ಆರಂಭಿಸಿದೆ. ಶ್ರೀ ಚಂದ್ರಪ್ಪನವರ ತಂಡ ಕಾಡು ಗಿಡಗಳ ಸಂಗ್ರಹ ಮಾಡಿದರೆ, ಹಣ್ಣಿನ ಗಿಡಗಳನ್ನು ಶ್ರೀ ಎಸ್.ಪಿ.ರಾಜೇಶ್ ಆರಂಭಿಸಿದ್ದಾರೆ.

ಹಿಂದೂ ಧಾರ್ಮಿಕ ಸಂಸ್ಕøತಿಯ ಪ್ರಕಾರ ನವಗ್ರಹಗಳ ದಿಕ್ಕಿಗೆ ನಿರ್ಧಿಷ್ಠ ಗಿಡಗಳನ್ನು ಹಾಕಬೇಕಾಗುತ್ತದೆ. ಶಕ್ತಿಪೀಠ ಕ್ಯಾಂಪಸ್ ನಲ್ಲಿ ನವಗ್ರಹಗಳನ್ನು ರಿಂಗ್ ರಸ್ತೆ ಸುತ್ತಲೂ ಅಷ್ಟ ದಿಕ್ಕುಗಳಲ್ಲಿ ಮತ್ತು ವೃತ್ತದ/ಚೌಕದ/ಅಷ್ಟಭುಜಾಕೃತಿಯ ಕೇಂದ್ರ ಬಿಂದುವಿನಲ್ಲಿ ಗುರುತು ಮಾಡಲಾಗಿದೆ.

ಆಯಾ ದಿಕ್ಕಿನಲ್ಲಿ ಯಾವ ಗಿಡ ಹಾಕಬೇಕು ಎಂಬ ಬಗ್ಗೆ ಶ್ರೀ ನಾಗರಾಜ್ ರವರು ಪಟ್ಟಿ ನೀಡಿದ್ದಾರೆ. ಇದರ ಜೊತೆಯಲ್ಲಿ ನಾನು ಮೂರು ವಿಷಯಗಳನ್ನು ಮಾತ್ರ ಸೇರ್ಪಡೆ ಮಾಡಿ ತಮ್ಮ ಅಭಿಪ್ರಾಯಕ್ಕೆ ಮನವಿ ಮಾಡಿದ್ದೇನೆ. ಈಶಾನ್ಯದಲ್ಲಿ ಜಲ ಲಿಂಗ’ ಪ್ರತಿಷ್ಠಾಪಿಸಿ ಶಿವನ ತಲೆಯ ಮೇಲೆ ಗಂಗಾಮಾತೆ ಬೀಳುವ ಪ್ರಾತ್ಯಾಕ್ಷಿಕೆ ಮಾಡುವದರಿಂದ ಇಲ್ಲಿ ನಾಗಲಿಂಗ ಪುಷ್ಪದ ಗಿಡ ಹಾಕಲು, ಪೂರ್ವ ದಿಕ್ಕಿನಲ್ಲಿ ಮಹಾಧ್ವಾರ ಬರುವದರಿಂದ ಮಾವಿನ ಗಿಡಗಳನ್ನು ಹಾಕಲು ಮತ್ತು ನೈರುತ್ಯದಲ್ಲಿ ಅತ್ಯಂತ ಎತ್ತರವಾಗಿ ಬೆಳೆಯುವ ಗಿಡ ಹಾಕಲು ಚಿಂತನೆ ಮಾಡಲಾಗಿದೆ. ತಾವು ಸಲಹೆ ನೀಡುವಿರಾ?

ನಮ್ಮ ಜನ ಹೇಗೆ ಎಂದರೆ ಮೊದಲು ನಾವು ಈ ರೀತಿ ಮಾಡುತ್ತೇವೆ ಎಂದಾಗ ಪ್ರತಿಕ್ರೀಯೇ ಮಾಡುವರು ಬಹಳ ಕಡಿಮೆ. ಆದರೇ ಮಾಡಿದ ನಂತರ ಟೀಕೆ, ಪ್ರತಿ ಕ್ರೀಯೆ, ಸಲಹೆಗಳನ್ನು ಸುಲಭವಾಗಿ ನೀಡುವುದು ಸರ್ವೇ ಸಾಮಾನ್ಯ. ಮಾಡಿದಾಗಲೇ ಸರಿ ತಪ್ಪು ಗೊತ್ತಾಗುವುದು, ಇದು ಮಾನವನ ಒಂದು ವಿಶೇಷ ಗುಣ. ಮಾಡಿದ ನಂತರ ತಪ್ಪಾದರೇ ತಿದ್ದಿಕೊಳ್ಳುವುದು ಅಗತ್ಯ.