18th April 2024
Share

TUMAKURU:SHAKTHIPEETA FOUNDATION

ನಿನ್ನೆ ನಡೆದ(05.01.2022) ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಹೌಸಿಂಗ್ ಫಾರ್ ಆಲ್ ಬಗ್ಗೆ ಚರ್ಚೆ ನಡೆಯುತ್ತಿತ್ತು. ಗುಬ್ಬಿ ಮತ್ತು ಪಾವಗಡ ಪಟ್ಟಣ ಪಂಚಾಯಿತಿಗಳಲ್ಲಿ ನಿವೇಶನ ನೀಡಲು ಸರ್ಕಾರಿ ಜಮೀನು ಇಲ್ಲ ಎಂದು ಅನುಪಾಲನಾ ವರದಿಯಲ್ಲಿ ಲಿಖಿತವಾಗಿ ನೀಡಿದ ಉತ್ತರದ ಬಗ್ಗೆ ನಾನೇ ಪ್ರಶ್ನೆ ಮಾಡಿದೆ.

 330 ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ 778 ಎಕರೆ ಜಮೀನು ನೀಡಿದೆ. 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ  217 ಎಕರೆ ಜಮೀನು ನೀಡಲಾಗಿದೆ. ಬರೋಬ್ಬರಿ ಒಟ್ಟು 995 ಎಕರೆ ನಿವೇಶನ ನೀಡಲು ಮತ್ತು ವಸತಿ ಸಮುಚ್ಚಯಗಳಿಗೆ ಸರ್ಕಾರಿ ಜಮೀನು ನೀಡಲಾಗಿದೆ,

 ಈ ಜಮೀನು ಮೊದಲು ಹಂಚಿ ಹಕ್ಕುಪತ್ರ ನೀಡಲಿ, ಅಗತ್ಯವಿದ್ದಲ್ಲಿ ಯಾರಿಗೆ, ಎಲ್ಲಿ ಬೇಕೋ ಅಲ್ಲಿ ಪ್ರಸ್ತಾವನೆ ಸಲ್ಲಿಸಿ ಜಮೀನು ನೀಡುತ್ತೇವೆ ಎಂದು ಖಡಕ್ ಆಗಿ ತುಮಕೂರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ಉತ್ತರಿಸಿದ್ದು ನಿಜಕ್ಕೂ ಸ್ವಾಗಾತಾರ್ಹ. ನಾವು ಅಧಿಕಾರಿಗಳಿಂದ ನೀರೀಕ್ಷೆ ಮಾಡುವುದು ಇದನ್ನೆ.

ಆದರೇ ತುಮಕೂರು ಜಿಲ್ಲೆಯಲ್ಲಿ 11 ವಿಧಾನಸಭಾ ಸದಸ್ಯರುಗಳು ಇದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರು ಪಕ್ಷದವರು ಇದ್ದಾರೆ. ಆಶ್ರಯ ಸಮಿತಿ ಸಭೆ ನಡೆಸಿ ಬಡವರಿಗೆ ನಿವೇಶನ ನೀಡಲು ಏನಾಗಿದೆ ಇವರಿಗೆ. ಎಲ್ಲಿ ಜಮೀನು ಬೇಕೋ ಅಲ್ಲಿ ಬೇಡಿಕೆ ಸಲ್ಲಿಸಲು ಅವರಿಗೆ ಆಗಿರುವ ತೊಂದರೆ ಏನು?

ಶಾಸಕರುಗಳೇ ನಿವೇಶನ ನೀಡಿಲ್ಲ ಏಕೆ ಎಂಬ ಚಳುವಳಿ ಆರಂಭಿಸಬೇಕೆ.

ನಾಚಿಕೆಯಾಗುತ್ತಿದೆ. 2022 ರೊಳಗೆ ಪ್ರಧಾನಿಯವರು ಸರ್ವರಿಗೂ ಸೂರು ಎನ್ನುತ್ತಾರೆ. ಕೊನೇ ಪಕ್ಷ ಅವರ ಪಕ್ಷದ ಶಾಸಕರು ನೀವೇಶನ ಹಂಚಿಕೆ ಪತ್ರ ನೀಡಿಲ್ಲ.

ಇದನ್ನು ಪ್ರಶ್ನೆ ಮಾಡಿದವರು ಖಳ ನಾಯಕರು. ನೆನಪಿರಲಿ ಮುಂದೆ ಒಂದು ವರ್ಷಕ್ಕೆ ನಾವು ಗುಡಿಸಲು ರಹಿತ ಮಾಡುತ್ತೇವೆ ಎಂಬ ಸುಳ್ಳು ಪ್ರಣಾಳಿಕೆಯೊಂದಿಗೆ ಮೂರು ಪಕ್ಷದವರು ಬರುತ್ತೀರಿ.

ದಿಶಾ ಸಭೆಯಲ್ಲಿ ಹಾಜರಿದ್ದ ಜಿಲ್ಲೆಯ ಇಬ್ಬರು ಸಂಸದರಾದ  ಕೇಂದ್ರ ಸಚಿವರಾದ ಶ್ರೀ, ಎ.ನಾರಾಯಣಸ್ವಾಮಿರುವರು ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರು ಮೌನವಹಿಸಬೇಕಾಯಿತು.

ನಮ್ಮನ್ನು ಮಾತ್ರ ಚುನಾಯಿತ ಜನಪ್ರತಿನಿಧಿಗಳು ಬೈಯುತ್ತಿದ್ದರು. ಇಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೂ ಚಾಟಿ ಬೀಸುತ್ತಿದ್ದಾರೆ ಎಂದು ಅಧಿಕಾರಿಗಳಿಗೆ ಖುಷಿಯೋ ಖುಷಿ,

ಸ್ಥಳೀಯ ಸಂಸ್ಥೆಗಳಿಂದ ನೂತನವಾಗಿ ಆಯ್ಕೆಯಾಗಿದ್ದ ಶ್ರೀ ರಾಜೇಂದ್ರವರು ಸಭೆಯಲ್ಲಿ ಹಾಜರಿದ್ದರು. ನೋಡೋಣ ಅವರು ಏನು ಮಾಡಬಹುದು.