TUMAKURU:SHAKTHIPEETA FOUNDATION
ಪ್ರಧಾನಿಯವರು ಮತ್ತು ಮುಖ್ಯ ಮಂತ್ರಿಯವರಿಗೆ ಪತ್ರ ಬರೆಯುವ ಮೊದಲು ತಮ್ಮ ಸಲಹೆಗಳಿಗಾಗಿ ಬಹಿರಂಗ ಮನವಿ.
- ಪ್ರಧಾನಿ ಶ್ರೀ ನರೇಂದ್ರಮೋದಿಯವರ ಸರ್ಕಾರ ಮನೆ.ಮನೆಗೆ ಕುಡಿಯುವ ನೀರಿನ ನಲ್ಲಿ ಹಾಕಿ 2024 ರೊಳಗೆ ಶಾಶ್ವತವಾದ ನೀರು ಕೊಡಬೇಕೆಂಬ ದೃಢ ನಿರ್ಧಾರ ಮಾಡಿ ‘ಜಲಜೀವನ್ ಮಿಷನ್ ಯೋಜನೆ’ ಘೋಷಣೆ ಮಾಡಿದೆ.
- ಈಗ ಹಾಲಿ ಇರುವ ಪ್ರಕಾರ ಯೋಜನೆ ರೂಪಿಸಿದರೆ, ‘ದಾಖಲೆಯಲ್ಲಿ ಶೇ 100 ರಷ್ಟು ಪ್ರಗತಿ’ ತೋರಿಸಿ, ಬಹಳಷ್ಟು ಪ್ರದೇಶದಲ್ಲಿ ‘ನಲ್ಲಿಯಲ್ಲಿ ಮಾತ್ರ ನೀರು ಬರುವುದು ಕಷ್ಟ ‘
- ‘ದಕ್ಷಿಣ ಭಾರತದ ನದಿ ಜೋಡಣೆ’ ಮಾಡುವುದಾಗಿ ಕೇಂದ್ರ ಸರ್ಕಾರ 2022-2023 ರಲ್ಲಿ ಘೋಷಣೆ ಮಾಡಿದೆ.
- ‘ನದಿ ಜೋಡಣೆ ನೀರಿನ ಹಂಚಿಕೆ ಸೂತ್ರ’ ಮಾಡುವ ಬಗ್ಗೆ ಚರ್ಚೆ ಆರಂಭವಾಗಿದೆ.
- ಮೊದಲು ಈ ನದಿ ಜೋಡಣೆ ವ್ಯಾಪ್ತಿಗೆ ಬರುವ ‘ರಾಜ್ಯಗಳ ಅಂತಿಮ ಪಟ್ಟಿ’ ಪ್ರಕಟಿಸಬೇಕು.
- ನಮ್ಮ ಗಮನಕ್ಕೆ ಬಂದ ಹಾಗೆ ಈ ಪಟ್ಟಿಯಲ್ಲಿರುವಂತೆ ‘ಎಂಟು ರಾಜ್ಯಗಳು’ ಈ ವ್ಯಾಪ್ತಿಗೆ ಬರಬಹುದು.
- ಪಟ್ಟಿಯಲ್ಲಿರುವಂತೆ ಆಯಾ ರಾಜ್ಯಗಳ ‘ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿನ ಲೆಕ್ಕ’ ಹಾಕಲಾಗಿದೆ.
- ಈ ನದಿ ಜೋಡಣೆಯನ್ನು ‘ಜಲಜೀವನ್ ಮಿಷನ್ ಕಾರಿಡಾರ್’ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು.
- ಆಯಾ ರಾಜ್ಯಗಳು ಈಗಾಗಲೇ ಕುಡಿಯುವ ನೀರಿಗೆ ಮಾಡಿಕೊಂಡಿರುವ ‘ನದಿ ನೀರಿನ ಅಲೋಕೇಷನ್ ಬಗ್ಗೆ ತಲೆಕೆಡಿಸಿಕೊಳ್ಳಬಾರದು’. ಕೈಗಾರಿಕಾ ಪ್ರದೇಶಗಳಿಗೆ ಮತ್ತು ಲೈವ್ ಸ್ಟಾಕ್ ಗಳಿಗೆ ಆ ನೀರು ಬಳಸಬಹುದಾಗಿದೆ.
- ಉದಾಹರಣೆಗೆ ಕರ್ನಾಟಕ ರಾಜ್ಯಕ್ಕೆ 2050 ರವರೆಗೆ ಅಗತ್ಯವಿರುವ ಕುಡಿಯುವ ನೀರು ಸುಮಾರು 107.80 ಟಿ.ಎಂ.ಸಿ.ಅಡಿ ನೀರು. ಈ ನೀರಿನ 5 ಪಟ್ಟು ಸಾಮಾಥ್ರ್ಯದ ವಾಟರ್ ಬ್ಯಾಂಕ್ ನಿರ್ಮಾಣ ಅಂದರೆ, ಸುಮಾರು ‘539 ಟಿ.ಎಂ.ಸಿ.ಅಡಿ ನೀರಿನ ಸಾಮಾಥ್ರ್ಯದ ವಾಟರ್ ಬ್ಯಾಂಕ್’ ಗಳನ್ನು ರಾಜ್ಯದ 31 ಜಿಲ್ಲೆಗಳಲ್ಲಿ ಎಲ್ಲಿ ಬೇಕಾದರೂ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡುವುದು. ಇದು ಎಲ್ಲಾ ರಾಜ್ಯಕ್ಕೂ ಅನ್ವಯವಾಗಲಿದೆ.
- ಜಲಜೀವನ್ ಮಿಷನ್ ಗ್ರಾಮೀಣ ಪ್ರದೇಶದ ಯೋಜನೆಯಾದರೂ ಇಲ್ಲಿ ‘ನಗರ ಮತ್ತು ಗ್ರಾಮೀಣ ಪ್ರದೇಶಗಳ ನೀರಿನ ಲೆಕ್ಕ’ಹಾಕಲಾಗಿದೆ.
- ‘ಮೊದಲನೆ ಹಂತದ ನದಿ ಜೋಡಣೆ’ ಯೋಜನೆಯಲ್ಲಿ ಜನಸಂಖ್ಯೆವಾರು ಪಟ್ಟಿಯಲ್ಲಿರುವಂತೆ ನೀರಿನ ಹಂಚಿಕೆ ಮಾಡುವುದು.
- ‘ನಂತರ ಎರಡನೇ ಹಂತದ ನದಿ ಜೋಡಣೆ’ ಯೋಜನೆಯಲ್ಲಿ ಉಳಿದ ನೀರಿನ ಯೋಜನೆ ರೂಪಿಸುವುದು.
- ಆಯಾ ರಾಜ್ಯಗಳು ‘ಪ್ರವಾಹದ ಸಂದರ್ಭದಲ್ಲಿ ಈ ಡ್ಯಾಂಗಳಿಗೆ, ಯಾವುದೇ ನದಿ ಪಾತ್ರದ ನೀರು ತುಂಬಿಸಿಕೊಳ್ಳಲು ’ ಕೇಂದ್ರ ಸರ್ಕಾರ ಅನುಮತಿ ನೀಡುವುದು.
- ಜಲಜೀವನ್ ಮಿಷನ್ ಕಾರಿಡಾರ್ ವಿಶೇಷ ಯೋಜನೆ ಎಂದು ಪರಿಗಣಿಸಿ. ಅಗತ್ಯವಿರುವ ರಾಜ್ಯಗಳ ಪಾಲಿನ ಅನುದಾನವನ್ನು ‘ಕೇಂದ್ರ ಸರ್ಕಾರ ಬಡ್ಡಿ ರಹಿತ ಸಾಲ’ವಾಗಿ ನೀಡಬಹುದಾಗಿದೆ.
- ಈ ಯೋಜನೆಯನ್ನು ‘ಪಿಪಿಪಿ ಯೋಜನೆಯಡಿ ಮಾಡಲು ಸಾಧಕ-ಬಾಧಕ’ಗಳ ಬಗ್ಗೆಯೂ ಪರಿಶೀಲನೆ ಮಾಡಬೇಕಾಗುವುದು.
- ಜಲಜೀವನ್ ಮಿಷನ್ ಯೋಜನೆಯೂ ‘ಯಶಸ್ವಿಯಾಗಿ’ ಆಗಲಿದೆ, ನದಿ ಜೋಡಣೆಯ ನೀರಿನ ಹಂಚಿಕೆಯೂ ಸುಸೂತ್ರವಾಗಿ ‘ಬಗೆಹರಿಯಲಿದೆ.’
- ರಾಜ್ಯಗಳ ಜನಸಂಖ್ಯೆ ವಿಚಾರ ‘ದೇವರಿಗೆ ಬಿಟ್ಟು ಬಿಡಬೇಕು’. ಹುಟ್ಟಿಸಿದ ದೇವರೇ ಈ ನೀರಿನ ಹಂಚಿಕೆ ಮಾಡಿದ್ದಾನೆಂದು ತಿಳಿದುಕೊಳ್ಳ ಬೇಕು.
- ನಂತರದ ನದಿ ಜೋಡಣೆ ನೀರನ್ನು ‘ಕೃಷಿಗಾಗಿ’ ಬಳಸಲು ಚಿಂತನೆ ನಡೆಸಬೇಕು.
- ಈಗ ಈ ರೀತಿ ಆರಂಭ ಮಾಡಿದರೆ 100 ನೇ ಸ್ವಾತಂತ್ರ್ಯ ದಿನದ ವೇಳೆಗೆ ಈ ರಾಜ್ಯಗಳ ಜನತೆ ‘ಕಡೇ ಪಕ್ಷ ಕುಡಿಯುವ ನೀರಿನ ಬವಣೆಯಿಂದ ಪಾರಾಗಲಿದ್ದಾರೆ.’
- ಇಲ್ಲದೇ ಇದ್ದಲ್ಲಿ ನದಿ ಜೋಡಣೆ ಮತ್ತು ಜಲಜೀವನ್ ಮಿಷನ್ ಎರಡು ಯೋಜನೆಗಳು ‘ಕಡತದಲ್ಲಿ, ಮಾಧ್ಯಮಗಳಲ್ಲಿ ಮತ್ತು ಬಾಷಣಗಳಲ್ಲಿ ಮಾತ್ರ ಯಶಸ್ವಿಯಾಗಲಿವೆ.’
ಶಕ್ತಿಪೀಠ ಫೌಂಡೇಷನ್ ಮನವಿಗೆ ಸ್ಪಂಧಿಸಿ, ಈ ಪಟ್ಟಿ ಮಾಡಿ ನೀಡಿದ ಪರಿಣಿತ ತಜ್ಞರಿಗೆ ಧನ್ಯವಾದ. ಈ ಪಟ್ಟಿಯಲ್ಲಿನ ಡಾಟಾ ಬಗ್ಗೆಯೂ ಪರಿಶೀಲನೆ ಮಾಡಲು ಮನವಿ.