22nd December 2024
Share

TUMAKURU:SHAKTHI PEETA FOUNDATION

ಕರ್ನಾಟಕ ಜೀವ ವೈವಿದ್ಯ ಮಂಡಳಿಯ ಜೀವ ವೈವಿದ್ಯ ದಾಖಲಾತಿ ಪ್ರಕಾರ ತುಮಕೂರು ಜಿಲ್ಲೆಯ ಪಾರಂಪರಿಕ ವೈದ್ಯರು, ನಾಟಿ ವೈದ್ಯರು ಮತ್ತು ಹಕೀಮರು ತುಮಕೂರು ಜಿಲ್ಲೆ ಪ್ರತಿಯೊಂದು ಗ್ರಾಮಗಳಲ್ಲಿರುವವರು ಒಗ್ಗಟ್ಟಾಗಿ ಒಂದೊಂದು ಪಂಚವಟಿ ವನ ಮಾಡುವ ಮೂಲಕ ಸಂಘಟನೆಯಾಗಲು ಚಾಲನೆ ನೀಡಲಾಯಿತು.

ತುಮಕೂರು ನಗರದ ಎಲ್ಲಾ ಉದ್ಯಾನವನಗಳಲ್ಲಿಯೂ ನೈಸರ್ಗಿಕ ಆಕ್ಸಿಜಿನ್ ಗೆ ಪೂರಕವಾದ ಪಂಚವಟಿ ಗಿಡಳನ್ನು ಹಾಕಲು ನಿರ್ಣಯ ಮಾಡಿದ್ದಾರೆ. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ನೇತೃತ್ವದಲ್ಲಿ ಪಾಲಿಕೆ ಮುಂಬಾಗದ ಉದ್ಯಾನವನದಲ್ಲಿ ಪಂಚವಟಿ ಗಿಡಗಳನ್ನು ಹಾಕಲಾಯಿತು.

ನಾಟಿ ವೈದ್ಯರುಗಳಾದ ಶ್ರೀ ಗುರುಸಿದ್ದಾರಾಧ್ಯ, ಶ್ರೀ ಹನುಮಂತಪ್ಪ, ಶ್ರೀ ಚಿಕ್ಕಣ್ಣ, ಶ್ರೀ ಷಣ್ಮುಕಪ್ಪ ಸೇರಿದಂತೆ ಹಲವಾರು ನಾಟಿ ವೈದ್ಯರು ಭಾಗವಹಿಸಿದ್ದರು.

ಡಾ.ಎಂ.ಎಸ್.ರುದ್ರಮೂರ್ತಿ, ಶ್ರೀ ಪ್ರಮೋದ್, ಶ್ರೀ ಗುಂಡಪ್ಪ, ಆಯುಷ್ ಜಿಲ್ಲಾ ಅಧಿಕಾರಿ ಶ್ರೀ ಸಂಜೀವ ಮೂರ್ತಿ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಶ್ರೀಮತಿ ಪವಿತ್ರ, ಪಾಲಿಕೆಯ ಶ್ರೀ ಮಹೇಶ್, ಶ್ರೀ ಆನಂದ್, ಶ್ರೀಮತಿ ನಿಖಿತ, ಕುಂದರನಹಳ್ಳಿ ರಮೇಶ್ ಸೇರಿದಂತೆ ಇನ್ನೂ ಮುಂತಾದವರು ಇದ್ದರು.