19th May 2024
Share

TUMAKURU:SHAKTHIPEETA FOUNDATION

ಜಯದೇವ ಹೃದ್ರೋಗ ಆಸ್ಪತ್ರೆಗೆ ಜಮೀನು ನೀಡಲಿದ್ದಾರೆ ಎಂಬ ವರದಿಗೆ ಪೂರಕವಾಗಿ, ನಗರದ ಸರ್ಕಾರಿ ಜಮೀನುಗಳ ಸಂಶೋಧಕರೊಬ್ಬರಾದ ಶ್ರೀ ಬಸವರಾಜ್ ರವರು ನನಗೆ ಈ ಪಹಣಿ ಕಳುಹಿಸಿದ್ದಾರೆ.

ಅವರು ಈಗಾಗಲೇ ಬಹಳ ವರ್ಷಗಳಿಂದ ಈ ಜಮೀನು ಉಳಿಸಲು ಶ್ರಮಿಸುತ್ತಿದ್ದಾರಂತೆ. ಇದು ಸರ್ಕಾರಿ ಜಮೀನು ಎಂಬ ವಾದ ಅವರದ್ದು. ಅರ್ಜಿಕೊಟ್ಟರೂ ಜಿಲ್ಲಾಧಿಕಾರಿಗಳ ಕಚೇರಿಯಿಂದ ಯಾವುದೇ ಉತ್ತರ ಬಂದಿಲ್ಲ ಎನ್ನುತ್ತಾರೆ.

 ಅವರ ಖಡಕ್ ಮಾತು.

  1. ಈ ಜಮೀನು ಸರ್ಕಾರಿ ಆಸ್ತಿನಾ?
  2. ಸರ್ಕಾರ ಯಾರಿಗಾದರೂ ಮಂಜೂರು ಮಾಡಿದೆಯೇ?
  3. ಯಾವುದಾದರೂ ಭೂಕಬಳಿಕೆ ಲಾಭಿ ಇದೆಯಾ?
  4. ಸರ್ಕಾರಿ ಆಸ್ತಿ ಎಂದು ಅಧಿಕಾರಿಗಳು ಸುಮ್ಮನೆ ಇದ್ದರೆ ಅವರ ಮೇಲೆ ಕ್ರಿಮಿನಲ್ ಕೇಸು ಯಾಕೆ ಹಾಕಿಲ್ಲ.
  5. ನ್ಯಾಯಾಲಯದಲ್ಲಿ ಯಾರು, ಯಾರಿಗೆ ಕೇಸು ನಡೆದಿದೆ ಎಂಬ ಹಲವಾರು ಮಾಹಿತಿಗಳ ಪ್ರಶ್ನೆ ಅವರದ್ದಾಗಿದೆ.

ಅವರ ಉದ್ದೇಶ ಇಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣವಾಗಲಿ ಎಂಬುದಾಗಿದೆ.

ನಮ್ಮ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಮತ್ತು ರೆವಿನ್ಯೂ ಇಲಾಖೆ ಅಧಿಕಾರಿಗಳ ತಂಡ ಶೀಘ್ರವಾಗಿ ದಾಖಲೆ ಪರಿಶೀಲನೆ ನಡೆಸಲಿದ್ದಾರೆ ಎಂಬ ಅನಿಸಿಕೆ ನನ್ನದಾಗಿದೆ. ಕಾದು ನೋಡೋಣ?