24th May 2024
Share

TUMAKURU:SHAKTHI PEETA FOUNDATION

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಚಂದ್ರಹಳ್ಳಿಯಿಂದ ವಲಸೆ ಬಂದು, ಗುಬ್ಬಿ ತಾಲ್ಲೂಕು ಉದ್ದೆಹೊಸಕೆರೆ ಗ್ರಾಮದಲ್ಲಿ ಚಂದ್ರಹಳ್ಳಿಯವರ ಮನೆ ಎಂಬ ಹೆಸರು ಪಡೆದು, ಅವರ ಕುಟುಂಬದ ಹಿರಿಯ ಮಗನಾದ ದಿ.ರುದ್ರಣ್ಣನವರ ಆರು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ.

ಇವರಲ್ಲಿ ಮೂವರು ಹೆಣ್ಣುಮಕ್ಕಳ ಮಕ್ಕಳು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಗ್ಗನಡು ಕಾವಲ್ ನಲ್ಲಿ ಸುಮಾರು 30 ಎಕರೆ ಜಮೀನು ಕೊಂಡು ಒಂದು ವಿಶಿಷ್ಠವಾದ ಕ್ಯಾಂಪಸ್ ನಿರ್ಮಾಣ ಮಾಡುತ್ತಿರುವುದು ಇಡೀ ಚಂದ್ರಹಳ್ಳಿ ಕುಟುಂಬಕ್ಕೆ ಒಂದು ಹೊಸ ಚೈತನ್ಯ ಮೂಡಿದೆ.

ನಾಟಕದ ಜೀವನ ಬಿಡೋಣ, ಮಾನವೀಯತೆ ಎತ್ತಿ ಮೆರೆಯೋಣ, ನಾವುಗಳು ಇದೂವರೆಗೂ ಏನೇ ತಪ್ಪು ಮಾಡಿದ್ದರೂ ತಂದೆ-ತಾಯಿ’ ದೇವರು ಎಂಬ ಸಂದೇಶವನ್ನು ನಮ್ಮ ಕುಟುಂಬದಿಂದಲೇ ಸಾರುವ ಕೆಲಸ ಮಾಡೋಣ ಎಂಬ ಮಹತ್ವದ ಧೃಡ ನಿರ್ಧಾರ ಕೈಗೊಳ್ಳುವ ವೇದಿಕೆ ಶಕ್ತಿಪೀಠ ಕ್ಯಾಂಪಸ್ ಆಯಿತು.

ಹಿರಿಯರಾದ ಶ್ರೀ ಬಂಡಿಹಳ್ಳಿ ನಂಜೇಗೌಡರವರು, ಕುಂದರನಹಳ್ಳಿ ಶ್ರೀಮತಿ ಪಾರ್ವತಮ್ಮನವರು ಮತ್ತು ಗಂಗಸಂದ್ರದ ಶ್ರೀ ಸದಾಶಿವಯ್ಯನವರು ಸೇರಿದಂತೆ, ರುದ್ರಣ್ಣನವರ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸಾಕ್ಷಿಯಾದರು.

ತಂದೆ ತಾಯಿಯವರು ಪ್ರತಿಷ್ಟೆ ಮಾಡುತ್ತಾರೆ, ಮಗ ಸೊಸೆಯರು ಪ್ರತಿಷ್ಟೆ ಮಾಡುತ್ತಾರೆ, ಮಗಳು ಅಳಿಯ ರವರು ಸಹ ಪ್ರತಿಷ್ಟೆಗೆ ಒಳಗಾಗಿ ಇರುವ ಕಡಿಮೆ ಅವದಿಯ ಜೀವನವನ್ನು ನರಕ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಬಡತನ ಸಿರಿತನ ಮುಖ್ಯವಲ್ಲ, ನಮ್ಮ ನಿರ್ಧಿಷ್ಠ ಗುರಿ ನಿಲುವು ಮುಖ್ಯ ಎಂದು ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕ ಹಾಗೂ ರುದ್ರಣ್ಣನವರ ಹಿರಿಯ ಮಗಳಾದ ಶ್ರೀ ಮತಿ ಪಾರ್ವತಮ್ಮವರ ಮಗ ಕುಂದರನಹಳ್ಳಿ ರಮೇಶ್ ಅರಿವು ಮೂಡಿಸಿದರು.

ನೋಡಿ ನನ್ನನ್ನೆ ತೆಗೆದು ಕೊಳ್ಳಿ ತಿನ್ನಲು ಹಿಟ್ಟು ಇಲ್ಲದೆ, ಹತ್ತೊಂಭತ್ತು ಕಡೆ ಸೋರುವ ಮನೆಯಲ್ಲಿ ವಾಸಮಾಡಿಕೊಂಡೇ ಜೀವನದಲ್ಲಿ ಒಂದು ಸಾಧನೆ ಮಾಡಲೇ ಬೇಕು ಎಂಬ ಹಠದಿಂದ ಶಕ್ತಿಪೀಠ ಕ್ಯಾಂಪಸ್ ಮಾಡುವವರೆಗೂ ನಿಮ್ಮ ಕಣ್ಣು ಮುಂದೆಯೇ ಸಾಗಿದ್ದೇನೆ.

ಜೀವನದಲ್ಲಿ ಹಣ ಸಂಪಾದನೆ ಮಾಡುವುದು. ಅಧಿಕಾರದ ಗದ್ದುಗೆ ಹಿಡಿಯುವುದು ಮತ್ತು ಸಮಾಜ ಸೇವೆ ಮಾಡುವುದು ಸಾಧನೆಯೇ. ಆದರೇ ಮೊದಲ ಎರಡಕ್ಕೂ ಆಡಂಬರದ ಜೀವನದ ಜೊತೆಗೆ ಅಲ್ಪ ತೃಪ್ತಿ ಇದೆ. ನಿಸ್ವಾರ್ಥ ಸಮಾಜ ಸೇವೆಯ ತೃಪ್ತಿ ನಿeಕ್ಕೂ ಮನಸ್ಸಿಗೆ ನೆಮ್ಮದಿ ತರಲಿದೆ. ಅದನ್ನು ಅನುಭವಿಸಿದವರಿಗೆ ಮಾತ್ರಗೊತ್ತು.

ಆಣಕ ಮಾಡುವವರಿಗೆ, ಟೀಕೆ ಮಾಡುವವರಿಗೆ,  ಸುಖಾ ಸುಮ್ಮನೆ ಆರೋಪ ಮಾಡುವವರಿಗೆ ಏನುಗೊತ್ತು ಎಂದು ಪ್ರತಿಪಾದಿಸಿದರು. ಈ ದಿನ ಬಾಷಣ ಮಾಡುವವರು ಯಾರು ಇಲ್ಲಿ ಇಲ್ಲ. ಕಾಯಕ ಮಾಡುವವರು ಮಾತ್ರ ಇಲ್ಲಿದ್ದಾರೆ. ಬಾಯಲ್ಲಿ ಮಾತನಾಡಿ, ನಿಜ ಜೀವನದಲ್ಲಿ ಪಾಪಿಗಳಾಗಿ ವರ್ತಿಸುವವರಿಗೆ ಈ ಕ್ಯಾಂಪಸ್ ಬಾಗಿಲು ಸದಾ ಮುಚ್ಚಿರುತ್ತದೆ.

ಕಟ್ಟಡ ನಿರ್ಮಾಣ ಆದ ಮೇಲೆ ಪ್ರತಿ ತಿಂಗಳಿನಲ್ಲಿ ಕನಿಷ್ಟ ಎರಡು ದಿವಸವಾದರೂ ನಮ್ಮ ಕುಟುಂಬದ ಎಲ್ಲಾ ಸದ್ಯಸ್ಯರು ಇಲ್ಲಿ ಸೇರೋಣ. ಇಲ್ಲಿಯೇ ಬೆಳೆಯುವ ಸಾವಯವ  ತರಕಾರಿ, ದವಸ ಧಾನ್ಯಗಳ ತಿಂಡಿ, ತಿನಿಸು ತಿನ್ನೋಣ. ನಾಟಿ ಹಸುವಿನೊಂದಿಗೆ, ಮರಗಿಡಗಳೊಂದಿಗೆ ಮಾತನಾಡೋಣ ಇದುವೇ ಜೀವನ ಎಂದು ಶ್ರೀ ಎಸ್.ಪಿ.ರಾಜೇಶ್ ತಿಳಿಸಿದರು.

ಯಾವ ಕುಟುಂಬದಲ್ಲಿಯೇ ಆಗಲಿ ತಂದೆ ತಾಯಿ ಜೊತೆ ಸಮಸ್ಯೆಗಳಿದ್ದರೆ, ನಾವೇ ಕುಳಿತು ಪರಿಹಾರ ಕಂಡುಕೊಳ್ಳೋಣ ಎಂಬ ನಿರ್ಧಾರಕ್ಕೂ ಬಂದರು.

ನಮ್ಮ ಕುಟುಂಬದ ಎಲ್ಲಾ ಸಂಭಂದಿಕರೂÀ ಸೇರಿದಂತೆ ವರ್ಷದ 365 ದಿವಸಕ್ಕೂ, 365 ಜನರ ತಂಡ ಮಾಡಿ, ಪ್ರತಿ ದಿನ ಅಗ್ನಿಹೋತ್ರ ಹೋಮವನ್ನು ಒಬ್ಬೊಬ್ಬರ ಹೆಸರಿÀನಲ್ಲಿ  ಮಾಡೋಣ, ಒಬ್ಬೋಬ್ಬರ ಹೆಸರಿನಲ್ಲಿಯೂ ಒಂದೊಂದು ಗಿಡ ನಿರ್ವಹಣೆ ಮಾಡೋಣ.

ಮುಂದಿನ ನವರಾತ್ರಿ ವೇಳೆಯಲ್ಲಿ ಒಂದು ದಿವಸ 365 ಜನರು ಇಲ್ಲಿ ಸೇರಿ ಅಂತಿಮ ರೂಪುರೇಷೆ ಮಾಡಿಕೊಳ್ಳೋಣ ಎಂಬ ಸಲಹೆಯನ್ನು ಎಲ್ಲಾ ಹೆಣ್ಣುಮಕ್ಕಳು ನೀಡಿದರು.

ಕಾವಲರ ಮನೆ ಮತ್ತು ಚಂದ್ರಹಳ್ಳಿ ವಂಶಸ್ಥರು ಸೇರಿದಂತೆ 365 ಜನರ ಪಟ್ಟಿ ಮಾಡುವ ಕೆಲಸವನ್ನು ದಿ.ರುದ್ರಣ್ಣನವರ ಎಲ್ಲಾ ಆರು ಜನ ಹೆಣ್ಣು ಮಕ್ಕಳ ಗಂಡು ಮಕ್ಕಳಿಗೆ ನೀಡಲಾಯಿತು. ಮುದ್ದಪುರದ ಶ್ರೀ ಶಿವಣ್ಣನವರು ಸಂಚಾಲಕರಾಗಿ ನೇಮಿಸಲಾಯಿತು. ದಾಸೋಹದ ಹೊಣೆಗಾರಿಕೆಯನ್ನು ಶ್ರೀ ರೂಪೇಶ್ ರವರಿಗೆ ನೀಡಲಾಯಿತು.