23rd June 2024
Share

TUMAKURU:SHAKTHIPEETA FOUNDATION

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ನೀರಾವರಿ ಯೋಜನೆಗಳು ಜಾರಿಯಲ್ಲಿವೆ.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಡಾಟಾ ಸಂಗ್ರಹಿಸಲು ಲಕ್ಷಾಂತರ ಹಣ ವ್ಯಯ ಮಾಡಿದೆ.

ನೀರಿನ ಲೆಕ್ಕ ಪಕ್ಕಾ ಕೊಡಲು ಸಾಧ್ಯವಾಗುತ್ತಿಲ್ಲ.ನಾನು ಕಳೆದ 25 ವರ್ಷಗಳಿಂದಲೂ ನೀರಾವರಿ ಬಗ್ಗೆ ಮಾತನಾಡುತ್ತಲೇ ಇದ್ದೇನೆ. ನನ್ನ ಹಾಗೆ ಮಾತನಾಡುವವರ ಮಾತು ಕೇಳುತ್ತಲೇ ಇದ್ದೇನೆ.

ಜÀಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಹೆಸರಿಗೆ ಮಾತ್ರ ನೀರಿನ ಮಾತೃ ಇಲಾಖೆ. ಉಳಿದೆಲ್ಲಾ ವ್ಯವಹಾರ ನಿಗಮಗಳಿಗೆ ಎಂಬ ಮಾತು ಸದಾ ಜಲ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ನಾನಂತೂ ಇತ್ತೀಚೆಗೆ ಈ ಕಚೇರಿಗೆ ಬೇಟಿ ನೀಡಿಲ್ಲ, ದಿ.ಜಿ.ಎಸ್.ಪರಮಶಿವಯ್ಯನವರು ಇರುವ ತನಕ ನಮಗೆ ಈ ಸಂಸ್ಥೆ ತವರು ಮನೆಯಂತಿತ್ತು. ಇಂದು(02.02.2022) ಜಲಸಂಪನ್ಮೂಲ ಇಲಾಖೆಯು ಇವರಿಗೆ ಪತ್ರ ಬರೆದಿರುವುದರಿಂದ ಮಾಹಿತಿ ದೊರೆಯುವವರೆಗೂ ಅಲ್ಲಿ ಒಡನಾಟ ಅಗತ್ಯವಾಗಿದೆ.

ಶಕ್ತಿಪೀಠ ಕ್ಯಾಂಪಸ್ ನಲ್ಲಿ ಜಲಪೀಠ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಜಲ ಮಾಹಿತಿಯನ್ನು ಕರಾರುವಕ್ಕಾಗಿ ಮೌಲ್ಯಮಾಪನ ಮಾಡುವುದು ಅಗತ್ಯವಾಗಿದೆ.

ಹೆಸರು ಬರೆಯಬಾರದು ಎಂಬ ಷರತ್ತು ವಿಧಿಸಿರುವ ರಾಜ್ಯ ಸರ್ಕಾರದ ಹಿರಿಯ ಅಪರಮುಖ್ಯ ಕಾರ್ಯದರ್ಶಿಯವರು ಇಂದು ಬೆಳಿಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಎಲ್ಲಿಗೆ ಬಂತು ನಿಮ್ಮ ಸಮಗ್ರ ನೀರಾವರಿ ಕಡತ ಎಂಬ ಡಿಜಿಟಲ್ ಎಚ್ಚರಿಕೆ ನೀಡಿದ್ದಾರೆ.

ಟೀಕೆ. ಟಿಪ್ಪಣೆ, ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬ ಮನವರಿಕೆ ನನಗೆ ಆಗಿದೆ. ಇರುವ ಅಧಿಕಾರಿಗಳ ಮೂಲಕವೇ ಜಲ ಗ್ರಂಥ’ ಸಿದ್ಧಪಡಿಸಲು ಯೋಚಿಸಲಾಗಿದೆ.

ನನ್ನ ಬಳಿ ಸಾಕಷ್ಟು ಮಾಹಿತಿ ಇದೆ. ಆದರೂ ಇಲಾಖೆಯ ಸಹಭಾಗಿತ್ವದಲ್ಲಿಯೇ ಜಲಗ್ರಂಥ ಸಿದ್ಧಪಡಿಸುವುದು ನಿಯಮ.

ನೀರಾವರಿ ಬಗ್ಗೆ ಜ್ಞಾನವಿರುವವರ ಒಂದು ವಿಷನ್ ಗ್ರೂಪ್ ರಚಿಸಲು ಚಿಂತನೆಯಿದೆ, ಆಸಕ್ತರು ತಮ್ಮಲ್ಲಿರುವ ‘ಜ್ಞಾನ ದಾನ’ ಮಾಡಬಹುದು.