TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೋಕು ಬಿದರೆಹಳ್ಳ ಕಾವಲ್ ನಲ್ಲಿ ಪ್ರಗತಿಯಲ್ಲಿರುವ ಹೆಲೆಕ್ಯಾಪ್ಟರ್ ಘಟಕಕ್ಕೆ ಹೆಚ್.ಎ.ಎಲ್ ನವರು ಕೇಳಿರುವ 592 ಎಕರೆ ಹೆಚ್ಚುವರಿ ಜಮೀನಿಗೆ ಬದಲಾಗಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಲಹೆ ಮಾಡಿರುವ 1093 ಎಕರೆ ಜಮೀನು ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಶೀಘ್ರವಾಗಿ ಸಭೆ ನಡೆಸುವುದಾಗಿ ಮೂಲಸೌಕರ್ಯ ಸಚಿವರಾದ ಶ್ರೀ ವಿ.ಸೋಮಣ್ಣನವರು, ಅರಣ್ಯ ಸಚಿವರಾದ ಶ್ರೀ ಉಮೇಶ್ ಕತ್ತಿರವರು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ತಿಳಿಸಿದ್ದಾರೆ.
ಶ್ರೀ ವಿ.ಸೋಮಣ್ಣನವರು ಶೀಘ್ರವಾಗಿ ಹೆಚ್.ಎ.ಎಲ್ ಘಟಕಕ್ಕೆ ಭೇಟಿ ನೀಡಿ ಪ್ರಗತಿಪರಿಶೀಲನೆ ನಡೆಸುವುದಾಗಿಯೂ ತಿಳಿಸಿದ್ದಾರೆ. ಹೆಚ್.ಎ.ಎಲ್ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆ ರಾಜ್ಯ ಸರ್ಕಾರದ ಸ್ಪಷ್ಟ ನಿಲುವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕಾನೂನು ಸಚಿವರಾದ ಶ್ರೀ ಮಾಧುಸ್ವಾಮಿಯವರು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಮುರುಗೇಶ್ ನಿರಾಣಿಯವರು ಡಾ.ಸರೋಜಿನಿ ಮಹಿಷಿ ವರದಿಯ ಕಾಯ್ದೆ ಮಾಡುವ ಬಗ್ಗೆ ಅವರಿಬ್ಬರ ಜೊತೆಯೂ ಸಮಾಲೋಚನೆ ನಡೆಸಲಾಗುವುದು.
ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಂಸದರ ಆದರ್ಶ ಗ್ರಾಮ ಯೋಜನೆಗೆ ಹೆಚ್.ಎ.ಎಲ್. ವತಿಯಿಂದ ಸಿ.ಎಸ್.ಆರ್ ಫಂಡ್ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಹೊಸ ವರ್ಷದ ಆರಂಭದಲ್ಲಿ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಮಲೋಚನೆ ನಡೆಸಲಾಗುವುದು.