12th September 2024
Share

TUMAKURU:SHAKTHI PEETA FOUNDATION

ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. 2014-15 ರಲ್ಲಿ ದೇಶದ ಚುಕ್ಕಾಣಿ ಹಿಡಿದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು 2022 ರೊಳಗೆ ದೇಶದ ಯಾರೊಬ್ಬರೂ ನನಗೆ ಸ್ವಂತ ಮನೆಯಿಲ್ಲ ಎಂದು ಕೊರಗಬಾರದು.

ಎಲ್ಲರಿಗೂ 2022 ರೊಳಗೆ ಸ್ವಂತ ಸೂರು ಇರಲೇ ಬೇಕು ಎಂದು ಹೌಸಿಂಗ್ ಫಾರ್ ಆಲ್ ನಗರ ಮತ್ತು ಗ್ರಾಮೀಣ 2022 ಘೋಷಣೆ ಮಾಡಿದ ‘ಕನಸುಗಾರ MODIಯವರು.’

ಹಾಗಾದರೇ ವಸತಿ ಸಹಿತರಿಗೆ ಮೋಸಮಾಡುತ್ತಿರುವ ‘MOSA ಗಾರರು ಯಾರು?’

ನಾಚಿಕೆಯಾಗುವುದಿಲ್ಲವೇ ನಿಮಗೆ? ಬಡವರ ಮೋಸಗಾರರು ಎಂದರೆ ತಪ್ಪಾಗುತ್ತದೆಯೇ?

  1. ಗ್ರಾಮಪಂಚಾಯಿತಿ ಸದಸ್ಯ.
  2. ಗ್ರಾಮಪಂಚಾಯಿತಿ ಅಧ್ಯಕ್ಷ.
  3. ತಾಲ್ಲೂಕು ಪಂಚಾಯಿತಿ ಸದಸ್ಯ.
  4. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ.
  5. ಜಿಲ್ಲಾ ಪಂಚಾಯಿತಿ ಸದಸ್ಯ.
  6. ಜಿಲ್ಲಾ ಪಂಚಾಯಿತಿ ಅಧ್ಯಕ್ಷ.
  7. ಮಹಾನಗರ ಪಾಲಿಕೆ ಸದಸ್ಯ.
  8. ಮಹಾನಗರ ಪಾಲಿಕೆ ಮೇಯರ್.
  9. ನಗರಸಭೆ ಸದಸ್ಯ.
  10. ನಗರಸಭೆ ಅಧ್ಯಕ್ಷ.
  11. ಪಟ್ಟಣ ಪಂಚಾಯಿತಿ ಸದಸ್ಯ.
  12. ಪಟ್ಟಣ ಪಂಚಾಯಿತಿ ಅಧ್ಯಕ್ಷ.
  13. ವಿಧಾನಸಭಾ ಸದಸ್ಯ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ.
  14. ಆಶ್ರಯ ಸಮಿತಿ ಸದಸ್ಯ.
  15. ಜಿಲ್ಲಾ ಉಸ್ತುವಾರಿ ಸಚಿವ.
  16. ಲೋಕಸಭಾ ಸದಸ್ಯ ಹಾಗೂ ದಿಶಾ ಸಮಿತಿ ಅಧ್ಯಕ್ಷ.

2015 ರಿಂದ ತುಮಕೂರು ಜಿಲ್ಲೆಯಲ್ಲಿ ಯಾವ ಗ್ರಾಮದಲ್ಲಿ ಅಥವಾ ವಾರ್ಡ್ ಗಳಲ್ಲಿ ಎಷ್ಟು ಜನ ನಿವೇಶನ ರಹಿತರು ಇದ್ದಾರೆ. ಎಷ್ಟು ಜನ ವಸತಿ ರಹಿತರು ಇದ್ದಾರೆ. ನಿಖರವಾದ ಪಟ್ಟಿ ಮಾಡಲು ನಿಮಗೆ ಸಾಧ್ಯವಾಗಿಲ್ಲ ಏಕೆ?

ಗ್ರಾಮವಾರು ಅಥವಾ ವಾರ್ಡ್‍ವಾರು ಎಷ್ಟು ಎಕರೆ ನಿವೇಶನಕ್ಕಾಗಿ ಜಮೀನು ಅಗತ್ಯವಿದೆ.

ಸರ್ಕಾರಿ ಜಮೀನು ಲಭ್ಯವಿದೆಯೇ?

ಅಥವಾ ಖಾಸಗಿ ಜಮೀನು ಭೂ ಸ್ವಾಧೀನ ಮಾಡಿಕೊಳ್ಳ ಬೇಕಾ?

ಇಷ್ಟು ನೀವೂ ಮಾಡಬೇಕಾದ ಕೆಲಸ ನಿಮಗೆ ಇದೂವರೆಗೂ ಮಾಡಲು ಏಕೆ ಸಾದ್ಯವಾಗಿಲ್ಲ.

ನಂತರದ ಕೆಲಸ ಅಂದರೆ  ಭೂ ಸ್ವಾಧಿನಕ್ಕೆ ಹಣ ಮತ್ತು ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವ ಕೆಲಸ ರಾಜ್ಯ ಮತ್ತು ಕೇಂದ್ರ ಸರ್ಕಾರದ್ದು.

2014 ರಿಂದ 2021 ರವರೆಗೂ ನಿಮಗೆ ಈ ಕೆಲಸ ಮಾಡಲು ಸಾದ್ಯವಾಗಿಲ್ಲ ಎಂದರೆ ಏನರ್ಥ?

ದೇಶದ ಪ್ರಧಾನಿಯವರೇ ಸ್ವತಃ ಘೋಷಣೆ ಮಾಡಿದ ಯೋಜನೆ ಯಶಸ್ವಿ ಮಾಡಲು ಸಾದ್ಯವಾಗಿಲ್ಲ ಎಂದರೆ ನಿಮಗೆ ಈ ಸ್ಥಾನಗಳು ತೃಪ್ತಿ ತಂದಿವೆಯಾ?

ಕೆಲಸ ಮಾಡದೇ ಇರುವ ನಿಮ್ಮನ್ನೆಲ್ಲಾ MOSA ಗಾರರು’ ಎನ್ನಬೇಕೆ?

ಬಡವರ ಪಾಲಿನ ದೇಶದ್ರೋಹಿಗಳು’ ಎನ್ನ ಬೇಕೆ?

 ‘ಗ್ರಾಮದಲ್ಲಿ ಅಥವಾ ವಾರ್ಡ್ ಗಳಲ್ಲಿ ಅಥವಾ ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಕೆಲಸ ಮಾಡಿರುವವರಿಗೆ, ನಾಗರೀಕ ಸನ್ಮಾನ ಮಾಡೋಣ, ಉಳಿದವರಿಗೆ ಏನು ಮಾಡಬೇಕು? ಓದುಗರು ಹೇಳ ಬೇಕು.’

ನಾನು ನಿಮ್ಮನ್ನು ಬಿಡಲಾರೆ? ಎನ್ನುತ್ತಿದ್ದಾರೆ ಸಂಸದರು, ಆಶ್ರಯ ಸಮಿತಿ ಅಧ್ಯಕ್ಷರುಗಳು—?

ದಿನಾಂಕ:21.09.2019 ರಿಂದ ಇಲ್ಲಿಯವರೆಗೂ ಶ್ರೀ ಜಿ.ಎಸ್.ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಪ್ರತಿ ಸಭೆಯಲ್ಲಿಯೂ ಚರ್ಚಿಸಿದರೂ ಇನ್ನೂ ಗ್ರಾಮವಾರು ಮತ್ತು ವಾರ್ಡ್‍ವಾರು ನಿಖರವಾದ ನಿವೇಶನ ರಹಿತರ ಮತ್ತು ವಸತಿ ರಹಿತರ ಮಾಹಿತಿ ಪಡೆಯಲು ಸಾದ್ಯವಾಗಿಲ್ಲ ಎಂದರೆ ದಿಶಾ ಸದಸ್ಯನಾದ ನನ್ನನ್ನು ನೀವೂ ಯಾವುದರಲ್ಲಿ ಹೋಡೆಯ ಬೇಕು ಹೇಳಿ?

‘ದಿಶಾ ಸಭೆಯಲ್ಲಿ ಕಟು ಸತ್ಯವನ್ನು ಕೇಳಿದರೆ ನಾನು ಖಳನಾಯಕ? ವಿರೋಧ ಪಕ್ಷದ ನಾಯಕನಿದ್ದಂತೆ? ನಮ್ಮನ್ನು ಗೋಳು ಹುಯಿದುಕೊಳ್ಳುತ್ತಾನೆ?’

ದಿಶಾ ಸಭೆಯಲ್ಲಿ ಅವರು ಹಾಕಿದ ಕೂಳು ತಿಂದು ಬರಬೇಕಾ? ಅಥವಾ ದೇಶದ ಪ್ರಧಾನಿಯವರು ಘೋಷಣೆ ಮಾಡಿದ ಯೋಜನೆಯ ವೈಫಲ್ಯ ಎತ್ತಿಹಿಡಿಯ ಬೇಕಾ? ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:07.09.2021 ರಂದು ನಿವೇಶನ ಮತ್ತು ವಸತಿ ರಹಿತರ ಯೋಜನೆಗಳಿಗೆ ಸಂಭಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಮಾತ್ರ ದಿಶಾ ಸಭೆಗೆ ಕರೆದು ಚರ್ಚಿಸಲಿದ್ದಾರೆ. ಯಾರ್ಯಾರು ಏನು ಮಾಡಿದ್ದಾರೆ ನೋಡೋಣ