25th September 2023
Share

VEDANANDAMURTHY, ASHOK AND KUNDARANAHALLI RAMESH

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್, ಭಾರತ ಸರ್ಕಾರದ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ ಬಯೋಡೈವರ್ಸಿಟಿ ಸಮ್ಮೇಳನ ನಡೆಸಲು ಚಿಂತನೆ ನಡೆಸಿದೆ. ಈ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೋಕಿನ ಮೂಕಾನನ ರೆಸಾರ್ಟ್ ಗೆ ಭೇಟಿ ನೀಡಿ ರೆಸಾರ್ಟ್‍ನ ಪ್ರಮುಖರಾದ ಶ್ರೀ ವೇದಾನಂದಮೂರ್ತಿರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸಮ್ಮೇಳನ ನಡೆಸಬೇಕೋ ಅಥವಾ ಬಯಲು ಸೀಮೆಯಲ್ಲಿ ಸಮ್ಮೇಳನ ನಡೆಸಬೇಕೋ ಎಂಬ ಚರ್ಚೆ ಆರಂಭವಾಗಿದೆ. ದೇಶದ 37 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ತಲಾ 3 ಜನರು ಮತ್ತು ಕರ್ನಾಟಕ ರಾಜ್ಯದ 31 ಜಿಲ್ಲೆಗಳ ತಲಾ 2 ಪ್ರತಿನಿಧಿಗಳಂತೆ ಸುಮಾರು 200 ಕ್ಕೂ ಹೆಚ್ಚು ಜನ ಭಾಗವಹಿಸುವ ನೀರಿಕ್ಷೆ ಇದೆ.

ಮೂಕಾನನ ರೆಸಾರ್ಟ್ ಸುತ್ತಮುತ್ತ ಇರುವ ಔಷಧಿಯ ಸಸ್ಯಗಳು, ಪತಂಗಗಳನ್ನು ಗುರುತಿಸುವ  ಚಿಂತನೆ ಇದೆ.ಪಶ್ಚಿಮ ಘಟ್ಟದಲ್ಲಿನ ಬಯೋಡೈವರ್ಸಿಟಿ ಸಂಪತ್ತು ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಈ ಹಿನ್ನಲೆಯಲ್ಲಿ ಇದೊಂದು ಬಯೋ ಡೈವರ್ಸಿಟಿ ಕಣಜದಂತಿದೆ.

ಕರ್ನಾಟಕ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಚರ್ಚಾಸ್ಪರ್ದೆ, ಪ್ರಭಂಧ ಸ್ಪರ್ದೆ ಏರ್ಪಡಿಸಿ ಸಮ್ಮೇಳನದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲು ಯೋಚಿಸಲಾಗಿದೆ. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಬಯೋಡೈವರ್ಸಿಟಿ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ.

ಈ ಭಾಗದ ನಾಟಿವೈಧ್ಯರ, ಹಕೀಮರ ಮತ್ತು ಪಾರಂಪರಿಕ ವೈಧ್ಯರ ಸಮಾವೇಶ ನಡೆಸಿ ಇಲ್ಲಿನ ಪ್ರಮುಖ ಔಷಧಿಯ ಗಿಡಗಳ ಬಗ್ಗೆ ಸಮಾಲೋಚನೆ ನಡೆಸಲು ಉದ್ದೇಶಿಸಲಾಗಿದೆ.

ಈ ಭಾಗದ ಹಲಸಿನ ಕಾಯಿಗಳು ಬಹಳ ವ್ಯರ್ಥವಾಗುತ್ತಿವೆ. ಇವುಗಳ ಮೌಲ್ಯವರ್ಧನೆಗೆ ಹಲಸಿನ ಕ್ಲಸ್ಟರ್ ಸ್ಥಾಪಿಸಲು ಸಹ ಕಾರ್ಯಾಗಾರ ನಡೆಸಲು ಚರ್ಚೆ ನಡೆಸಲಾಯಿತು.

ಆಸಕ್ತರು ಸಲಹೆ ನೀಡಲು ಮನವಿ ಮಾಡಲಾಗಿದೆ.