6th December 2023
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್ ನಲ್ಲಿ ಭಾರತ ನಕ್ಷೆಯನ್ನು ಭೂಮಿಯ ಮೇಲೆ ನಿರ್ಮಾಣ ಮಾಡಿ, ಕೇಂದ್ರ ಸರ್ಕಾರ ಅಧ್ಯಯನ ಮಾಡುತ್ತಿರುವ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆಯನ್ನು ನಿರ್ಮಾಣ ಮಾಡುವ ಹಿನ್ನಲೆಯಲ್ಲಿ ದಿನಾಂಕ:22.11.2021 ರಂದು ಶಕ್ತಿಪೀಠ ಕ್ಯಾಂಪಸ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ತಂಡದಲ್ಲಿ ಇಇ ಶ್ರೀ ರಾಜೇಶ್ವರ ರಾವ್‍ರವರು, ಎಇ ಶ್ರೀ ಕೃಷ್ಣಮೂರ್ತಿಯವರು ಮತ್ತು ಶ್ರೀ ಶಿವಣ್ಣ ಕಲಡಗಿರವರು ಇದ್ದರು. ಶ್ರೀ ಸತ್ಯಾನಂದ್ ಯೋಜನೆಯ ಬಗ್ಗೆ ವಿವರಿಸಿದರು.

ದಿನಾಂಕ:22.09.2021 ರಂದು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಕಟ್ಟಡದ ಶಂಕುಸ್ಥಾಪನೆಯನ್ನು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ನೇತೃತ್ವದಲ್ಲಿ ಮಾಡಲಾಗಿತ್ತು. ಇಂದಿಗೆ ಮೂರು ತಿಂಗಳಾಯಿತು, ನಿರಂತರ ಮಳೆಯಿಂದಾಗಿ ಕಟ್ಟಡದ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ.

ನದಿ ಜೋಡಣೆಯ ಪ್ರತಿ ಸಭೆಯನ್ನು ಒಂದೊಂದು ರಾಜ್ಯದಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿದೆ. ಈ ಕಟ್ಟಡ ಪೂರ್ಣಗೊಂಡಲ್ಲಿ ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆ ವೀಕ್ಷಣೆ ಮತ್ತು ಸಭೆ ಎರಡನ್ನು ಮಾಡಬಹುದಾಗಿದೆ ಎಂಬ ಆಶಯ ನಮ್ಮದಾಗಿದೆ.

About The Author