22nd December 2024
Share

TUMAKURU:SHAKTHI PEETA FOUNDATION

ಇಂದು ಮಹಾಶಿವರಾತ್ರಿ,

ಈ ತಿಂಗಳು ಮಾರ್ಚ್,

ಆರ್ಥಿಕ  ಹಣಕಾಸು ವರ್ಷದ ಕೊನೆ ತಿಂಗಳು.

ದಿನಾಂಕ:10.11.2017 ರಂದು  ಜನತೆಯ ಕರ್ನಾಟಕ ವಿಷನ್ ಡಾಕ್ಯುಮೆಂಟ್-2025  ಅನ್ನು ಬಿಡುಗಡೆ ಮಾಡುವ ಮೂಲಕ ಶಕ್ತಿಪೀಠ ಫೌಂಡೇಷನ್ ಅಸ್ಥಿತ್ವಕ್ಕೆ ಬಂತು.

ಆರ್ಥಿಕ ಹಣಕಾಸುÀ ವರ್ಷದ ಪ್ರಕಾರ ಎರಡು ವರ್ಷ ನೋಂದಾವಣೆ ಆಗದೆ ಶಕ್ತಿಪೀಠ ಫೌಂಡೇಷನ್  ಕಾರ್ಯ ನಿರ್ವಹಣೆ ಮಾಡಿದೆ.

ಇನ್ನೂ ನೋಂದಾವಣೆ ಆದ ನಂತರ  ಮೂರು ವರ್ಷ ಶಕ್ತಿಪೀಠ ಫೌಂಡೇಷನ್ ಕಾರ್ಯ ನಿರ್ವಹಣೆ ಮಾಡಿದೆ.

ಶಕ್ತಿಪೀಠ ಫೌಂಡೇಷನ್ ವಿಶಿಷ್ಠ ಎಂದರೆ, ನೋಂದಾವಣೆಗೂ ಮುನ್ನವೇ ಒಂದು ಕ್ಯಾಂಪಸ್ ಮಾಡಬೇಕು ಎಂದು ಜಮೀನು ಕೊಂಡು ಕೊಂಡಿದ್ದು.

ಕ್ಯಾಂಪಸ್ ಯಾವ ರೀತಿ ಇರಬೇಕು, ಇಲ್ಲಿನ ಚಟುವಟಿಕೆಗಳು ಹೇಗಿರಬೇಕು ಎಂಬ ಬಗ್ಗೆ ಅಧ್ಯಯನ ಮಾಡಲು ಸುಮಾರು 5 ವರ್ಷ ಬೇಕಾಯಿತು.

ಈ ಸಮಯದಲ್ಲಿ ಕ್ಯಾಂಪಸ್ ಲೇ-ಔಟ್ ಮಾಡಿ,

ಲೇ-ಔಟ್ ನಲ್ಲಿ ನನ್ನ ಎಲ್ಲಾ ಕನಸುಗಳಿಗೂ ಸ್ಥಳ ನಿಗದಿ ಮಾಡಿ,

ಭೂಮಿಯ ಮೇಲೆ ಇಳಿಸಿದ ನೆಮ್ಮದಿ ನನಗಿದೆ.

ಜೊತೆಗೆ ನನ್ನ ಕನಸುಗಳನ್ನು ಸರ್ಕಾರದ ವಿವಿಧ ಇಲಾಖೆಗಳ ಜೊತೆ ಹಂಚಿಕೊಳ್ಳುವ ಕೆಲಸವೂ ಆರಂಭವಾಗಿದೆ.

ಶಕ್ತಿಪೀಠ ಕ್ಯಾಂಪಸ್ ನಲ್ಲಿನ ಪ್ರಥಮ ಕಟ್ಟಡದ ಕಾಮಗಾರಿ ಕುಂಟುತ್ತಾ ಸಾಗಿದೆ.

ಶಿವ ಬಿಕ್ಷೆ ಚುರುಕುಗೊಳಿಸದಿದ್ದರೆ,

ಶಿವ ಪಾರ್ವತಿಯರು ಯಾವುದೇ ಕಟ್ಟಡದಲ್ಲಿ ವಾಸವಿರಲಿಲ್ಲ, ಮರಗಿಡಗಳ ಮಧ್ಯೆ ಅವರ ಕೈಲಾಸ ಇತ್ತು ಎಂದು ನೆಮ್ಮದಿ ಪಡುತ್ತಾ ಮರಗಿಡಗಳ ಕೆಳಗೆ ಕುಳಿತು ಅಭಿವೃದ್ಧಿ ತಪಸ್ಸು ಮಾಡದೆ ಅನ್ಯ ಮಾರ್ಗವಿಲ್ಲ.

ಈಗ ಹಾಕಿರುವ ಗಿಡ ಮರಗಳಂತೂ ನಗು ನಗುತ್ತಾ ಬೆಳೆಯಲು ಆರಂಭಿಸಿವೆ.

ಇನ್ನೂ ವರ್ಷವೂ ಗಿಡ ಹಾಕುವ ಕಾಯಕ ಇದೆ.

ಆದರೂ ಶಕ್ತಿಪೀಠ ಕ್ಯಾಂಪಸ್ ನಲ್ಲಿ ಒಂದು ಕಟ್ಟಡವಂತೂ ಬೇಕೆ ಬೇಕಿದೆ.

ಸರ್ಕಾರ ಹೇಳಿದಂತೆ ಕಾರ್ಯ ನಿರ್ವಹಿಸಬೇಕೋ ಅಥವಾ ನನಗೆ ತಿಳಿದಂತೆ ಕಾರ್ಯ ನಿರ್ವಹಿಸಬೇಕೋ ಎಂಬ ತೀರ್ಮಾನಕ್ಕೆ ಬರುವ ವರ್ಷ 2022 ಇದಾಗಿದೆ.

ದೇಶದ ಪ್ರಧಾನಿಯವರು ಯಾವಾಗಲೂ 75-100 (2022- 2048) ಅಭಿವೃದ್ಧಿ ಕನಸಿನ ಬೀಜ ಹಾಕುತ್ತಿದ್ದಾರೆ.

ಇದಕ್ಕೆ ಪೂರಕವಾಗಿ, ವಿಶ್ವದ 108 ಶಕ್ತಿದೇವತೆಗಳ ಸಮ್ಮುಖದಲ್ಲಿ,

ಶಕ್ತಿಪೀಠ ಕ್ಯಾಂಪಸ್ ನಿರ್ಮಾಣವೇ ‘ಶಿವಬಿಕ್ಷೆ ಎಂಬ ಚಿಂತನೆ ಈಗ ಮೊಳಕೆಯೊಡೆಯುತ್ತಿದೆ.

ಕಷ್ಟ ಬಂದಾಗ ವೆಂಕಟ ರಮಣ ಎಂಬ ಗಾದೆ ನನೆಪಿಗೆ ಬರುತ್ತಿದೆ.