22nd November 2024
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಯಾವುದೇ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಿದರೇ ಪೂರ್ಣವಾದ ಮಾಹಿತಿ ಕಣಜ ನೀಡುತ್ತಿದ್ದವರು  ನೀರಾವರಿ ತಜ್ಞ ಪರಮಶಿವಯ್ಯನವರು.

ನಾನು ಕಳೆz ಕೆಲವು ದಿನಗಳ ಹಿಂದೆ ಈ ಸ್ಥಾನ ತುಂಬ ಬಲ್ಲ ಯಾರಾದರೂ ನಮ್ಮೊಂದಿಗೆ ಹೊಂದಿಕೊಳ್ಳುವ ಯಾವುದೇ ಸೇವಾ ಶುಲ್ಕ ಕೇಳದೆ ಸಮಾಜದ ಋಣ ತೀರಿಸುವ ಪರಿಣಿತರು ಬೇಕು ಎಂಬ ರೀತಿ ಬರೆದಿದ್ದೆ.

ಬಹಳ ಮಂದಿ ನಾವೂ ನಿಮ್ಮ ಸಭೆಯಲ್ಲಿ ಭಾಗವಹಿಸಿ ಸಹಕಾರ ನೀಡುತ್ತೇವೆ ಎಂದು ಸಮಾಲೋಚನೆ ನಡೆಸಿದ್ದಾರೆ.  ಈಗ ನಮ್ಮ ಕಡತಗಳ ಅನುಸರಣೆ ಕೇಂದ್ರ ಸರ್ಕಾರದ ಹಂತದಲ್ಲೂ ಆರಂಭವಾಗಿದೆ. ಜಲಶಕ್ತಿ ಕಡತಗಳ ಅನುಸರಣೆ ನಮ್ಮ ಫೌಂಡೇಷನ್ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವಕ್ಕೆ ಭಧ್ರಾಬುನಾದಿಯಾಗಲಿದೆ.

ಇಂಗ್ಲೀಷ್, ಹಿಂದಿ ಬಾಷಾಪರಿಣಿತರು, ಕಾನೂನು ಅರಿವು ಇರುವವರು ಅಥವಾ ಪಡೆದುಕೊಳ್ಳಲು ಆಸಕ್ತಿ ಇರುವವರು, ಸಭೆಯಲ್ಲಿ ಸಮಯಕ್ಕೆ ತಕ್ಕಂತೆ ಮಾತನಾಡುವ ಖ್ಯಾತಿ ಇಲ್ಲಿ ಬಹಳ ಮುಖ್ಯ.ತಾಳ್ಮೆ ಇರಬೇಕು, ಬಹಳಷ್ಟು ಭಾರಿ ಅವಮಾನವೇ ಹೆಚ್ಚು. ಜಿ.ಎಸ್.ಬಸವರಾಜ್ ರವರು ಈಗಲೂ ಎಲ್ಲಾ ಕಚೇರಿಗಳಿಗೆ ಬೇಜಾರು ಮಾಡಿಕೊಳ್ಳದೇ ಬರುತ್ತಿರುವದರಿಂದ ಕಾಯುವ ಪರಿಸ್ಥಿತಿ ಇರುವುದಿಲ್ಲ.

ಜಿ.ಎಸ್.ಪರಮಶಿವಯ್ಯನವರ 113 ನೇ ಜನ್ಮ ದಿನದಂದು ಶಕ್ತಿಪೀಠ ಕ್ಯಾಂಪಸ್ ನ ನದಿ ಜೋಡಣೆ ಪ್ರಾತ್ಯಾಕ್ಷಿಕೆ ಭಾರತನಕ್ಷೆಯಲ್ಲಿ ಕುಳಿತು ಹಲವಾರು ಜನರೊಂದಿಗೆ ಮೊಬೈಲ್ ಮೂಲಕ ಚರ್ಚೆ ನಡೆಸಲಾಗಿದೆ.

ಕ್ಯಾಂಪಸ್ ನ ಪ್ರಥಮ ಕಟ್ಟಡದ ಆರಂಭದ ದಿವಸವೇ ನಾವೂ ನಿಮ್ಮೊಂದಿಗೆ ಬರಲಿದ್ದೇವೆ ಎಂಬ ಮಾತು ಕಥೆ ನಡೆದಿದೆ. ಈಗ ನಾನು ಬರೆಯಲು ಆರಂಭಿಸಿರುವ ಜಲಗ್ರಂಥ ದಲ್ಲಿ 113 ವಿಷಯಗಳ ಬಗ್ಗೆ ಬರೆಯಲು ಪಟ್ಟಿ ಮಾಡಿದ್ದೇನೆ. ವಿಷಯವಾರು 113 ಜನರಿಗೆ ಹಂಚಿಕೆ ಮಾಡಿ, ಅವರಿಂದಲೇ ವರದಿ ಸಿದ್ಧಪಡಿಸುವ ಗುರಿ ನನ್ನದಾಗಿದೆ.

ಈ 113 ಜನರ ತಂಡವೇ ರಾಜ್ಯದ ಭವಿಷ್ಯ ಜಲಯೋಧರಾಗುವ ಕನಸು ನನ್ನದಾಗಿದೆ. ವಿಷಯ ಹೆಚ್ಚು ಕಡಿಮೆ ಆಗಬಹುದು. ನೋಡೋಣ. 113 ವಿಷಯಗಳು ಸಹ ಒಂದೊಂದು ಪಿ.ಹೆಚ್.ಡಿ ಮಾಡುವ ವಿಷಯಗಳಾಗಿವೆ.

ತಾವೂ ಭಾಗವಹಿಸು ಆಸಕ್ತಿ ಇದ್ದವರು ವಿಷಯವಾರು ನೊಂದಾಯಿಸಿಕೊಳ್ಳಿ.