21st November 2024
Share

PPP : ಜಲಸಂಪನ್ಮೂಲ

TUMAKURU:SHAKTHIPEETA FOUNDATION

ಜಲಸಂಪನ್ಮೂಲ  ಸಚಿವಾಲಯದ ಪಿಪಿಪಿ ಸೆಲ್ ವಿಭಾಗದ ಶ್ರೀ ಕಿರಣ್ ಹೆಚ್.ಮಸೂತಿ ರವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಾಯಿತು.ಅವರು ಸಕರಾತ್ಮಕವಾಗಿ ಸ್ಪಂದಿಸಿ, ನಾವು ನೀರು ಕೊಡುವವರು, ನಾವು ಪಿಪಿಪಿ ಯೋಜನೆಯಲ್ಲಿ ಏನೇನು ಯೋಜನೆ ಕೈಗೊಳ್ಳಬೇಕು ಎಂಬ ಪರಿಕಲ್ಪನೆ ಇದ್ದಲ್ಲಿ ನೀಡಿ ಸಾರ್ ಎಂದು ತಿಳಿಸಿದರು.

ನಾನು ಅವರಿಗೆ ಹೇಳಿದೆ ಸಾರ್ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ನಂತರ ಮಾಹಿತಿ ನೀಡುತ್ತೇನೆ. ನಾನು ಈಗಾಗಲೇ ಜಲಗ್ರಂಥ ಬರೆಯಲು ತಮ್ಮ ಇಲಾಖೆಯ ಮೌಲ್ಯಮಾಪನ ಆರಂಭಿಸಿದ್ದೇನೆ ಎಂದು ತಿಳಿಸಿದೆ.

ನಂತರ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರಿಂದಲೇ ಆರಂಭಿಸಲು ಅವರ ಕಚೇರಿಗೆ ಭೇಟಿ ನೀಡಿದೆ. ಬಹಳ ವಿಚಾರ ವಿನಿಮಯ ಮಾಡಿಕೊಂಡೆವು.

ನಂತರ ಒಂದು ತಿರ್ಮಾನಕ್ಕೆ ಬಂದೆವು ನಿಗಮದ ಒಂದು ಇಂಜಿನಿಯರ್ ತಂಡ ರಚಿಸಿ, ಅವರೊಂದಿಗೆ ಪಿಪಿಪಿ ಬಗ್ಗೆ ಸಮಾಲೋಚನೆ ನಡೆಸಿ ನಂತರ ಒಂದು ವರದಿ ಮಾಡುವುದು ಸೂಕ್ತ.

ಒಂದು ತಂಡವನ್ನು ರಚಿಸಿದರು, ಅವರೊಂದಿಗೆ ಸಮಾಲೋಚನೆ ನಡೆಸಿ ಕೆಲಸ ಆರಂಬಿಸಿದ್ದೇವೆ. ಇದೆ ಮಾದರಿಯನ್ನು ಎಲ್ಲಾ ನಿಗಮಗಳಲ್ಲೂ ಅನುಸರಿಸುವುದು ಅಗತ್ಯವಾಗಿದೆ.

ನಂತರ ಜಲಸಂಪನ್ಮೂಲ ಕಾರ್ಯದರ್ಶಿಯವರಾದ ಶ್ರೀ ಪ್ರಸಾದ್ ಕುಲಕರ್ಣಿರವರನ್ನು ಬೇಟಿ ಮಾಡಿ ಸಮಾಲೋಚನೆ ನಡೆಸಲಾಯಿತು. ನಂಬಿದರೆ ನಂಬ ಬಹುದು ಅಥವಾ ಬಿಡಬಹುದು. ಆವರು ಚರ್ಚೆ ಮಾಡುವಾಗ ನಾನು ಏನು ಹೇಳಬೆಕೆಂದು ಅಲ್ಲಿಗೆ ಹೋಗಿದ್ದೆನೋ ಅವರೇ ಎಲ್ಲವನ್ನು ಹೇಳಿದಾಗ ನನಗೆ ಪರಮಾಶ್ಚರ್ಯವಾಯಿತು.

ಈ ವಿಧಾನ ಸಭಾ ಅಧಿವೇಶನ ಮುಗಿದ ನಂತರ ಶ್ರೀ ಜಿ.ಎಸ್.ಬಸವರಾಜ್ ರವರು ನೀಡಿರುವ ಎಲ್ಲಾ ಪತ್ರಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಸಭೆ ಕರೆಯುತ್ತೇವೆ. ಈಗಾಗಲೇ ಸಚಿವರಾದ ಶ್ರೀ ಗೋವಿಂದ ಕಾರಜೋಳರವರು ಸಹ ಈ ಬಗ್ಗೆ ಪತ್ರ ಬರೆದಿದ್ದಾರೆ. ನೀವೂ ಸಹ ಇಲಾಖೆಯ ಮೌಲ್ಯಮಾಪನ ವರದಿ ಮಾಡಲು ಆರಂಭ ಮಾಡಿದ್ದೀರಿ, ಸಂಪೂರ್ಣ ಚಿತ್ರಣ ಸಿದ್ಧಪಡಿಸಿಕೊಂಡು ನಂತರ ನೀವೂ ಕೇಳುವ ಎಲ್ಲಾ ಮಾಹಿತಿಯನ್ನು ನೀಡುತ್ತೇವೆ.

ನೀವೂ ಕೇಳಿರುವ ಮಾಹಿತಿಗಳು ನಮ್ಮ ಬಳಿ ಈಗಾಗಲೇ ಇರಬೇಕಿತ್ತು. ಆದರೂ ಕ್ರೋಡೀಕರಣ ಮಾಡಲು ಆರಂಭ ಮಾಡಿದ್ದೇವೆ ಎಂದು ತಿಳಿಸಿದರು.