4th October 2022
Share

TUMAKURU:SHAKTHIPEETA FOUNDATION

ನದಿಜೋಡಣೆ  ಮಾಜಿ ಪ್ರಧಾನಿಯವರಾದ ದಿ.ಅಟಲ್ ಬಿಹಾರಿ ವಾಜಿಪೇಯಿರವರ ಕಾಲದಲ್ಲಿ ಬಹಳ ಸದ್ದು ಮಾಡಿತ್ತು.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು 2022-23 ರ ಆಯವ್ಯಯದಲ್ಲಿ ದಕ್ಷಿಣ ಭಾರತದ ನದಿ ಜೋಡಣೆ ಘೋಷಣೆ ಮಾಡುವ ಮೂಲಕ ಬೃಹತ್ ಕೊಡುಗೆ ನೀಡಿದ್ದಾರೆ.

ದಕ್ಷಿಣ ಭಾತರದ 7 ರಾಜ್ಯಗಳಿಗೆ ವರದಾನವಾಗಲಿದೆ. ಈ 7 ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದು ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರ. ಆದರೂ ಪಕ್ಷ ರಾಜಕಾರಣ ಮಾಡದೆ, ಭಾರತ ದೇಶ ಒಂದೇ ಎಂಬ ಭಾವನೆಯಿಂದ ಈ ಯೋಜನೆ ಘೋಷಣೆ ಮಾಡಿದ್ದಾರೆ.

ಸುಮಾರು 247 ಟಿಎಂಸಿ ಅಡಿ ನೀರಿನ ಯೋಜನೆಯಿಂದ ಯಾವ ರಾಜ್ಯಕ್ಕೆ ಎಷ್ಟು ನೀರನ್ನು ಹೇಗೆ ಪಡೆಯಬೇಕು ಎಂಬ ಬಗ್ಗೆ ಈ 7 ರಾಜ್ಯಗಳ ಮುಖ್ಯಮಂತ್ರಿಗಳು ಒಮ್ಮತಕ್ಕೆ ಬರಬೇಕಿದೆ.

ಭಾರತ ದೇಶದಲ್ಲಿ ಏಕೆ, ವಿಶ್ವದಲ್ಲಿ ಪ್ರತಿಯೊಂದು ನೀರಾವರಿ ಯೋಜನೆಗಳಲ್ಲಿಯೂ ರಾಜಕೀಯ ನುಸುಳುತ್ತಿದೆ. ಎಲ್ಲಾ ರಾಜ್ಯಗಳು ನಮಗೆ ಹೆಚ್ಚು ನೀರನ್ನು ಹಂಚಿಕೆ ಮಾಡಬೇಕು ಎಂಬ ವಾದವನ್ನು ಮಂಡಿಸಲು ತುದಿಗಾಲಲ್ಲಿ ನಿಲ್ಲತ್ತವೋ ಅಥವಾ ಒಂದು ದೃಢ ನಿಧಾರಕ್ಕೆ ಬರುತ್ತವೋ, ಅದಕ್ಕೊಂದು ಟ್ರಿಬ್ಯುನಲ್ ಮಾಡಬೇಕಾಗುತ್ತದೋ ದೇವರೇ ಬಲ್ಲ.

ಆದರೇ ಬಿಜೆಪಿ ನೇತೃತ್ವದ ಮೊದಿಯವರ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ವಿರೋಧ ಪಕ್ಷಗಳಿಗೆ ಒಂದು ಸವಲಾಗಿದೆ. ನುಂಗಲಾರದ ಬಿಸಿ ತುಪ್ಪವಾಗಿದೆ.

ಗೋದಾವರಿಕೃಷ್ಣ ನದಿ ಜೋಡಣೆಯಿಂದ ಅನೂಕೂಲ ಪಡೆಯುವ ರಾಜ್ಯಗಳು.

  1. ಕರ್ನಾಟಕ
  2. ತೆಲಂಗಾಣ
  3. ಆಂಧ್ರಪ್ರದೇಶ
  4. ಮಹಾರಾಷ್ಟ್ರ

ಗೋದಾವರಿಕಾವೇರಿ ನದಿ ಜೋಡಣೆಯಿಂದ ಅನೂಕೂಲ ಪಡೆಯುವ ರಾಜ್ಯಗಳು.

  1. ಕರ್ನಾಟಕ
  2. ತಮಿಳುನಾಡು
  3. ಕೇರಳ
  4. ಪಾಂಡಿಚೇರಿ

ಗೋದಾವರಿಪೆನ್ನಾರ್ ನದಿ ಜೋಡಣೆಯಿಂದ ಅನೂಕೂಲ ಪಡೆಯುವ ರಾಜ್ಯಗಳು.

  1. ಕರ್ನಾಟಕ
  2. ಆಂಧ್ರಪ್ರದೇಶ

 ಕೇಂದ್ರ ಸರ್ಕಾರದ ಯೋಜನೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದ ನಂತರ ತಾಂತ್ರಿಕ ಮಾಹಿತಿ ನೀಡಬಹುದಾಗಿದೆ.

ಕರ್ನಾಟಕದ ಬಿಜೆಪಿ ಯವರ ಕೈಗೆ ಒಂದು ದೊಡ್ಡ ಅಸ್ತ್ರವನ್ನು ಮೋದಿಯವರು ನೀಡಿದ್ದಾರೆ, ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಅನೂಕೂಲವಾಗಲಿದೆ. ರಾಜ್ಯದ ಸರ್ವಪಕ್ಷಗಳು ಸಹ ಬೊಮ್ಮಾಯಿರವರಿಗೆ ಕೈ ಜೋಡಿಸಬೇಕಿದೆ.