27th July 2024
Share

ಲಕ್ಷ್ಯ ಕುಮಾರ್ ರವರ ಲಕ್ಷ ಗಿಡ

TUMAKURU:SHAKTHIPEETA FOUNDATION

ಆಂದ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ತ್ರಿವೇಣಿ ಸಂಗಮದಂತಿರುವ  ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ ಕ್ಯಾಂಪಸ್ನ 172 ಎಕರೆಯು ಆಂದ್ರಪ್ರದೇಶದಲ್ಲಿದೆ. ಕ್ಯಾಂಪಸ್ ನೀರು ಕರ್ನಾಟಕದ ಕೆರೆಗೆ ಹರಿಯಿಲಿದೆ. ಮೂರು ಕಡೆಯೂ ಮೂರು ರಾಜ್ಯಗಳದ ಜಮೀನು ಇದೆ.

ನಾನು ಕಳೆದ 8-10 ವರ್ಷಗಳ ಹಿಂದೆ ಭೇಟಿ ನೀಡಿದ್ದೆ. ಅಂದು ಶ್ರೀ ಲಕ್ಷ್ಯ ಕುಮಾರ್ ರವರು, ಬರಡು ಭೂಮಿಯಲ್ಲಿ ಗಿಡಹಾಕಲು ಆರಂಭಿಸಿದ್ದರು. ಇಂದು(ದಿನಾಂಕ:28.12.2021) ಅವರೇ ಅಲ್ಲಿ ಇದ್ದಾರೆ, ಲಕ್ಷ್ಯ ಕುಮಾರ್ ರವರು ಸುಮಾರು 700 ಜಾತಿಯ ಒಂದು ಲಕ್ಷ ಗಿಡ ಹಾಕಿರುವುದಾಗ ತಿಳಿಸಿದಾಗ ಮೈ ರೋಮಾಂಚನವಾಯಿತು. ನಾನು ಸಹ ಗಿಡ, ಬೀಜ, ಬಳ್ಳಿ ಮತ್ತು ಬೇರುಗಳನ್ನು ನೀಡಲು ಮನವಿ ಮಾಡಿದೆ.

ಫೌಂಡೇಷನ್ ಸಂಸ್ಥಾಪಕರ ಜೊತೆ ಮಾತನಾಡಬೇಕು, ಇವರ ಕನಸಿಗೆ ಸ್ಪಂಧಿಸಿರುವ ಅವರ ಜ್ಞಾನಕ್ಕೆ ಬೆಲೆಕಟ್ಟಲಾಗುದು. ನಿಜಕ್ಕೂ ಒಂದು ಅದ್ಭುತವಾದ ಮಕ್ಕಳ ಮತ್ತು ಶಿಕ್ಷಕರ ಲೋಕ ಇಲ್ಲಿದೆ.

ಶಕ್ತಿಪೀಠ ಕ್ಯಾಂಪಸ್ ನಲ್ಲಿ ಅಭಿವೃದ್ಧಿ ಗ್ರಂಥಾಲಯ ಸ್ಥಾಪಿಸಲು ಗ್ರಂಥಾಲಯದ ಮಾದರಿ ಅಧ್ಯಯನ ಮಾಡಲಾಯಿತು. ಹಾಸನ ಜಿಲ್ಲೆಯ ಸಕಲೇಶ ಪುರದಲ್ಲಿರುವ ಮೂಕಾನನ ರೆಸಾರ್ಟ್ ಮಾಲೀಕರಾದ ಶ್ರೀ ವೇದಾನಂದಾಮೂರ್ತಿರವರು ಮತ್ತು ಅವರ ಸುಪುತ್ರ ಸಿವಿಲ್ ಇಂಜಿನಿಯರ್ ಶ್ರೀ ಹಿತೇಶ್ ರವರು ಜೊತೆಯಲ್ಲಿದ್ದರು.

ನೀತೀಶ್ ರವರಿಗೆ ಗ್ರಂಥಾಲಯ ಹೇಗಿರಬೇಕು ಎಂಬ ಬಗ್ಗೆ ಒಂದು ಪರಿಕಲ್ಪನಾ ವರದಿ ನೀಡಲು ಹೇಳಿದ್ದೇನೆ. ನಮ್ಮ ಕ್ಯಾಂಪಸ್ ನಲ್ಲಿನ ಗ್ರಂಥಾಯದಲ್ಲಿ ಕೇಂದ್ರ ಮತ್ತು ರಾಜ್ಯ ಸಕರ್ಶಾರಗಳ ಪ್ರತಿಯೊಂದು ಇಲಾಖೆಯ ಅಧ್ಯಯನದ ವರದಿಗಳ ಜೋಡಣೆಯ ಅಂಶ ಪ್ರಮುಖವಾಗಿದೆ.

ಇಲಾಖಾವರು ವರದಿಗಳ ಜೋಡಣೆ ಹೇಗಿರಬೇಕು, ಕಟ್ಟಡದ ಮಾದರಿ ಹೇಗಿರಬೇಕು, ಅಧ್ಯಯನಗಾರರು ಎಲ್ಲೆಲ್ಲಿ, ಹೇಗೆ ಕುಳಿತು ಓದುವಂತಿರಬೇಕು ಎಂಬ ಬಗ್ಗೆ ಮಾಹಿತಿ ನೀಡಲಿದ್ದಾರೆ.

ನಮ್ಮ ವಾಸ್ತು ತಜ್ಞರಾದ ಶ್ರೀ ಎಂ.ಕೆ.ನಾಗರಾಜ್ ರಾವ್ ರವರು ತಕ್ಷ್ ಶಿಲ ಸ್ಥಳದಲ್ಲಿ, (ಈಗ ಪಾಕಿಸ್ಥಾನದಲ್ಲಿದೆ)  ಗ್ರಂಥಾಲಯ ಸ್ಥಾಪನೆ ಮಾಡಲು ತಿಳಿಸಿದ್ದಾರೆ. ನಮ್ಮ ಕ್ಯಾಂಪಸ್ ನಲ್ಲಿಯೂ ಜಿಐಎಸ್ ಆಧಾರಿತ ಅದೇ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಲು ಚಿಂತನೆ ನಡೆದಿದೆ.