22nd July 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಸರ್ಕಾರದ ಒಂದೇ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ನೀಡಿದ್ದ ಎರಡು ಆದೇಶಗಳ ಬಗ್ಗೆ ನಿನ್ನೆ(11.02.2022) ರಂದು ಒಂದು ಸ್ವಾರಸ್ಯಕರ ಚರ್ಚೆ ನಡೆಯಿತು. ಅಧಿಕಾರಿಗಳು ತಮಗೆ ಹೇಗೆ ಬೇಕೋ ಆ ರೀತಿ ಸರ್ಕಾರಿ ಆದೇಶ ಮಾಡಿಸಿಕೊಳ್ಳುವುದು ಹಿಂದಿನಿಂದಲೂ ನಡೆದು ಕೊಂಡ ಬಂದ ದಾರಿ.

ಈ ರೀತಿಯ ಆದೇಶಗಳ ಬಗ್ಗೆ ಮಹಾಭಾರತದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ನೀಡಿದ ಸ್ಥಾನ ಮತ್ತು ಅವನಷ್ಟೆ ಬಲಿಷ್ಠಾನದ ಸೂತ ಪುತ್ರ ದಾನಶೂರ ಕರ್ಣನಿಗೆ ನೀಡಿದ ಸ್ಥಾನದೊಂದಿಗೆ ಒಬ್ಬ ಅಧಿಕಾರಿ ವಿವರಣೆ ನೀಡಿದ್ದು ನನಗಷ್ಟೆ  ಅಲ್ಲ,  ಅಲ್ಲಿ ಇದ್ದ 5 ಜನರಿಗೂ ಮನಕುಲುಕುವಂತಿತ್ತು.

ಅಧಿಕಾರಿ ಸಲಹೆಯಂತೆ ಈ ವಿಚಾರವನ್ನು ಎಲ್ಲಿಯೂ ಮಾತನಾಡಬಾರದು ಎಂದು ಹೇಳಿದ್ದರಿಂದ, ಈ ಬಗ್ಗೆ ಇನ್ನೂ ಮುಂದೆ ಮಾತನಾಡದಿರಲು ನಿರ್ಧಾರ ಮಾಡಿದ್ದೇನೆ. ಒಂದು ಯೋಜನೆಯನ್ನು ಸಾಯಿಸುವದಕ್ಕೋ ಅಥವಾ ಒಬ್ಬ ವ್ಯಕ್ತಿಯನ್ನು ತುಳಿಯಲಿಕ್ಕೋ ಹೇಗೆ ಬಕ್ರಾ’ ಮಾಡಿದ್ದಾರೆ ನೋಡಿ ಎನ್ನುವ ಪದ ವಿಶ್ಲೇಷಣೆ ನಿಜಕ್ಕೂ ಅರ್ಥ ಬರುವಂತಿತ್ತು.