22nd November 2024
Share

TUMAKURU:SHAKTHIPEETA FOUNDATION

2014-2015 ರಲ್ಲಿ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು 2022 ರೊಳಗೆ ದೇಶದ ಎಲ್ಲರಿಗೂ ಸೂರು ಎಂಬ ಘೋಷಣೆ ಮಾಡಿದ್ದು ಇತಿಹಾಸ. ಅದಕ್ಕೂ ಹಿಂದೆಯೂ ಹಲವಾರು ಸ್ಕೀಮ್‍ಗಳು ಇದ್ದವು.

2021 ಬಂದರೂ, ಇಡೀ ದೇಶ, ರಾಜ್ಯ, ಜಿಲ್ಲೆ ಅಥವಾ ವಿಧಾನ ಸಭಾ ಕ್ಷೇತ್ರ ಬೇಡ ಕೊನೆ ಪಕ್ಷ ಯಾವ ಗ್ರಾಮದಲ್ಲಿ ಶೇ 100 ರಷ್ಟು ಜನಕ್ಕೆ ನಿವೇಶನ ಅಥವಾ ವಸತಿ ಇದೆ ಎಂದು ಗ್ರಾಮವಾರು ಅಥವಾ ವಾರ್ಡ್‍ವಾರು ಘೋಷಣೆ ಮಾಡುವ ತಾಕತ್ತು ಅಧಿಕಾರಿಗಳಿಗೆ ಇಲ್ಲವೇ? ನಿವೆಲ್ಲಾ   ನಿಮ್ಮ ಹಿಂದಿನ ಜೀವನ ಮರೆತಿದ್ದಿರಾ? ಗುಡಿಸಲು ಜೀವನ ಇಷ್ಟು ಬೇಗ ಮರೆತು ಹೋಯಿತಾ? ಅಧಿಕಾರಿಗಳೇ ಇದು ನಿಮಗೆ ತೃಪ್ತಿ ತರುತ್ತದೆಯೇ? ಯೋಚಿಸಿ.

ಪ್ರೂಟ್ಸ್ ಯೋಜನೆಯಡಿಯಲ್ಲಿ ದೇಶದ್ಯಾಂತ ಪಹಣಿ ಮತ್ತು ಆಧಾರ್ ಜೋಡಣೆಯಾಗುತ್ತಿದೆ. ಸ್ವಾಮಿತ್ವ ಯೋಜನೆಯಡಿಯಲ್ಲಿ ದೇಶಾದ್ಯಾಂತ ನಿವೇಶನ ಮತ್ತು ವಸತಿ ಮಾಲೀಕತ್ವದ ಕಾರ್ಡ್ ನೀಡಲು ಯೋಜನೆ ರೂಪಿಸಿದೆ. ಇವೆರಡನ್ನಾದರೂ ಸರಿಯಾಗಿ ಮಾಡಿದರೆ ನಿಜಕ್ಕೂ ನಿವೇಶನ ರಹಿತರು ಅಥವಾ ವಸತಿ ರಹಿತರು ಎಷ್ಟು ಜನ ಇದ್ದಾರೆ ಎಂಬ ಮಾಹಿತಿ ನಿಖರವಾಗಿ ತಿಳಿಯಲಿದೆ.’

ಒಬ್ಬ ಇಓ ಹೇಳುತ್ತಿದ್ದರು ಸಾರ್ ನಿಜವಾಗಿ ಹೇಳಬೇಕೆಂದರೆ ಯಾವ ಗ್ರಾಮದಲ್ಲೂ ನಿವೇಶನ ರಹಿತರ ಕುಟುಂಬ ಇಲ್ಲವೇ ಇಲ್ಲ ಸಾರ್, ಮನೆ ಆಗುತ್ತಲೇ ಕುಟುಂಬದಲ್ಲಿ ವಿಭಾಗ ಪತ್ರ ಮಾಡಿಕೊಂಡು ಅರ್ಜಿ ಸಲ್ಲಿಸುತ್ತಾರೆ. ರಾಜಕಾರಣಿಗಳು ನಿಜ ಹೇಳಿದರೆ ನಮ್ಮನ್ನು ಹೆದರಿಸುತ್ತಾರೆ.

ನಿವೇಶನ ಮತ್ತು ಮನೆ ಇದ್ದರೂ ಕೊಡ್ರಿ ಅವನಿಗೊಂದು ಮನೆ ಎನ್ನುತ್ತಾರೆ. ನಾವೆಲ್ಲಾ ಪೋಲಿಟಿಕಲ್ ಅಧಿಕಾರಿ ಮತ್ತು ನೌಕರರಾಗಿದ್ದೇವೆ. ಸರ್ಕಾರ ಈಗಾಗಲೇ ನಿವೇಶನ ವಸತಿ ನೀಡಿದ್ದರೂ ಕೆಲವರು ಮಾರಿಕೊಂಡಿದ್ದಾರೆ. ಮಾರಿದ ಮೇಲೆ ಅವನು ಹೇಗೆ ನಿವೇಶನ ರಹಿತ ಆಗುತ್ತಾನೆ ಹೇಳಿ ಸಾರ್.

ನಾನು ಕುಂದರನಹಳ್ಳಿಯಲ್ಲಿ ಒಬ್ಬ ವ್ಯಕ್ತಿ ನಿವೇಶನ ರಹಿತ ಇದ್ದಾರೆ ನಿವೇಶನ ನೀಡಿ ಎಂದು ಹೇಳಿದ್ದೆ. ಒಮ್ಮೆ ಒಬ್ಬ ಅಧಿಕಾರಿ ಸಾರ್ ಅವರಿಗೆ ಪಂಚಾಯಿತಿಯಿಂದ ಈಗಾಗಲೇ ಈ ನಿವೇಶನ ನೀಡಿದ್ದು ಅವರು ಮಾರಿಕೊಂಡಿದ್ದಾರೆ ಮತ್ತೆ ಹೇಗೆ ಕೊಡುವುದು ಸಾರ್. ನೋಡಿ ಇವರು ಅವರ ಬಗ್ಗೆ ಅರ್ಜಿ ನೀಡಿದ್ದಾರೆ ಎಂದು ತೋರಿಸಿದರು. ನಾನು ಮತ್ತೆ ಏನು ಹೇಳಲು ಆಗಲಿಲ್ಲ.

ಮೋದಿಯವರು ಯೋಜನೆ ಘೋಷಣೆ ಮಾಡಿದರೂ, ಕೆಲಸ ಮಾಡದ ಅಧಿಕಾರಿಗೆ, ನೌಕರರಿಗೆ ಯಾವ ಶಿಕ್ಷೆ ನೀಡಲಾಗುವುದು ಎಂದು ಘೋಷಣೆ ಮಾಡಲಿಲ್ಲ. ‘ಇದೊಂದು ಹಲ್ಲು ಕಿತ್ತ ಹಾವು ಇದ್ದ ಹಾಗೆ ಇದೆ’. ನಿವೇಶನ ಅಥವಾ ಜಮೀನು ಇದ್ದವರಿಗೂ ನಿವೇಶನ ನೀಡಿದರೆ ಯಾವ ಕ್ರಮ ಕೈಗೊಳ್ಳ ಬೇಕು ಎಂಬ ಬಗ್ಗೆಯೂ ನಿಖರವಾದ ಕ್ರಮವಿಲ್ಲ.

ಸ್ವಾತಂತ್ರ್ಯ ಬಂದು 75 ವರ್ಷವಾದರೂ ಇನ್ನೂ ನಿವೇಶನ ರಹಿತರು, ವಸತಿ ರಹಿತರು ಎಂದು ಯೋಜನೆ ರೂಪಿಸುತ್ತಿದ್ದರೆ, ಇದೂ ಹೇಗೆ ಏನು? ಎಂಬುದೇ ಅರ್ಥವಾಗುತ್ತಿಲ್ಲ.

ಅಧಿಕಾರಿ ಮಿತ್ರರೇ ಗೌರಮ್ಮ ಬಂದ ಹಾಗೆ ಸಭೆಗೆ ಬಂದು, ಯಾವುದೋ ಕುಂಟು ನೆಪಹೇಳಿ ಸಭೆಯಿಂದ ಹೊರಗೆ ಹೋಗುವುದು ನಿಮಗೆ ನ್ಯಾಯವೇ? 2015 ರಲ್ಲಿ ಪೋರ್ಟಲ್‍ನಲ್ಲಿ ನಿವೇಶನ ಇಲ್ಲ ಎಂದು ಅಫ್ ಲೋಡ್ ಮಾಡಿದ್ದರೂ, ಇದೂವರೆಗೂ ಅವುಗಳನ್ನು ತಪಾಸಣೆ ಮಾಡಿಲ್ಲ ಎಂದರೇ, ಈ ಗೋಜಿಗೆ ಹೋಗದೇ ಇರುವ ನಿಮಗೆ ಸರ್ಕಾರ ನೀಡುವ ವೇತನ ಹೇಗೆ ಜೀರ್ಣವಾಗುತ್ತದೆ. ಇದು ಮಾನವೀಯತೆ ಪ್ರಶ್ನೆ ಅಲ್ಲವೇ? ನಿಜವಾದ ಪಲಾನುಭವಿಗಳಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ?

ಪ್ರತಿ ಗ್ರಾಮದ ಸರ್ಕಾರಿ ಜಮೀನು ಘೋಷಣೆ ಮಾಡಿ ಎಂದು ಸರ್ಕಾರ ನೂರಾರು ಪತ್ರ ಬರೆದರು ಇನ್ನೂ ಹಲವಾರು ಗ್ರಾಮಗಳಲ್ಲಿ ಘೋಷಣೆ ಮಾಡಿಲ್ಲವಂತೆ. ಘೋಷಣೆ ಮಾಡಿರುವ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇದ್ದರೆ, ನಿವೇಶನ ನೀಡಲು ನಿಮಗೆ ಏನಾಗಿದೆ?

ಸರ್ಕಾರಿ ಜಮೀನೂ ಇಲ್ಲ, ಅವರಿಗೂ ಸ್ವಂತ ಜಮೀನು ಇಲ್ಲ ಎನ್ನುವ ಕುಟುಂಬಕ್ಕೆ ನಿವೇಶನ ನೀಡಲು ಭೂ ಸ್ವಾಧೀನ ಅಥವಾ ಯಾವ ಗ್ರಾಮದಲ್ಲಿ ನಿವೇಶನ ಇದೆಯೋ ಅಲ್ಲಿ ಕೊಡಲು ಏಕೆ ಸಾದ್ಯಾವಾಗಿಲ್ಲ.

ನಿವೇಶನಕ್ಕೆ ನೀಡಿರುವ ಜಮೀನು ಪಹಣೆಯನ್ನು ಕೆಲವು ಕಡೆ ಮಾಡಿಲ್ಲವಂತೆ, ರೆವಿನ್ಯೂ ಅಧಿಕಾರಿಗಳೇ ನಿಮಗೆ ಏನಾಗಿದೆ. ನಿವೇಶನಕ್ಕಾಗಿ ನೀಡಿರುವ ಜಮೀನು ಕೆಲವು ಕಡೆ ಹಳ್ಳ ಕೊಳ್ಳ ಆಗಿದೆಯಂತೆ ಅದರಲ್ಲಿ ಬಡವರು ಹೇಗೆ ಮನೆ ಕಟ್ಟುತ್ತಾರೆ.

‘ಯೋಜನೆ ಘೋಷಣೆ ಮಾಡಿದ ಮೋದಿಯವನ್ನು ಟೀಕೀಸಬೇಕೆ? 2015 ರಿಂದ ರಾಜ್ಯಭಾರ ನಡೆಸಿದ ಮುಖ್ಯ ಮಂತ್ರಿಯವರನ್ನು ಟೀಕಿಸಬೇಕೆ? ಮೌನವಾಗಿರುವ ಅಧಿಕಾರಿ ಮತ್ತು ನೌಕರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾದ್ಯಾವಾಗಿಲ್ಲ ಎಂದರೆ ಇವರಿಗೆ ಪದವಿಗಳು ಏಕೆ ಬೇಕು?’

ದಿನಾಂಕ:21.10.2019 ರಿಂದ ನಡೆದ ಪ್ರತಿ ದಿಶಾ ಸಭೆಯಲ್ಲೂ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಖಡಕ್ ಆಗಿ ಸೂಚಿಸಿದ್ದಾರೆ. ಆದರೂ ಇದೂವರೆಗೂ ಪ್ರತಿ ಗ್ರಾಮವಾರು/ವಾರ್ಡ್ ವಾರು ನಿಖರವಾದ ಮಾಹಿತಿ ಆಶ್ರಯ ಸಮಿತಿಗಳಲ್ಲಿ ಲಭ್ಯವಿಲ್ಲ ಎಂದರೆ ಏಕೆ ಆಶ್ರಯ ಸಮಿತಿ ಇರಬೇಕು? ಕಾಟಚಾರಕ್ಕೆ ಏಕೆ ಸಭೆಗಳನ್ನು ನಡೆಸಬೇಕು?

ದಿನಾಂಕ:09.09.2021 ರಂದು ಸಂಸದರು ವಸತಿ ಮತ್ತು ನಿವೇಶನಗಳಿಗೆ ಸಂಭಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಮಾತ್ರ ಸಭೆ ಕರೆದಿದ್ದಾರೆ. ಗ್ರಾಮವಾರು ನಿಖರವಾದ ವಸ್ತು ಸ್ಥಿತಿ ಮಾಹಿತಿ ನೀಡದೇ ಇದ್ದಲ್ಲಿ ಸಭೆಗೆ ಅರ್ಥ ಬರುವುದಿಲ್ಲಾ. ಸಭೆಗೆ ಮೋದಲೆ ಗ್ರಾಮ ಪಂಚಾಯಿತಿವಾರು, ಪ್ರತಿ ಗ್ರಾಮಗಳ ಮತ್ತು ನಗರ ಸ್ಥಳಿಯ ಸಂಸ್ಥೆಗಳು ವಾರ್ಡ್‍ವಾರು, ವಸತಿ ಯೋಜನಾವಾರು ಮಾಹಿತಿಯನ್ನು ನೀಡಬೇಕಲ್ಲವೇ?

ಎಷ್ಟೆ ಕಷ್ಟವಾಗಲಿ 330 ಗ್ರಾಮ ಪಂಚಾಯಿತಿ ವಾರು ಮತ್ತು 11 ನಗರ ಸ್ಥಳೀಯ ಸಂಸ್ಥೆವಾರು ಮಾಹಿತಿ ಇರಲಿ. ಜಿಲ್ಲೆಯ ಯಾವುದೇ ಒಂದು ಗ್ರಾಮದ/ಒಂದು ವಾರ್ಡ್‍ನ  ನಿಖರವಾದ ಮಾಹಿತಿ ನೀಡದೇ ಇದ್ದಲ್ಲಿ, ವಸ್ತು ಸ್ಥಿತಿ ಮಾಹಿತಿ ನೀಡುವವರೆಗೂ  ನಾನಂತೂ ಸಭೆಯಿಂದ ಕದಲುವುದಿಲ್ಲಾ,

ಮಾಹಿತಿ ನೀಡದೇ ಇರುವ ಅಧಿಕಾರಿ ಮತ್ತು ನೌಕರರ ವಿರುದ್ಧ ನಿಯಾಮಾನುಸಾರ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಅಥವಾ ಎಸ್.ಪಿ.ಯವರು ಅರೆಸ್ಟ್ ಮಾಡಿ ನನ್ನನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ.ಜೈಲಿಗೆ ಹೋಗುತ್ತೇನೆ. ಹೇಳಿ ಅಧಿಕಾರಿ ಮಿತ್ರರೇ ನನಗೆ ಜೈಲೇ ಗತಿನಾ?

ಎರಡು ವರ್ಷದಿಂದ ನನಗೂ ಹೇಳಿ, ಹೇಳಿ ಸಾಕಾಗಿ ಹೋಗಿದೆ. ಮೋದಿಯವರ ಘೋಷಣೆ ಕೇಳಿ ತಲೆ ಕೆಟ್ಟಿದೆ. ದೇಶದ ಪ್ರಧಾನಿ ಇಷ್ಟು ಭಾರಿ ಹೇಳಿದರೂ ಜಪ್ಪಯ್ಯ ಎನ್ನದ ಆಡಳಿತದ ವಿರುದ್ದ ಸೆಟೆದು ನಿಲ್ಲಲೇ ಬೇಕು? ಎನಿಸಿದೆ.

ಆಶ್ರಯ ಸಮಿತಿ ಸಭೆ ಮಾಡಿಲ್ಲ ಎನ್ನುವ ಅಧಿಕಾರಿಗಳಿಗೆ 2014 ರಿಂದ ಇದೂವರೆಗೂ  ನಡೆದ ಆಶ್ರಯ ಸಮಿತಿ ಮಾಹಿತಿ ನೀಡಲು ಮೂರು ದಿಶಾ ಸಭೆಗಳಲ್ಲಿ ನಿರ್ಣಯ ಮಾಡಿದೆ ನೆನಪು ಇರಲಿ.

‘ಬಡವರಿಗಾಗಿ ನೀವೂ ಮೌನ ಮುರಿಯಿರಿ? 2022 ರೊಳಗೆ ಗುರಿ ತಲುಪೋಣ! ಎಲ್ಲರೂ ಮನಸ್ಸು ಮಾಡಿದರೇ ಮಾತ್ರ ಸಾಧ್ಯಾ!’