22nd December 2024
Share

TUMAKURU SHAKTHI PEETA FOUNDATION

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯು ಜಿಲ್ಲಾ ಮಟ್ಟದ ಮಾನಿಟರಿಂಗ್ ಸೆಲ್ ಆರಂಭಿಸಿ, ಪ್ರತಿಯೊಂದು ಇಲಾಖೆಯ, ಪ್ರತಿಯೊಂದು ಯೋಜನೆಯ ಜಿಐಎಸ್ ಲೇಯರ್ ಮಾಡಿ 2022 ರೊಳಗೆ ತುಮಕೂರು ಜಿಲ್ಲೆಯನ್ನು ಡಿಜಿಟಲ್ ಡಾಟಾ ಜಿಲ್ಲೆ’ಎಂದು ಘೋಶಿಸಲು ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ಈ ಹಿನ್ನಲೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಆರಂಭಿಸಿರವ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್ ಅನ್ನು ದಿಶಾ ಮಾನಿಟರಿಂಗ್ ಸೆಲ್ ಮಾಡಲು ಇರುವ ಸಾಧಕ-ಬಾಧಕಗಳ ಬಗ್ಗೆ ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿಯವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಈ ಸಂsÀದರ್ಭದಲ್ಲಿ ಎನ್.ಐ.ಸಿ ಯ ಶ್ರೀ ಹುಸೇನ್, ಐಸಿಸಿಸಿ ಶ್ರೀ ಅಶ್ವಿನ್ ರವರೊಂದಿಗೆ ಯೋಜನೆಯ ತಾಂತ್ರಿಕ ವಿಚಾರಗಳ  ವಿನಿಮಯ ಮಾಡಿಕೊಳ್ಳಲಾಯಿತು.ದಿಶಾ ಸಮಿತಿಯ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್ ರವರು ಹಾಜರಿದ್ದರು.

ಜಿಲ್ಲಾ ಮಟ್ಟದ ದಿಶಾ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಕೆ.ವಿದ್ಯಾಕುಮಾರಿರವರ  ಸೂಚನೆ ಮೇರೆಗೆ ತುಮಕೂರು ಮಾಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಪಿಡಿಯವರಾದ ಶ್ರೀಮತಿ ಶುಭರವರು ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಯೋಗಾನಂದ್ ರವರು ಸೇರಿದಂತೆ ನಾಲ್ಕು ಜನರು ಸಭೆ ನಡೆಸಿ, ನಂತರ ತುಮಕೂರು ನಗರದ ಶಾಸಕರಾದ ಶ್ರೀ ಜ್ಯೋತಿಗಣೇಶ್ ರವರೊಂದಿಗೂ ವಿಚಾರ ವಿನಿಮಯ ಮಾಡಿ ವಿವರವಾದ ಮಾಹಿತಿಯನ್ನು ಸಲ್ಲಿಸಲು ಶ್ರೀ ರಂಗಸ್ವಾಮಿಯವರು ಸಲಹೆ ನೀಡಲಾಯಿತು.

ಸುಮಾರು ರೂ 10.15 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಐಸಿಸಿಸಿ ಕಟ್ಟಡದ ಪ್ರಗತಿಯನ್ನು ವೀಕ್ಷಣೆ ಮಾಡಲಾಯಿತು ಜೊತೆಯಲ್ಲಿ ಇಂಜಿನಿಯರ್ ಶ್ರೀ ಚಿಕ್ಕವೀರಯ್ಯನವರು ಮತ್ತು ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೊತ್ತಮರಾವ್ ಇದ್ದರು.