19th April 2024
Share
G.S.BASVARAJ, PANKAJ KUMAR, K.JAIPRAKASH, GOEAL, SHANKREGOWDA & KUNDARANHALLI RAMES

TUMAKURU: SHAKTHIPEETA FOUNDATION

ಭಧ್ರಾ ಮೇಲ್ಧಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಶಿಸಲು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆಯ ವಿಶ್ವೇಶ್ವರಯ್ಯ ಜಲ ನಿಗಮದ ಮುಖ್ಯ ಇಂಜಿನಿಯರ್ ರಿಂದ ಆರಂಭಿಸಿ, ಮುಖ್ಯಮಂತ್ರಿವರೆಗೆ ನಿರಂತರವಾಗಿ ಹಾಕಿರುವ ಶ್ರಮ, ನಾಳೆ ಒಂದು ಅಂತಿಮ ಹಂತಕ್ಕೆ ಬರುವ ನೀರಿಕ್ಷೆ ಇದೆ.

ದಿನಾಂಕ:15.02.2022 ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ. ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿಯವರಾದ ಶ್ರೀ ಪಂಕಜ್ ಕುಮಾರ್ ರವರನ್ನು ದೆಹಲಿಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದ ತಂಡ ಬೇಟಿಯಾಗಿ ರಾಜ್ಯದ ಹಲವಾರು ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದಾಗ ಈ ಮಹತ್ವದ ವಿಚಾರ ತಿಳಿಯಿತು.

ತುಮಕೂರು ಜಿಲ್ಲೆಯ ಹೇಮಾವತಿ ನಾಲಾವಲಯ ವ್ಯಾಪ್ತಿಯಲ್ಲಿ ಮೈಕ್ರೋ ಇರ್ರಿಗೇಷನ್ ಮಾಡಿ ಉಳಿಯುವ ನೀರಿನಿಂದ ಆ ಭಾಗದ ಕೆರೆ ಕಟ್ಟೆಗಳಿಗೆ ನೀರಿನ ಅಲೋಕೇಷನ್ ಮಾಡುವ ಸಂಬಂಧವೂ ಚರ್ಚೆ ನಡೆಸಲಾಯಿತು.

ಕರ್ನಾಟಕ ರಾಜ್ಯ ಸರ್ಕಾರ ನಿಯಮ ಪ್ರಕಾರ ಪ್ರಸ್ತಾವನೆಯನ್ನು ಸಲ್ಲಿಸಿದರೇ ಮಾತ್ರ ಕೇಂದ್ರ ಸರ್ಕಾರ ಯೋಜನೆ ಮಂಜೂರು ಮಾಡುತ್ತದೆ. ಕೇವಲ ಪತ್ರ ಬರೆದರೆ ಯೋಜನೆ ಮಂಜೂರು ಮಾಡಲು ಸಾಧ್ಯಾವಿಲ್ಲ. ಬೆಂಗಳೂರಿನಲ್ಲಿರುವ ಸೆಂಟ್ರಲ್ ವಾಟರ್ ಕಮೀಷನ್ ರವರೊಂದಿಗೆ ಸಮಾಲೋಚನೆ ನಡೆಸಿ ಪ್ರಸ್ತಾವನೆ ಸಲ್ಲಿಸಲು ಸಲಹೆ ನೀಡಿದರು.

ತಂಡದಲ್ಲಿ ಭಾಗವಹಿಸಿದ್ಧ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರು ಒಂದು ತಂಡವನ್ನು ರಚಿಸಿ ಕಡತದ ಅನುಸರಣೆ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇಲ್ಲಿ ಭಧ್ರಾ ಮೇಲ್ದಂಡೆ ಯೋಜನೆಯ ಅನುಭವವಿರುವ ಮುಖ್ಯ ಇಂಜಿನಿಯರ್ ಶ್ರೀ ರಾಘವನ್ ರವರ ತಂಡದ ಸಹಕಾರ ಪಡೆಯುವುದು ಒಳ್ಳೆಯದು.

ಭಧ್ರಾ ಮೇಲ್ದಂಡೆ ಯೋಜನೆಯ ಮತ್ತು ಸಣ್ಣ ನೀರಾವರಿ ಇಲಾಖೆಯ ಪ್ರಸ್ತಾವನೆಯ ಬಗ್ಗೆ ನಿರಂತರವಾಗಿ ಹಾಕುತ್ತಿರುವ ಶ್ರಮದಂತೆ ವಿವಿಧ ಯೋಜನೆಗಳಿಗೂ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿ, ಕಡತದ ಅನುಸರಣೆ ಮಾಡುವುದು ಅಗತ್ಯವಾಗಿದೆ.

ಬಸವರಾಜ್ ರವರಿಗೆ ಕೇಂದ್ರ ಜಲಶಕ್ತಿ ಕಾರ್ಯದರ್ಶಿಯವರಾದ ಶ್ರೀ ಪಂಕಜ್ ಕುಮಾರ್ ರವರು ಒಂದು ಒಳ್ಳೆಯ ಟಾಸ್ಕ್ ನೀಡಿದ್ದಾರೆ. ಸಾರ್ ನೀವೂ ಯಾವಾಗಲೂ ನದಿ ಜೋಡಣೆ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ, ಈಗ ಕೇಂದ್ರ ಸರ್ಕಾರ ದಕ್ಷಿಣ ಭಾರತದ ನದಿ ಜೋಡಣೆಗೆ ಆಯವ್ಯಯದಲ್ಲಿ ಘೋಷಣೆ ಮಾಡಿದೆ.

ಇದರ ಸದುಪಯೋಗ ಪಡೆಯಲು ಕರ್ನಾಟಕ ಸರ್ಕಾರ ಮುಂದಾದರೆ ಒಳ್ಳೆಯದು. ಈ ಬಗ್ಗೆ ಒಂದು ನಿರ್ಧಾರಕ್ಕೆ ಬರುವುದು ಸೂಕ್ತವಾಗಿದೆ ಎಂಬ ಸಲಹೆ ನೀಡಿದರು.

ನಾವು ಭೇಟಿಯಾಗಿ ಚರ್ಚೆ ಮಾಡಿದ ನಂತರ, ರಾಜ್ಯದ ಜಲಸಂಪನ್ಮೂಲ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರು, ವಿಜೆಎನ್ ಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪೇಶ್ವೆರವರು ಮತ್ತು ಮುಖ್ಯ ಇಂಜಿನಿಯರ್ ಶ್ರೀ ರಾಘವನ್ ರವರ ತಂಡ ಪಂಕಜ್ ಕುಮಾರ್ ರವನ್ನು ಬೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

ನೋಡಿ, ಈ ರೀತಿ ಛಲಬಿಡದ ವಿಕ್ರಮನಂತೆ ಅಧಿಕಾರಿಗಳು ಕಡತದ ಅನಸರಣೆ ಮಾಡಲು, ಕೇಂದ್ರ ಸರ್ಕಾರದಲ್ಲಿನ ಯೋಜನಾವಾರು ವಿಷನ್ ಗ್ರೂಪ್ ರಚಿಸಿದರೆ ಮಾತ್ರ, ನಾವು ಕೇಂದ್ರ ಸರ್ಕಾರದಿಂದ ಅತಿ ಹೆಚ್ಚಿನ ಅನುದಾನ ಪಡೆಯ ಬಹುದು.

ಪತ್ರಿಕಾ ಹೇಳಿಕೆ ನೀಡಿ ಸಮ್ಮನಾದರೆ ಅಷ್ಟೆ.

ಭಧ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಶ್ರೀಮತಿ ಶೋಭಾ ಕರಂದ್ಲಾಜೆರವರು, ಶ್ರೀ ಎ.ನಾರಾಯಣಸ್ವಾಮಿರವರು, ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಶ್ರೀ ಜಿ.ಎಂ.ಸಿದ್ಧೇಶ್ವರ್ ರವರು  ನಾಲ್ಕು ಜನ ಸಂಸದರು ಬರುತ್ತಾರೆ.ಇದರಲ್ಲಿ ಇಬ್ಬರು ಕೇಂದ್ರ ಸಚಿವರಾಗಿದ್ದಾರೆ, ಈ ನಾಲ್ಕು ಜನ ಒಟ್ಟಿಗೆ ನೀಯೋಗ ಹೋಗಿರುವ ಉದಾಹರಣೆ ಇಲ್ಲ, ಇದೊಂದು ದುರಂತ ಎಂದರೆ ತಪ್ಪಾಗಲಾರದು.