22nd December 2024
Share
G.S.BASAVARAJ, NWDA DG BHOPALSINGH, R.K.SHARMA. BINDAR & KUNDARANHALLI RAMESH

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ 2022-2023 ನೇ ಆಯವ್ಯದಲ್ಲಿ ದಕ್ಷಿಣ ಭಾರತದ ನದಿ ಜೋಡಣೆ ಯೋಜನೆ ಘೋಷಣೆ ಮಾಡಿದ ಬೆನ್ನಲ್ಲೆ ದೆಹಲಿಯಲ್ಲಿÉ್ಲ ಕೇಂದ್ರ ಸರ್ಕಾರದ NWDA ನ ಡೈರಕ್ಟರ್ ಜನರಲ್ ಶ್ರೀ ಭೂಪಾಲ್ ಸಿಂಗ್ ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯ ಹಾಗೂ ಕೇಂದ್ರ ಜಲಶಕ್ತಿ ಸಮಿತಿ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಸಮಾಲೋಚನೆ ನಡೆಸಿದರು.

ರಾಜ್ಯದ ಹಲವಾರು ನದಿ ಜೋಡಣೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.

ರಾಜ್ಯದ ನದಿ ಜೋಡಣೆ ಮತ್ತು ಇಂಟರ್ ಸ್ಟೇಟ್ ರಿವರ್ ಲಿಂಕಿಂಗ್ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಯಿತು.

ಯಾವುದೇ ನದಿ ಜೋಡಣೆ ಯೋಜನೆಯಾಗಲಿ, ನೀರು ಪಡೆಯುವ  ನದಿ ಪಾತ್ರಗಳ ರಾಜ್ಯಗಳ ಕಿತ್ತಾಟ ಇದ್ದೇ ಇರುತ್ತದೆ. ವ್ಯಾಪ್ತಿಯ ರಾಜ್ಯಗಳು ಪರಸ್ಪರ ಒಪ್ಪಿಗೆ ನೀಡದಿದ್ದರೆ ಕೇಂದ್ರ ಸರ್ಕಾರ ಏನು ಮಾಡಲು ಸಾಧ್ಯಾ? ನ್ಯಾಯಾಲವೇ ಗತಿ ಎನ್ನುವಂತಾಗಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ಬಹು ದೊಡ್ಡ ಲಾಭಿ ಮಾಡಲೇ ಬೇಕಿದೆ.

ಸಮಸ್ಯೆಗಳತ್ತ ಬೆಟ್ಟು ಮಾಡದೆ. ಪರಿಹಾರದ ಮಾರ್ಗಗಳ ಬಗ್ಗೆ ಸಲಹೆ ನೀಡುವುದು ಬಹಳ ಮುಖ್ಯ. ಜೊತೆಗೆ ಕರ್ನಾಟಕ ರಾಜ್ಯ ಸಮಗ್ರ ನೀರಾವರಿಯಲ್ಲಿ ಒಂದು ಸ್ಪಷ್ಟ ಚಿತ್ರಣ ಮಾಡಿಕೊಳ್ಳುವುದು ಅಗತ್ಯವಾಗಿದೆ.

ಸರ್ವಪಕ್ಷಗಳ ನಾಯಕರು ಒಂದು ಒಮ್ಮತದ ಯೋಜನೆ ರೂಪಿಸಬೇಕಿದೆ. ಒಂದೊಂದು ಸರ್ಕಾರ ಆಡಳಿತ ನಡೆಸುವಾಗ ಒಂದೊಂದು ಯೋಜನೆ ರೂಪಿಸುವುದು, ಒಂದೊಂದು ರೀತಿ ಹೇಳಿಕೆ ನೀಡುವುದು ರಾಜ್ಯದ ದೃಷ್ಠಿಯಲ್ಲಿ ಒಳ್ಳೆಯದಲ್ಲ.

ನದಿ ಜೋಡಣೆ ಅಷ್ಟು ಸುಲಭದ ಯೋಜನೆಯಲ್ಲ, ನದಿಗಳಲ್ಲಿನ  ಶೇಕಡವಾರು ಇಂತಿಷ್ಟು ನೀರನ್ನು ಮಾತ್ರ ಬಳಸಿಕೊಳ್ಳ ಬೇಕು ಎಂಬ ಒಮ್ಮತದ ನಿಯಮವನ್ನು ಸಿದ್ಧಪಡಿಸಿ ಕೊಳ್ಳ ಬೇಕಿದೆ.

ಯೋಜನೆಯ ಅನಿವಾರ್ಯತೆಯ ಬಗ್ಗೆಯೂ ಅಧ್ಯಯನದ ಅಗತ್ಯವಿದೆ. ಇದೂವರೆಗೂ ರಾಜ್ಯ ಸರ್ಕಾರ ಇಂಥ ಒಂದು ಪ್ರಯತ್ನ ಮಾಡೇ ಇಲ್ಲ ಎಂದರೆ ತಪ್ಪಾಗಲಾರದು. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಪಾ¯ನೆ ಆಗಿಲ್ಲ. ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬ ಗಾದೆಯ ಮಾತು ಸತ್ಯವಾಗಿದೆ

ಇದೂವರೆಗೂ ಆಡಳಿತ ನಡೆಸಿದ ಎಲ್ಲಾ ಪಕ್ಷಗಳ ರಾಜ್ಯ ಸರ್ಕಾರದ ನೀರಾವರಿ ಯೋಜನೆಗಳು ಇಂಜನಿಯರಿಂಗ್ ಯೋಜನೆಗಳು ಆಗಿಲ್ಲ. ಪೊಲಿಟಿಕಲ್ ಯೋಜನೆಗಳಾಗಿವೆ ಎಂಬ ಮಾತು ಕೇಳಿ ಬರುತ್ತಿವೆ.

ಬೆಂಕಿಗೆ ಗಂಟೆ ಕಟ್ಟುವರು ಯಾರು?

ನಮ್ಮ ಮುಖ್ಯ ಮಂತ್ರಿಯವರು ಮತ್ತು ಜಲಸಂಪನ್ಮೂಲ ಸಚಿವರು ಈ ಎಲ್ಲಾ ವಿಚಾರಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡಿ ಒಂದು ರೂಪು ರೇಷೆ ಸಿದ್ಧಪಡಿಸುವರೇ ಕಾದುನೋಡಬೇಕಿದೆ.