TUMAKURU:SHAKTHIPEETA FOUNDATION
ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡುವ ಘೋಷಣೆ ಮಾಡಿದ್ದಾರೆ. ಇದೊಂದು ಪವಾಡವೇ? ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಅಟ್ಟಹತ್ತುವವರೆಗೆ ಸಹಾಯ ಮಾಡಬಹುದು.ಬೆಟ್ಟ ಹತ್ತುವವರೆಗೆ ಹೇಗೆ ಸಹಾಯ ಮಾಡಲು ಸಾಧ್ಯ?
ರೈತರೇ ಜೀವನ ಶೈಲಿ ಬದಲು ಮಾಡಿಕೊಳ್ಳಬೇಕು. ವ್ಯವಸಾಯ ಪದ್ಧತಿಯಲ್ಲಿ ಕ್ರಾಂತಿಕಾರಕ ಹೆಜ್ಜೆ ಇಡಬೇಕು. ಅವರಿಗೆ ಇರುವ ಭೂಮಿಯ ಒಂದು ಇಂಚು ಜಾಗÀವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಈ ಬಗ್ಗೆ ರಾಜ್ಯದ ಪ್ರಗತಿ ಪರ ಕಾಯಕ ಮಾಡುವ (ಭಾಷಣ ಮಾಡುವ ಅಲ್ಲ) ರೈತರ ವೇದಿಕೆ ಸೃಷ್ಠಿ ಮಾಡಲು ಶಕ್ತಿಪೀಠ ಫೌಂಡೇಷನ್ ಮೊದಲ ಆಧ್ಯತೆ ನೀಡಲು ಚಿಂತನೆ ನಡೆಸಿದೆ.
ರೈತರಿಗೆ ಸಂಭಂಧಿಸಿದ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಪ್ರಾತ್ಯಾಕ್ಷಿಕೆಗಳನ್ನು ಆಯ್ಧ ರೈತರ ಜಮೀನಿನಲ್ಲಿ ಮಾಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ತೋಟಗಾರಿಕಾ ನಿರ್ದೇಶಕರಿಗೆ ಪತ್ರ ನೀಡಲಾಗಿದೆ. ಉಳಿದ ಇಲಾಖೆಗಳಿಗೂ ಮನವಿ ಮಾಡಲಾಗುವುದು. ಆಸಕ್ತ ರೈತರ ವಿಷನ್ ಗ್ರೂಪ್ ಗೆ ಉಚಿತವಾಗಿ ಸದಸ್ಯರಾಗಲು ಬಹಿರಂಗ ಮನವಿ.
‘ಅಧಿಕಾರಿಗಳು ಇಂದು ಪೊಲಿಟಿಕಲ್ ಅಧಿಕಾರಿಗಳಾಗಿದ್ದಾರೆ’. ನಿಜವಾದ ಅರ್ಹರಿಗೆ ಸೌಲಭ್ಯ ನೀಡಲು ವಿಫಲರಾಗಿದ್ದಾರೆ. ರಾಜಕಾರಣಿಗಳು ಶಿಫಾರಸ್ಸು ಮಾಡುವವರಿಗೆ ಮಾತ್ರ ಸೌಲಭ್ಯ ಎನ್ನುವಂತಾಗಿದೆ. ಸ್ವಾಭಿಮಾನಿ ರೈತರು ಸರ್ಕಾರದ ಬೆಂಬಲಕ್ಕೆ ಕೈಚಾಚದೆ ಅವರೇ ತಮ್ಮ ಹಾದಿ ಹಿಡಿದುಕೊಂಡಿದ್ದಾರೆ.
ಈ ಬಗ್ಗೆ ಅಧ್ಯಯನ ಮಾಡಲು ಒಂದು ತಂಡ ಮುಂದಾಗಿದೆ. ಹೆಸರು ಹೇಳಲು ಇಚ್ಚಿಸಿದ ಒಬ್ಬ ಅಧಿಕಾರಿ ತನ್ನ ಅನುಭವಗಳನ್ನು ಧಾರೆ ಎರೆಯಲು ಮುಂದಾಗಿದ್ದಾರೆ. ಅವರ ನಿಖರವಾದ ಅಭಿಪ್ರಾಯಗಳಿಗೆ ಸಲಾಂ ಹೊಡೆಯಲೇ ಬೇಕು! ಅವರ ಸೇವೆಯನ್ನು ಬಳಸಿಕೊಳ್ಳಲು ಯೋಚಿಸಲಾಗಿದೆ.