22nd December 2024
Share

TUMAKURU:SHAKTHIPEETA FOUNDATION

ತುಂಗಾಭಧ್ರಾ ನದಿಯಲ್ಲಿ ಸುಮಾರು 35 ಕ್ಕೂ ಹೆಚ್ಚು ಟಿ.ಎಂ.ಸಿ.ಅಡಿ ನೀರಿನಷ್ಟು ಹೂಳು ತುಂಬಿ ನಮ್ಮ ಪಾಲಿನ ನೀರು ನಿರಾಯಸವಾಗಿ ಆಂದ್ರ ಪ್ರದೇಶಕ್ಕೆ ಹರಿದು ಹೋಗುತ್ತಿದೆ.

ನಮ್ಮ ರಾಜ್ಯ ಸರ್ಕಾರ ಹೂಳು ತೆಗೆಯುವುದು ಅಸಾಧ್ಯ ಎಂದು ಪಕ್ಕದ ನವಿಲೆಯಲ್ಲ ಹೊಸ ಡ್ಯಾಂ ಕಟ್ಟಲು ಸಿದ್ಧತೆ ನಡೆಸುತ್ತಾ ಇದೆ.

ಕೇಂದ್ರ ಸರ್ಕಾರದ NWDA ಬೇಡ್ತಿ ನೀರನ್ನು ತಂದು ತುಂಗಾಭದ್ರಾ ಡ್ಯಾಂಗೆ ಹಾಕಲು ಡಿಪಿಆರ್ ಮಾಡುತ್ತಿರುವ ಮಾಹಿತಿ ಕೇಂದ್ರ ಜಲಶಕ್ತಿ ಸಮಿತಿ ಸದಸ್ಯರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನನ್ನ ಗಮನಕ್ಕೆ ಬಂತು.

ರಾಜ್ಯ ಸರ್ಕಾರದ ಪತ್ರವ್ಯವಹಾರ ನೋಡಿದಾಗ ಅವರು ಸಹ ತುಂಗಾಭಧ್ರಾ ಡ್ಯಾಂಗೆ ಬೇಡ್ತಿ ನೀರು ಹಾಕುವುದು ಬೇಡ ಪ್ರತ್ಯೇಕವಾಗಿ ಹಿರೇವಡ್ಡಟ್ಟಿ ಡ್ಯಾಂ ನಿರ್ಮಾಣ ನಿರ್ಮಾಣ ಮಾಡಿ ನೀರು ಸಂಗ್ರಹಮಾಡಲು ಪತ್ರ ಬರೆದಿದ್ದಾರೆ.

ಆದರೇ ಯರೋ ಕತರ್ನಾಗ್ ಆಂದ್ರದ ಬಗ್ಗೆ ಕಾಳಜಿ ಇರುವ ಅಧಿಕಾರಿ ಕೊಪ್ಪಳ ಲೋಕಸಭಾ ಸದಸ್ಯರಾದ ಶ್ರೀ ಕರಡಿಸಂಗಣ್ಣನವರಿಂದ ಬೇಡ್ತಿ ನೀರನ್ನು ತುಂಗಾಭಧ್ರಾ ಡ್ಯಾಂಗೆ ಹಾಕಿ ಎಂದು ಪತ್ರ ಬರೆಸಿದ್ದಾರೆ.

ಬಹುಷಃ ಜಿ.ಎಸ್.ಬಸವರಾಜ್ ರವರು ಈ ಬಗ್ಗೆ NWDA ಪತ್ರ ಸಮರ ಮಾಡಿದ್ದಾರೆ. ಮೊಬೈಲ್ ಮೂಲಕ ಎಲ್ಲರಿಗೂ ಜಾಡಿಸಿದ್ದಾರೆ. ಎರಡು ಮೂರು ಭಾರಿ NWDA ಕಚೇರಿಗೂ ಭೇಟಿ ನೀಡಿದ್ದಾರೆ.ಆದರೂ ಫೀಸಿಭಿಲಿಟಿ ಎಂದು ಹೇಳುತ್ತಲೇ ಇದ್ದರು.

ಕೊನೆಗೂ  ಬೇಡ್ತಿ ನೀರನ್ನು ತುಂಗಾಭಧ್ರಾ ಡ್ಯಾಂಗೆ ಹಾಕದೆ ಹಿರೆವಡ್ಡಟ್ಟಿ ಡ್ಯಾಂಗೆ ಹಾಕಲು ಕೇಂದ್ರ ಸರ್ಕಾರದ – ತಾತ್ವಿಕವಾಗಿ ಒಪ್ಪಿದೆ. ದೆಹಲಿಯಲ್ಲಿ ಕಚೇರಿಯಲ್ಲಿ ಭೇಟಿ ಮಾಡಿದಾಗ– NWDA ಡೈರೆಕ್ಟರ್ ಜನರಲ್ ಶ್ರೀ ಭೂಪೇಂದ್ರ ಸಿಂಗ್ ಈ ಟಿಪ್ಪಣೆ ನೀಡಿದ್ದಾರೆ.

‘ನಾನು ಬಗ್ಗೆ ಪತ್ರಿಕೆಯಲ್ಲಿ ಬರೆದಾಗ ಗಮನಿಸಿದ ಒಬ್ಬ ಪರಿಣಿತ ತಜ್ಞ ಏನಾದರೂ ಮಾಡಿ, ರಾಜ್ಯಕ್ಕೆ ಅನೂಕೂಲ ಮಾಡಿ ಎಂದು ಮನವಿ ಮಾಡಿದ್ದರು. ಅವರು ಅವರ ಹೆಸರನ್ನು ಗೌಪ್ಯವಾಗಿಡುವಂತೆಯೂ ಹೇಳಿದ್ದಾರೆ.