ಡೆಮೊ ರೈಲಿಗೆ ಹೆಚ್ಚುವರಿ ಬೋಗಿ ಹಾಕಿ:ಜಿ.ಎಸ್.ಬಸವರಾಜ್
TUMAKURU:SHAKTHIPEETA FOUNDATION
ದಿನಾಂಕ 17/2/2022 ರಂದು ನೈರುತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗಾಧಿಕಾರಿಗಳಾದ ಶ್ರೀ ಶ್ಯಾಮ್ ಸಿಂಗ್ ಅವರನ್ನು ಅವರ ಕಚೇರಿಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್. ಬಸವರಾಜ್ ರವರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ತುಮಕೂರು-ಯಶವಂತಪುರ ನಡುವೆ ಡೆಮೊ ರೈಲು ಇದ್ದು, ಅದು ಬೆಂಗಳೂರಿಗೆ ದಿನನಿತ್ಯ ಪ್ರಯಾಣಿಕರಿಗೆ ಬಹಳ ಅನುಕೂಲವಾಗಿದೆ. ಇದು ತ್ವರಿತ ಸಮೂಹ ಸಾರಿಗೆ ವ್ಯವಸ್ಥೆ ಆಗಿರುವುದರಿಂದ ದಿನ ನಿತ್ಯ ಸಾವಿರಾರು ಪ್ರಯಾಣಿಕರು ಡೆಮೊ ರೈಲು ಸೇವೆಯನ್ನು ಬಳಸುತ್ತಾರೆ.
ಆದರೆ ಈ ಸೇವೆಗೆ ಕೇವಲ 8 ಸಂಖ್ಯೆ ಬೋಗಿಗಳು ಮಾತ್ರ ಇರುವುದರಿಂದ ಇಲ್ಲಾ ಬೋಗಿಗಳಲ್ಲಿ ತುಂಬಿ ತುಳುಕುವ ಪರಿಸ್ಥಿತಿ ಇದೆ. ಬೆಂಗಳೂರಿಗೆ ದಿನ ನಿತ್ಯ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳನ್ನು ಮತ್ತು ಬೇಕಿರುವ ಸೌಕರ್ಯವನ್ನು ಮಾಡುವುದು ರೈಲ್ವೆ ಇಲಾಖೆ ಕರ್ತವ್ಯ.
ಇನ್ನೂ ಕರೋನ ಆತಂಕ ಪೂರ್ಣವಾಗಿ ಹೋಗಿಲ್ಲದ ಕಾರಣ ಆತಂಕದ ನಡುವೆ ಮತ್ತು ನರಕ ಸದೃಶಯಾತನೆ ಯೊಂದಿಗೆ ಪ್ರಯಾಣ ಮಾಡಬೇಕಾಗಿದೆ. ತಕ್ಷಣ ತುಮಕೂರು-ಯಶವಂತಪುರ ಡೆಮೊ ರೈಲು ಸೇವೆ ಬೆಂಗಳೂರು ನಗರ ನಿಲ್ದಾಣವರೆಗೆ ವಿಸ್ತರಿಸುವ ಜೊತೆಗೆ 16 ಬೋಗಿಗಳನ್ನು ಅಳವಡಿಸಬೇಕೆಂದು ಸಲಹೆ ನೀಡಿದರು.
ಮುಂದುವರೆದಂತೆ ತಿಪಟೂರು,ಬಾಣಸಂದ್ರ, ನಿಟ್ಟೂರು,ಗುಬ್ಬಿ ಮತ್ತು ತುಮಕೂರು ನಿಂದ ಬೆಂಗಳೂರಿಗೆ ಪ್ರಯಾಣಿಸುವ ದಿನನಿತ್ಯದ ಪ್ರಯಾಣಿಕರಿಗೆ ರೈಲ್ವೆ ಸೇವೆಗೂ ಕೇವಲ 8 ಬೋಗಿ ಅಳವಡಿಸಿದ್ದು ಅದೂ ಸಹಾ ಸದಾ ತುಂಬಿದ್ದು ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ರೈಲು ಸೇವೆಗೂ ತಕ್ಷಣ 16 ಬೋಗಿ ಅಳವಡಿಸಬೇಕೆಂದು ಸಲಹೆ ನೀಡಿದರು.
ಹೊಸೂರು, ಮೈಸೂರು,ಬಂಗಾರು ಪೇಟೆ, ಹಿಂದೂಪುರ, ಮಾರ್ಗದಲ್ಲಿ ದಿನ ನಿತ್ಯದ ಪ್ರಯಾಣಿಕರಿಗೆ ಅನುಕೂಲಕ್ಕಾಗಿ 16 ಬೋಗಿ ರೈಲು ಸೇವೆ ಇದ್ದು, ಅದೇ ರೀತಿ ತುಮಕೂರು ಮಾರ್ಗದಲ್ಲೂ ತಕ್ಷಣ ಕೋರಿದ ಎರಡು ರೈಲ್ವು ಸೇವೆಗೆ ತಕ್ಷಣ ಅಳವಡಿಸಬೇಕೆಂದು. ಯಾವುದೇ ಸಬೂಬು ಹೇಳೆದೇ ಅಗತ್ಯ ಕ್ರಮವಹಿಸಲು ಸಲಹೆ ನೀಡಿದರು.
ಜಿ.ಎಸ್. ಬಸವರಾಜ್ ರವರ ಸಲಹೆಗಳಿಗೆ ನೈರುತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗಾಧಿಕಾರಿಗಳಾದ ಶ್ರೀ ಶ್ಯಾಮ್ ಸಿಂಗ್ ಸಕರಾತ್ಮಕ ನಿಲವು ವ್ಯಕ್ತಪಡಿಸಿ ಸಂಬಂಧಿಸಿದ ಅಧಿಕಾರಿಯೊಂದಿಗೆ ತಕ್ಶಣ ಚರ್ಚಿಸಿ ಅಗತ್ಯ ಕ್ರಮವಹಿಸುತ್ತೇನೆಂದು ಭರವಸೆ ನೀಡಿದರು.
ಶ್ರೀ ಟಿ.ಆರ್.ರಘೋತ್ತಮರಾವ್ ರವರು ಮತ್ತು ನನ್ನ ಸಂಪರ್ಕ ಸುಮಾರು 23 ವರ್ಷಗಳಾಗಿವೆ. ನಾನು ಅಧಿಕಾರಿಗಳು ಕೆಲಸ ಮಾಡದೆ ಇದ್ದಾಗ ಖಡಕ್ ಆಗಿ ಹೇಳಿದಾಗ, ಅವರು ಪಾಪ ಹಾಗೆ ಹೇಳಬಾರದಿತ್ತು ಎಂದು ನನಗೆ ಹೇಳುತ್ತಿದ್ದರು.
‘ಇಂದು ಅವರು ಅಧಿಕಾರಿಗೆ ಹೇಳಿದ ಖಡಕ್ ಮಾತು ಶೀಘ್ರವಾಗಿ ಸಮಸ್ಯೆ ಬಗೆಹರಿಸಿದ್ದರೆ ನಿಮ್ಮ ಕಚೇರಿ ಮುಂದೆ ಸಂಸದರು ಧರಣಿ ಕುಳಿತು ಕೊಳ್ಳಲಿದ್ದಾರೆ ಎಂಬ ಎಚ್ಚರಿಕೆ ನೀಡಿದ್ದು ನೋಡಿ, ನಾನು ಮತ್ತು ಸಂಸದರು ನಗುವಂತೆ ಮಾಡಿತು.’
ಇನ್ನೂ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.