22nd November 2024
Share

TUMAKURU-SHAKTHIPEETA FOUNDATION

ಜಲ ಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿ ಬಗ್ಗೆ ಸಮಾಲೋಚನೆ ನಡೆಸಲಾಯಿತು. ನಿಜಕ್ಕೂ ಅದ್ಭುತವಾದ ಉದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ, ಒಂದೊಂದು ಹನಿ ನೀರಿನ ಕರಾರು ವಕ್ಕಾದ ಪಕ್ಕಾ ಲೆಕ್ಕಾ ಜಿಐಎಸ್ ನಕ್ಷೆಯೊಂದಿಗೆ ಇರಲೇ ಬೇಕು.

ಔಪಚಾರಿಕ ಸಭೆಯಲ್ಲಿ ಎಲ್ಲವನ್ನು ಅರ್ಥಮಾಡಿಕೊಳ್ಳಲು ಇನ್ನೂ ಅಗಿಲ್ಲ. ಸರ್ಕಾರಿ ಕೆಲಸ ದೇವರ ಕೆಲಸ, ಅಂದರೆ ದೇವರಿಗೆ ಬೇಕಾದ ಕೆಲಸವನ್ನು ದೇವರು ಮಾಡಿಕೊಳ್ಳಬೇಕು.’ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಇಲಾಖೆಗೆ ಕೇಳಿರುವ ಎಲ್ಲಾ ಮಾಹಿತಿಗಳಿಗೂ ಸಮರ್ಪಕವಾದ ಉತ್ತರ ಇಲ್ಲಿ ಸಿಗಲಿದೆ.

ವಿವಿಧ ನಿಗಮಗಳು ಮತ್ತು ವಿವಿಧ ಇಲಾಖೆಗಳಿಂದ, ಇವರು ಕೇಳುವ ಮಾಹಿತಿಯನ್ನು ಅವರಿಗೆ ಕೊಡಿಸಿದರೆ ಮಾತ್ರ ಎಂಬ ಸತ್ಯಾಂಶ ತಿಳಿಯಿತು.ಹಿಂದಿನ ಕೆಲಸದ ಬಗ್ಗೆ ಚರ್ಚೆ ಬೇಡ, ಈಗ ಏನಾಗಬೇಕು ಎಂಬ ಬಗ್ಗೆ ಶ್ರಮ ಹಾಕೋಣ ಎಂಬ ಸಲಹೆ ಚೆನ್ನಾಗಿಯೇ ಇತ್ತು.

‘ನನಗೆ ಒಂದು ಸತ್ಯಾಂಶ ತಿಳಿದಿದ್ದು, ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಜಿಐಎಸ್ ಲೇಯರ್ ಬಗ್ಗೆ ಚರ್ಚೆ ಮಾಡುವಾಗ ನನ್ನನ್ನು ಬೈದುಕೊಳ್ಳುತ್ತಿದ್ದ ಅಧಿಕಾರಿಯೊಬ್ಬರೂ,ಇಲ್ಲಿನ ಜಿಐಎಸ್ ಲೇಯರ್ ನಿಂದ ಆಗುವ ಅನೂಕೂಲಗಳ ಮಾಹಿತಿಯ ಪಾಠ ಕೇಳಿ ನಾನೇ ಸುಸ್ತಾದೆ.’

ನೋಡೋಣ ಯಾವ ರೀತಿ ಈ ಸಂಸ್ಥೆಯಿಂದ ಸಮಗ್ರ ಮಾಹಿತಿ ಪಡೆಯಬಹುದು.ನನ್ನ ಕನಸಿನ ಜಲಗ್ರಂಥದ ಮಾಹಿತಿಯಂತು ಇಲ್ಲಿ ದೊರೆಯಲಿದೆ. ಬಹಳ ಶ್ರಮ ಹಾಕಬೇಕು. ಎಲ್ಲಾ ವಿಧವಾದ ಸಿಬ್ಬಂಧಿ ಇಲ್ಲಿ ಇರುವ ಹಾಗೆ ಕಾಣುತ್ತಿದೆ.