22nd November 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ:15.02.2022 ರಂದು ನಡೆದ ಉನ್ನತ ಮಟ್ಟದ ಸಮಿತಿಯಲ್ಲಿ ಕರ್ನಾಟಕ ರಾಜ್ಯದ ಭಧ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಶಿಸಲು ಹಸಿರು ನೀಶಾನೆ ದೊರೆತಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಭಧ್ರಾ ಮೇಲ್ದಂಡೆ : ಕೇಂದ್ರ ಸಂಪುಟದತ್ತ ಕರ್ನಾಟಕದ ಚಿತ್ತ

ಇನ್ನೂ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಮಾತ್ರ ಬಾಕಿ ಉಳಿದಿದೆ. ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಚಿತ್ತ ಕೇಂದ್ರ ಸಚಿವ ಸಂಪುಟದತ್ತ ವಿಶೇಷ ಗಮನ ಹರಿಸಿದೆ.

ಕೇಂದ್ರಲ್ಲೂ ಬಿಜೆಪಿ-ರಾಜ್ಯದಲ್ಲೂ ಬಿಜೆಪಿ ಡಬ್ಬಲ್ ಎಂಜಿನ್ ಸರ್ಕಾರದ ಕೊಡುಗೆ ಎಂದು ರಾಜ್ಯದ ಬಿಜೆಪಿ ನಾಯಕರು ಅಬ್ಬರದ ಪ್ರಚಾರ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು.

ಹಲವಾರು ವರ್ಷಗಳ ಕನಸಿನ ಭಧ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ ನೆರವು ನಿಜಕ್ಕೂ ಸ್ವಾಗಾತಾರ್ಹ. ರಾಜ್ಯದ ಮೊಟ್ಟಮೊದಲ ರಾಷ್ಟ್ರೀಯ ಯೋಜನೆ ಎಂಬ ಹೆಗ್ಗಳಿಕೆ ದೊರೆಯಲಿದೆ. ಕರ್ನಾಟಕದ ಇತಿಹಾಸದಲ್ಲಿ ಇದೊಂದು ಬಹುದೊಡ್ಡ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಯೋಜನೆಯಾಗಲಿದೆ ಎಂಬ ಭಾವನೆ ನನ್ನದಾಗಿದೆ’.

ಜಲಸಂಪನ್ಮೂಲ ಅಧಿಕಾರಿಗಳ ಟೀಮ್ ವರ್ಕ್ ಬಹಳ ಚೆನ್ನಾಗಿ ಕಡತ ಅನುಸರಣೆ ಮಾಡಿದೆ. ಮುಖ್ಯ ಮಂತ್ರಿಯವರಾದಿಯಾಗಿ ಎಲ್ಲಾ ಹಂತದ ಜನಪ್ರತಿನಿಧಿಗಳ ಸಹಕಾರ ದೊರಕಿದೆ.

ರಾಜ್ಯದ ವಿರೋಧ ಪಕ್ಷಗಳ ನಾಯಕರು ಯಾವ ರೀತಿ ವ್ಯಾಖ್ಯಾನ ಮಾಡುತ್ತಾರೆ, ಕಾದು ನೋಡಬೇಕಿದೆ.

‘ಈ ಯೋಜನೆಗೆ ಅಪ್ಪಅಮ್ಮ ಯಾರು ಎಂಬ ಕೋಳಿ ಜಗಳವಂತೂ ಆರಂಭವಾಗಲಿದೆ’. ಈ ಯೋಜನೆಗೆ ಬಹಳ ವರ್ಷಗಳ ಹಿಂದೆ ಅಡಿಗಲ್ಲು ಹಾಕಿದ ದಿನದಿಂದ ಇತಿಹಾಸವನ್ನು ರಾಜ್ಯದ ಜನತೆಗೆ ತಿಳಿಯುವ ಕಾತುರವೂ ಇದೆ.