11th December 2024
Share

G.S.BASAVARAJ. U.P.SING & KUNDARANAHALLI RAMESH

TUMAKURU:SHAKTHIPEETA FOUNDATION

ದೇಶದಲ್ಲಿ 7 ಮೆಗಾ ಇಂಡಸ್ಟ್ರಿಯಲ್ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಎಲ್ಲಾ ರಾಜ್ಯಗಳಿಂದಲೂ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರ ಹಿನ್ನಲೆಯಲ್ಲಿ ದೇಶದ 11 ರಾಜ್ಯಗಳು ಸುಮಾರು 20 ಮೆಗಾ ಇಂಡಸ್ಟ್ರಿಯಲ್ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಮಾಡಲು ಮುಂದೆ ಬಂದಿವೆಯಂತೆ.              

ಇನ್ನೂ ಮಾರ್ಗದರ್ಶಿ ಸೂತ್ರ ಬಿಡುಗಡೆಯಾಗಿಲ್ಲ, ಆಯ್ಕೆಗಾಗಿ  RANKING  ಪದ್ಧತಿ ಅಳವಡಿಸುವ ಚಿಂತನೆಯೂ ಕೇಂದ್ರ ಸರ್ಕಾರಕ್ಕೆ ಇದೆಯಂತೆ. ನಮ್ಮ ರಾಜ್ಯದಲ್ಲಿ ಈಗಾಗಲೇ ನಾಲ್ಕು ಜಿಲ್ಲೆಗಳ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇದೆಯಂತೆ.

 ತುಮಕೂರು, ವಿಜಯಪುರ, ಕಲುಬುರ್ಗಿ, ಮೈಸೂರು ಜಿಲ್ಲೆಗಳ ಜೊತೆಗೆ, ಇವೆಲ್ಲಕ್ಕಿಂತ ಹೆಚ್ಚಿನ ಮಹತ್ವ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರ ಶಿಗ್ಗಾವ್ ವಿದಾನಸಭಾ ಕ್ಷೇತ್ರದ ವ್ಯಾಪ್ತಿಗೆ ಇದೆ ಎಂಬ ಸುದ್ದಿಯೂ ಇದೆಯಂತೆ.

ಯಾವ ಜಿಲ್ಲೆಗೆ ಅದೃಷ್ಟ ಬರಲಿದೆ ಕಾದು ನೋಡೋಣ. ಕರ್ನಾಟಕ ರಾಜ್ವಂವತೂ ಕೇಂದ್ರದಿಂದ ಯೋಜನೆ ಮಂಜೂರು ಮಾಡಿಸಲು ಮುಂಚೂಣೆಯಲ್ಲಿರುವುದು ಒಳ್ಳೆಯ ಬೆಳವಣಿಗೆ.

ಈ ಬಗ್ಗೆ ದೆಹಲಿಯಲ್ಲಿ ಟೆಕ್ಸ್ ಟೈಲ್ ಸಚಿವಾಲಯದ ಕಾರ್ಯದರ್ಶಿಯವರಾದ ಶ್ರೀ ಯು.ಪಿ.ಸಿಂಗ್ ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲೆಗೆ ಯೋಜನೆ ಮಂಜೂರು ಮಾಡಲು ಸಮಾಲೋಚನೆ ನಡೆಸಿದರು.