9th October 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲಿದೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿರುವ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಜನತೆಗೆ ತಣ್ಣಿರು ಎರಚಲು ಅನ್ಯ ರಾಜ್ಯಗಳ ಖ್ಯಾತೆ ಆರಂಭವಾಗಿರುವುದು ದರದೃಷ್ಟಕರ.

ನ್ಯಾಯಾದೀಕರಣದ ಮೂಲಕ ನಮಗೆ ಹಂಚಿಕೆಯಾಗಿರುವ, ನಮ್ಮ ಪಾಲಿನ ನೀರನ್ನು ಬಳಸಲು ಕೇಂದ್ರ ಸರ್ಕಾರ ಹಣ ನೀಡಿದರೆ ಅವರಿಗೆ ಏನು ತೊಂದರೆ ಎಂಬುದೇ ಗೊತ್ತಾಗುತ್ತಿಲ್ಲ. ಖ್ಯಾತೆ ತೆಗೆದಿರುವ ಅನ್ಯ ರಾಜ್ಯಗಳ ನಿಲುವು ಏನು ಎಂಬುದು ನಿಖರವಾಗಿ ನನಗೆ ಇನ್ನೂ ಗೊತ್ತಾಗಿಲ್ಲ. ಆದರೇ ಖ್ಯಾತೆ ತೆಗೆದರು ನಮ್ಮ ರಾಜ್ಯದ ಸಂಸದರುಗಳ  ಮೌನ ಸರಿಯಲ್ಲ.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಮತ್ತು ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರು ಈ ಬಗ್ಗೆ ರಾಜ್ಯದ ಜನತೆಗೆ ಸರ್ಕಾರದ ನಿಲುವನ್ನು ಸ್ಪಷ್ಟ ಪಡಿಸಬೇಕು.

ವಿರೋಧ ಪಕ್ಷಗಳು ಈ ಬಗ್ಗೆ ಇನ್ನೂ ನಿದ್ದೆ ಹೊಡೆಯುವಂತಿದೆ. ಪಾದಯಾತ್ರೆ ಯಾರು ಆರಂಭಿಸುತ್ತಾರೆ ಕಾದು ನೋಡೋಣ?