25th April 2024
Share

TUMAKURU:SHAKTHI PEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ತುಮಕೂರಿಗೆ ಬಂದಾಗ ತುಮಕೂರು ನಗರದಲ್ಲಿ ಜಮೀನು ನೀಡಿದರೆ ಜಯದೇವ ಹೃದಯ ಹಾಸ್ಪೆಟಲ್ ಮಂಜೂರು ಮಾಡಲಾಗುವುದು ಎಂದು ಹೇಳಿದ್ದಾರೆ, ಈ ಹಿನ್ನಲೆಯಲ್ಲಿ ಕೂಡಲೇ ಜಮೀನು ಗುರುತಿಸಲು ಸಲಹೆ ನೀಡಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ರವರು ಮಾತನಾಡಿ ನಗರದಲ್ಲಿ ಒಂದು ವಾರದೊಳಗೆ ಜಯದೇವ ಹಾಸ್ಪೆಟಲ್ ಗೆ ಜಮೀನು ಗುರುತಿಸಿ ನೀಡಲಾಗುವುದು ಎಂದರು.

ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿರುವ ಜಿಲ್ಲಾಧಿಕಾರಿ ಕಚೇರಿಗೂ ಸರ್ಕಾರಿ ಜಮೀನು ಗುರುತಿಸಲು ಸಂಸದರು ಸೂಚಿಸಿದರು.

ಕಿಬ್ಬನಹಳ್ಳಿ ಕ್ರಾಸ್ ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿಗೂ ಅಗತ್ಯವಿರುವ ಜಮೀನು ಗುರುತಿಸಲು ಸಂಸದರು ಸಲಹೆ ನೀಡಿದರು.

 ತುಮಕೂರು ನಗರದಲ್ಲಿ ವಿದ್ಯುತ್ ಕೇಬಲ್ ಭೂಮಿಯಿಂದ ಕೇವಲ ಅರ್ಧ ಅಡಿಗೂ ಕಡಿಮೆ ಆಳದಲ್ಲಿ ಹಾಕುತ್ತಿರುವ ಬಗ್ಗೆ ಬಿಸಿ, ಬಿಸಿ ಚರ್ಚೆ ನಡೆಯಿತು. ಸ್ಮಾರ್ಟ್ ಸಿಟಿ ಇಇ ಬಸವೇರಾಜೆ ಗೌಡರವರು ನೀಡಿದ ಅಸರ್ಮಪಕ ಉತ್ತರ ಮತ್ತು ಯಾವ ರೀತಿ ಇರಬೇಕು ಎಂಬ ಬೆಸ್ಕಾಂ ಇಇ ಶ್ರೀ ಜಗದೀಶ್ ರವರು ನೀಡಿದ ಉತ್ತರ ಹಾಗೂ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಸ್ಥಳ ವೀಕ್ಷಣೆ ಮಾಡಿ ಕೇಬಲ್ ಹಾಕುವ ಬಗ್ಗೆ ಇರುವ ಮಾರ್ಗದರ್ಶಿ ಸೂತ್ರಗಳನ್ನು ನೀಡಲು ಸೂಚಿಸಿದ್ದರೂ ಇದೂವರೆಗೂ ಏಕೆ ನೀಡಲಿಲ್ಲ ಬಸವೇರಾಜೆ ಗೌಡರವರೇ ಎಂಬ ಪ್ರಶ್ನೆ ನಿಜಕ್ಕೂ  ಸಂಸದರಿಗೆ ಕೋಪ ಭರಿಸಿತು. ಯಾರಾದರೂ ಸತ್ತರೇ ಯಾರು ಹೊಣೆಗಾರರು ನಿಮಗೆ ದೇವರು ಬುದ್ದಿಕೊಟ್ಟಿಲ್ಲವೇ ಎಂದು ಕಿಡಿಕಾರಿದರು. ಕೂಡಲೇ ಜಂಟಿ ಸ್ಥಳ ತನಿಖೆ ಮಾಡಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳ ಸೂಚಿಸಿದರು.

ದಿನಾಂಕ:29.09.2021 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಇನ್ನೂ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.ಶ್ರೀ, ಟಿ.ಆರ್.ರಘೋತ್ತಮರಾವ್ ಮತ್ತು ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.