TUMAKURU:SHAKTHIPEETA FOUNDATION
ಆಯವ್ಯಯದಲ್ಲಿ ಮಂಡನೆ ಮಾಡಿದ ನಂತರ, ದಕ್ಷಿಣ ಬಾರತದ ನದಿ ಜೋಡಣೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವಾಲಯ ದಿನಾಂಕ:18.02.2022 ರಂದು ದೆಹಲಿಯಲ್ಲಿ ಮೊದಲ ಸಭೆ ನಡೆಸಿರುವುದು ಮೆಚ್ಚ ಬೇಕಾದ ವಿಷಯ.
‘ದೆಹಲಿಯ ಉನ್ನತ ಮೂಲದ ಮಾಹಿತಿ ಪ್ರಕಾರ ನಮ್ಮ ರಾಜ್ಯದ ಪ್ರತಿನಿಧಿಗಳು ಒಳ್ಳೆಯ ಚರ್ಚೆ ಮಾಡಿದ್ದಾರೆ.’ ಸಭೆ ನಡವಳಿಕೆ ಓದದೆ, ಈ ಸಭೆಯಲ್ಲಿ ನಡೆದ ಚರ್ಚೆ ವಿಚಾರ ಮಾತನಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ನನ್ನದಾಗಿದೆ.
ನಾನು ಹಲವಾರು ಪರಿಣಿತ ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದೇನೆ. ಈ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದೇನೆ.
- ಭಾರತದ ಹಾಗೂ ವಿಶ್ವದ ವಿವಿಧ ದೇಶಗಳಲ್ಲಿ, ಇದೂವರೆಗೂ ವಿವಾದಗಳ ಬೇಸಿನ್‍ನಲ್ಲಿನ ನದಿ ನೀರಿನ ಹಂಚಿಕೆ ಸೂತ್ರಗಳ ಮಾದರಿ ಯೋಜನೆ ಪಟ್ಟಿ.
- ಕೇಂದ್ರ ಸರ್ಕಾರ ಈಗ ಗುರುತಿಸಿರುವ ಕಡೆಯೇ ಏಕೆ ವಾಟರ್ ಟ್ಯಾಪ್ ಮಾಡಬೇಕು. ಇನ್ನೂ ಮೇಲ್ಬಾಗದಲ್ಲಿ ಮಾಡಲು ಅವಕಾಶ ಇಲ್ಲವೇ? ಸಮಗ್ರ ಅಧ್ಯಯನ ಮಾಡಬೇಕು.
- ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಕಾರಿಡಾರ್ ಯೋಜನೆ ರೂಪಿಸಿ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೂ ಜನ ಸಂಖ್ಯೆವಾರು ನದಿ ನೀರು ಹಂಚಿಕೆ ಮಾಡಲಿ. ಹಾಲಿ ಕುಡಿಯುವ ನೀರಿಗಾಗಿ ಇರುವ ಅಲೋಕೇಷನ್ ನೀರನ್ನು ಆಯಾ ರಾಜ್ಯಗಳ ಬೇಡಿಕೆಯಂತೆ ಬದಲಾಯಿಸಿಕೊಳ್ಳಲಿ. ಕುಡಿಯುವ ನೀರಿನ ಯೋಜನೆಗೆ 4-5 ಪಟ್ಟು ಸಾಮರ್ಥ್ಯದ ಡ್ಯಾಂ ಕಟ್ಟಿ ನೀರು ನಿಲ್ಲಿಸ ಬಹುದು. ಪ್ರವಾಹದ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳು ನೀರು ಸಂಗ್ರಹಿಸಿ ಇಟ್ಟುಕೊಳ್ಳ ಬಹುದು. ಬರಗಾಲದಲ್ಲಿ ಬಳಸಿಕೊಳ್ಳಬಹುದು. ಇದರ ಲೆಕ್ಕಾಚಾರ ಆರಂಭವಾಗಿದೆ.
- ಕೃಷ್ಣಾ ಮತ್ತು ಕಾವೇರಿ ನ್ಯಾಯಾಧೀಕರಣದಲ್ಲಿ ಯಾವ ರಾಜ್ಯ ನದಿ ನೀರಿನ ಯೋಜನೆಯಿಂದ ಹೆಚ್ಚಿಗೆ ವಂಚಿತವಾಗಿದೆ ಎಂಬ ಬಗ್ಗೆ ಉಲ್ಲೇಖವಾಗಿದೆಯಂತೆ. ಆ ವರದಿ ನಮ್ಮ ರಾಜ್ಯಕ್ಕೆ ವರದಾನವಾಗಲಿದೆಯಂತೆ, ಈ ಬಗ್ಗೆ ಹೆಚ್ಚು ಚರ್ಚೆ ಮತ್ತು ಅಧ್ಯಯನ ಅಗತ್ಯ.
- ಯೋಜನೆ ವ್ಯಾಪ್ತಿಯ ನೀರಾವರಿ ಯೋಜನೆಗಳು ಮತ್ತು ಶೇಕಡವಾರು ಅನೂಕೂಲದ ಮಾಹಿತಿ ಸಂಗ್ರಹಿಸಿ, ಬೇಡಿಕೆ ಆಧಾರದ ಮೇಲೆ, ಶೇಕಡವಾರು ಹಂಚಿಕೆ ಮಾಡಿದರೆ ಹೇಗೆ ಎಂಬ ಬಗ್ಗೆ ಅಧ್ಯಯನ ಮಾಡಬೇಕಲ್ಲವೇ?
ಈ ಐದು ವಿಚಾರಗಳ ಬಗ್ಗೆ ಆಸಕ್ತಿ ಇದ್ದವರು ಮಾಹಿತಿ ನೀಡಲು ಮನವಿ. ಇನ್ನೂ ಯಾವುದಾದರೂ ಐಡಿಯಾ ಇದ್ದಲ್ಲಿ ತಿಳಿಸಿ.
ನಮ್ಮ ರಾಜ್ಯ ಸರ್ಕಾರ ಮತ್ತು ಸರ್ವಪಕ್ಷಗಳು ಈ ಬಗ್ಗೆ ಅಭಿಪ್ರಾಯ ಮಂಡಿಸಲಿ. ವಿರೋಧ ಮಾಡುವುದರ ಬದಲು ಪರ್ಯಾಯ ಸಲಹೆಗಳು ಉತ್ತಮ ಅಲ್ಲವೇ?
ನಮ್ಮ ರಾಜ್ಯದಲ್ಲಿನ ಪರಿಣಿತರ ಸಲಹೆ ಕೇಳುವವರು ಯಾರು? ಎಲ್ಲರೂ ಸರ್ವಜ್ಞರೇ?
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಜಲಶಕ್ತಿ ಸಚಿವಾಲಯದ ಸಮಿತಿ ಸದಸ್ಯರಾಗಿರುವುದರಿಂದ, ಈ ಎಲ್ಲಾ ಪರ್ಯಾಯ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.