12th September 2024
Share

TUMAKURU:SHAKTHIPEETA FOUNDATION

1988 ನೇ ಇಸವಿಯಲ್ಲಿ ನನ್ನ ತಂದೆ ದಿ.ಕೆ.ಎಸ್.ರಾಮಲಿಂಗಯ್ಯ ಮತ್ತು ತಾಯಿ ಶ್ರೀಮತಿ ಪಾರ್ವತಮ್ಮನವರಿಗೆ ಆರೋಗ್ಯ ಸರಿಯಿಲ್ಲಾದಾಗ, ಮಾಟ ಮಂತ್ರಗಳ ಮೇಲೆ ನಂಬಿಕೆ ಇದ್ದ ಕಾಲವಾದ್ದರಿಂದ, ನನಗೆ ಅದಲಗೆರೆ ಮಾಧ್ಯಮಿಕ ಪಾಠಶಾಲೆಯಲ್ಲಿ ಹಿಂದಿ ಗುರುಗಳಾಗಿದ್ದ ಕ್ಯಾತ್ಸಂದ್ರದ ಶ್ರೀ ಹನುಮಂತರಾಯಪ್ಪನವರ ಸಲಹೆ ಮೇರೆಗೆ ಓದಲು ಆರಂಭಿಸಿದ ದೇವಿಪುರಾಣವನ್ನು. ನನಗೆ ತಿಳಿದೋ, ತಿಳಿಯದೆಯೋ ನಿರಂತರವಾಗಿ 33 ವರ್ಷಗಳ ಕಾಲ ಪ್ರತಿ ದಿವಸ ದೇವಿ ಪುಸ್ತಕ ಪಾರಾಯಣ ಮಾಡಿದ ನೆಮ್ಮದಿ, ತೃಪ್ತಿ ನನಗೆ ಇದೆ.ಇದೇ ಶಕ್ತಿಪೀಠ ಕ್ಯಾಂಪಸ್ ಸ್ಥಾಪನೆಗೆ ಮೂಲ ಕಾರಣವೂ ಆಗಿದೆ.

ದಿನಾಂಕ:01.08.1988 ಪುಸ್ತಕ ಓದಲು ಆರಂಭಿಸಿದ ದಿನ, ಅಂದು ಆರಂಭದಲ್ಲಿ ಪುಸ್ತಕ ಓದುತ್ತಿರುವಾಗ ನಾನು ಓದಿz ಪ್ರಮುಖ ಪ್ರಮುಖ ಅಂಶ ನನ್ನ ತಲೆಗೆ ಹೋಗಿದ್ದು ‘ದೇವಿ ಪುಸ್ತಕವನ್ನು ಪಾರಾಯಣ ಮಾಡಿದರೆ ನೀವೂ ಅಂದುಕೊಂಡ ಕೆಲಸ ನೆರವೇರುತ್ತದೆ’. ಬಹುಷಃ ನಮ್ಮ ಪೋಷಕರಿಗೆ ಕಾಯಿಲೆ ವಾಸಿ ಮಾಡು ತಾಯಿ ಎಂದು ಕೇಳುವುದರ ಜೊತೆಗೆ ನಾನು ತಾಯಿಯಲ್ಲಿ ಅರಿಕೆ ಮಾಡಿಕೊಂಡಿದ್ದು ಬಿದರೆ ಹಳ್ಳ ಕಾವಲ್ ನಲ್ಲಿರುವ ಸುಮಾರು 930 ಎಕರೆ ಸರ್ಕಾರಿ ಜಮೀನಿನಲ್ಲಿ ಯಾವುದಾದರೂ ಒಂದು ಬೃಹತ್ ಉದ್ದಿಮೆ ಆರಂಭಿಸಲು ಶ್ರಮಿಸುವ ಶಕ್ತಿ ಕೊಡು ತಾಯಿ ಎಂಬುದಾಗಿತ್ತು.

ಇಂದು ಅದೇ ಜಮೀನಿನಲ್ಲಿ ಸುಮಾರು ರೂ 6400 ಕೋಟಿ ವೆಚ್ಚದ ಕೇಂದ್ರ ಸರ್ಕಾರ ಸ್ವಾಮ್ಯದ ಹೆಚ್.ಎ.ಎಲ್ ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಕ ಘಟಕದ ಲೋಕಾರ್ಪಣೆ ಮಾಡುವ ಸಮಯ ಒದಗಿ ಬಂದಿದೆ.ನಾನು ಅಂದೇ ನಮ್ಮೂರಿನ ಗ್ರಾಮದೇವತೆ ಹಾಗೂ ಕುಂಚಿಟಿಗರ ಮನೆ ದೇವರಾಗಿರುವ ಗಂಗಮಲ್ಲಮ್ಮನ ದೇವಾಲಯದಲ್ಲಿ ಪೂಜಿಸಿ ಅರಿಕೆ ಮಾಡಿಕೊಂಡಿದ್ದು, ಬಿದರೆಹಳ್ಳ ಕಾವಲ್ ನ ಯೋಜನೆ ಆರಂಭವಾಗುವ ವೇಳೆಗೆ ದೇವಾಲಯದ ಜಿರ್ಣೋದ್ಧಾರ ಮಾಡುವುದಾಗಿತ್ತು.

ಗಂಗಮಲ್ಲಮ್ಮ ದೇವಾಲಯದ ನೂತನ ಕಟ್ಟಡದ ಕಾಮಗಾರಿ ಆರಂಭವಾಗಿದ್ದರೂ, ಕಾರಣವೇ ಇಲ್ಲದೆ ಮನಸ್ತಾಪ ಆಗಿ, ಶಕ್ತಿದೇವತೆ ನನ್ನ ಮೂಲಕ ಶಕ್ತಿಪೀಠ ಕ್ಯಾಂಪಸ್ ಆರಂಭಿಸಲು ಪ್ರೇರಣೆ ನೀಡಿದ್ದಾರೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನನ್ನ ಅಭಿವೃದ್ಧಿ ಪಯಣಕ್ಕೂ 30 ವರ್ಷ ತುಂಬಿದೆ. ಇದೂ ಹೆಲಿಕ್ಯಾಪ್ಟರ್ ಘಟಕದ ಸ್ಥಾಪನೆಗೆ ಪೂರಕವಾಗಿದೆ. ಇನ್ನೂ ಆನೇಕರ ಶ್ರಮವಿದ್ದರೂ ಶ್ರೀ ಜಿ.ಎಸ್.ಬಸವರಾಜ್‍ರವರು ಈ ಘಟಕದ ಅಪ್ಪ-ಅಮ್ಮ ಆಗಿದ್ದಾರೆ.

ಶಕ್ತಿದೇವತೆಯ ಆದೇಶದ ಮೇರೆಗೆ ಶಕ್ತಿಪೀಠ ಕ್ಯಾಂಪಸ್ ನಲ್ಲಿ ನಿರ್ಮಾಣ ಮಾಡಿರುವ ಸುಮಾರು 475 ಮೀಟರ್ ರಸ್ತೆಗೆ, ದೇವಿ ಪುಸ್ತಕ ಪಾರಾಯಣದ 33 ನೇ ವರ್ಷಾಚರಣೆಯ ದಿವಸವಾದ ದಿನಾಂಕ:01.08.2021 ರಂದು ನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ.

ಈ ರಸ್ತೆಗೆ ಈ ಕೆಳಕಂಡ ಯಾವುದಾರೂ ಒಂದು ಹೆಸರು ಅಥವಾ ತಾವುಗಳು ಸೂಚಿಸುವ ಉತ್ತಮವಾದ ಹೆಸರನ್ನು ನಾಮಕರಣ ಮಾಡುವ ಮೂಲಕ, ಇನ್ನೂ ಮುಂದೆ ದೇವಿ ಪುರಾಣ ಪುಸ್ತಕ ಪಾರಾಯಣ ಮಾಡುವುದರ ಜೊತೆಗೆ, ಶಕ್ತಿಪೀಠ ಕ್ಯಾಂಪಸ್‍ಗೆ ಹೋದ ದಿನವೆಲಾ,್ಲ ಈ ರಸ್ತೆಯಲ್ಲಿ ನಡೆಯುವ ಮೂಲಕ ಒಂದು ಹೊಸ ಸಂಪ್ರದಾಯ ಹುಟ್ಟು ಹಾಕಲಾಗುವುದು. ಯಾರೇ ಈ ಕ್ಯಾಂಪಸ್‍ಗೆ ಬಂದರೂ 108 ಶಕ್ತಿಪೀಠಗಳ, 12 ಜ್ಯೋತಿರ್ಲಿಂಗಗಳ, 3 ಸಾಯಿಬಾಬಾರವರ, ಹನುಮಂತನ, ಜಲಲಿಂಗದ, ಕೃತಕ ಭಾರತ ನಕ್ಷೆಯ, ಅರಭ್ಬಿ ಸಮುದ್ರ, ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರಗಳ, ಹೋಮದ ಸ್ಥಳ, ದೇವಾಲಯ ಹಾಗೂ ದೇಶದ 30 ನದಿಜೋಡಣೆ ಪ್ರಾತ್ಯಾಕಿಕೆಯ ಸುತ್ತಲೂ  ಪ್ರದಕ್ಷಿಣೆ ಮಾಡಲು ಅನೂಕೂಲವಾಗುವ  ರೀತಿಯಲ್ಲಿ ನಿರ್ಮಾಣ ಮಾಡಿರುವ ರಿಂಗ್ ರಸ್ತೆಯಲ್ಲಿ ಪ್ರದಕ್ಷಿಣಿ ಮಾಡುವುದು ಸಂಪ್ರದಾಯವಾಗಲಿದೆ. 

ಈ ರಸ್ತೆಯ ಸುತ್ತಲೂ ಸುಮಾರು 500 ಕ್ಕೂ ಹೆಚ್ಚು ಜಾತಿಯ ಔಷಧಿ ಮತ್ತು ವಿವಿಧ ಜಾತಿಯ ಗಿಡಗಳನ್ನು ಹಾಕುವ ಕೆಲಸ ಆರಂಭವಾಗಿದೆ. ಈಗಾಗಲೇ ಸುಮಾರು 200 ಜಾತಿಯ ಗಿಡಗಳು ‘ನಗು ನಗುತಾ ಬೆಳೆಯಲು ‘ಆರಂಭಿಸಿವೆ.

83 ವರ್ಷಕ್ಕೆ ಕಾಲಿಟ್ಟಿರುವ ನಮ್ಮ ತಾಯಿ ಶ್ರೀ ಮತಿ ಪಾರ್ವತಮ್ಮನವರಿಗೆ, ಈ ರಸ್ತೆಯ ಸುತ್ತಾ ನಡೆಯಲು ಶಕ್ತಿ ಇಲ್ಲದಿದ್ದರೂ, ಕಡೇ ಪಕ್ಷ ವಾಹನದಲ್ಲಿ ಪ್ರದಕ್ಷಿಣೆ ಮಾಡುವ ಮೂಲಕ ಚಾಲನೆ ನೀಡಲಾಗುವುದು.ಇವರ ಜೊತೆಯಲ್ಲಿ ಶಕ್ತಿಪೀಠ ಸ್ಥಾಪನೆಗೆ ಕನಸಿನ ಬೀಜ ಬಿತ್ತಿದ  ಶ್ರೀ ಹನುಮಂತರಾಯಪ್ಪನವರನ್ನು ಆಹ್ವಾನಿಸಲಾಗುವುದು. ತಮ್ಮನ್ನೂ ಕೂಡ.

 ‘ತಾಯಿ ದೇವಿಯ ಕೆಲಸದಲ್ಲಿ ಯಾವ ಆಶಾಡ, ಶೂನ್ಯ, ರಾಜಯೋಗ ಎನ್ನದೇ 33 ನೇ ವರ್ಷಾಚರಣೆಯ ದಿನವನ್ನು, ಯಾವುದೇ ಅಬ್ಬರವಿಲ್ಲದೆ, ಆಡಂಬರವಿಲ್ಲದೆ, ಈ ರೀತಿ ಆರಂಭಿಸಲು ಯೋಚಿಸಲಾಗಿದೆ. ನನ್ನ ಕೆಲವು ಸ್ನೇಹಿತರು ರಾಜಯೋಗದ ದಿವಸ ಮಾಡಿ. ಈ ದಿನವೇ ವರ್ಷಾಚರಣೆ ಮಾಡಬೇಕಾ? ಎಂದು ಸಲಹೆ ನೀಡುತ್ತಿದ್ದಾರೆ. ನೀವೂ ಏನು ಹೇಳುವಿರಿ?

ಯಾವ ಹೆಸರು ಇಡೋಣ? ತಾವೂ ಸಲಹೆಗಳನ್ನು ನೀಡಬಹುದು. ಇಲ್ಲಿ ಬರೆದಿರುವ ಪ್ರತಿಯೊಂದು ಹೆಸರಿನ ಬಗ್ಗೆ ಆಸಕ್ತರ ಜೊತೆ ಸಮರ್ಥನೆ ನೀಡುವ ಮೂಲಕ ಚರ್ಚೆ ಮಾಡಲು ಅವಕಾಶವಿದೆ. ನೀವೂ ಸೂಚಿಸುವ ಹೆಸರು ಉತ್ತಮವಾಗಿದ್ದರೆ ಅದನ್ನೇ ಇಡೋಣ?

1.            ಶಕ್ತಿಪೀಠ ಮಾರ್ಗ್.

2.            ಜಲಪೀಠ ಮಾರ್ಗ್.

3.            ಅಭಿವೃದ್ಧಿ ಪೀಠ ಮಾರ್ಗ್

4.            ಶಕ್ತಿಪೀಠ ಪ್ರದಕ್ಷಿಣಿ ಪಾಥ್.

5.            ಧನ್ವಂತರಿ ಮಾರ್ಗ,

6.            ಯುಮಿನಿಟಿ ವೇ.

7.            ಆರೋಗ್ಯ ಪಥ.

8.            ಸ್ವರ್ಗಪಥ.

9.            ನವಗ್ರಹ ಪ್ರದಕ್ಷಿಣೆ ಮಾರ್ಗ.

10.         ಸಪ್ತಮಾತೃಕೆಯರ ಪಥ.

11.         ದೇವಿ ನೃತ್ಯ ಮಾರ್ಗ.

12.         ಆಯುಷ್ ಪಾಥ್.

13.         ಮಾತೆಯರ ಮಾರ್ಗ್.

14.         ಮನಶ್ಯಾಂತಿ ಪಥ.

15.         ಆಕ್ಸಿಜಿನ್ ವೇ.

16.         ಹೆಲ್ತ್ ವಾಕಿಂಗ್ ಪಾಥ್.

17.         ಆರೋಗ್ಯ ಜಾಗಿಂಗ್ ಪಾಥ್.

18.         ಥೆರಫಿ ಮಾರ್ಗ್. 

19.         ಶಿವ ಪಾರ್ವತಿ ಫಥ.

20.         ಗಣಪತಿ ಮಾರ್ಗ್. 

21.         ಗ್ರೀನ್ ಆಡಿಟ್ ಮಾರ್ಗ್.

22.         ಇನ್ನೋವೇಟೀವ್ ಮಾರ್ಗ್.

23.         75 @ 2022 ಡ್ರೀಮ್ ಪಾಥ್.

24.         ಸೋಶಿಯಲ್ ಜಸ್ಟೀಸ್ ಪಾಥ್.

25.         ನ್ಯೂ ಲೈಪ್‍ಸ್ಟೈಲ್ ಪಾಥ್.