28th March 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಜಲ ವಿವಾದಗಳನ್ನು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರಸಿಂಗ್ ಶೇಖಾವತ್ ರವರು ಬಗೆ ಹರಿಸುವ ಮೂಲಕ ಕರ್ನಾಟಕದ ಪಾಲಿಗೆ ಭಗಿರಥ ಆಗುವರೇ ಕಾದು ನೋಡಬೇಕು.

ಕರ್ನಾಟಕಕ್ಕೆ ಬಂದಾಗ ರಾಜ್ಯದಲ್ಲಿ ಹಲವಾರು ಕಡೆ ಕುಡಿಯುವ ನೀರಿನಲ್ಲಿ ಯುರೇನಿಯಂ ಇದೆ ಎಂಬ ಅಂಶ ಸಚಿವರ ಗಮನ ಸೆಳೆದಿದೆ. ಅವರ ರಾಜ್ಯವಾದ ರಾಜಸ್ಥಾನ ಬಿಟ್ಟರೆ ಕರ್ನಾಟಕ ನೀರಿನ ಭರದಲ್ಲಿ ಎರಡನೇ ಸ್ಥಾನದಲ್ಲಿದೆ ಎಂಬುದು ಅವರ ಗಮನಕ್ಕೆ ಬಂದಿದೆ.

  1. ದಕ್ಷಿಣ ಭಾರತದ ನದಿ ಜೋಡಣೆ ನೀರಿನ ಹಂಚಿಕೆ ಬಗ್ಗೆ ನಮ್ಮ ಮುಖ್ಯಮಂತ್ರಿಗಳು ಕಡ್ಡಿ ಮುರುರಿದ ಹಾಗೆ ರಾಜ್ಯ ಸರ್ಕಾರದ ಸ್ಪಷ್ಟ ಅಭಿಪ್ರಾಯ ವನ್ನು ಬಹಿರಂಗವಾಗಿ ಪ್ರಕಟಿಸಿದ್ದಾರೆ.
  2. ಮಹಾದಾಯಿ
  3. ಬೇಡ್ತಿ-ಹಿರೆವಡ್ಡಹಟ್ಟಿ ಲಿಂಕ್.
  4. ಮೇಕೆದಾಟು.
  5. ಕೃಷ್ಣ ನದಿ ನೀರಿನ ರಾಷ್ಟ್ರೀಯ ಯೋಜನೆ.
  6. ಭಧ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ.
  7. ಎತ್ತಿನಹೊಳೆ ರಾಷ್ಟ್ರೀಯ ಯೋಜನೆ.
  8. ಪಶ್ಚಿಮಾಭಿಮುಖವಾಗಿ ಹರಿಯುವ ನದಿ ನೀರಿನ ಬಳಕೆ ಎನ್.ಪಿ.ಪಿ ಯೋಜನೆ.
  9. ಹೀಗೆ ಹಲವಾರು ಇತರೆ ಯೋಜನೆಗಳ ಮಂಜೂರಾತಿಗೆ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಗಳು ಕೇಂದ್ರದಲ್ಲಿ ನನೆಗುದಿಗೆ ಬಿದ್ದಿವೆ.

ಇವೆಲ್ಲಾ ಯೋಜನೆಗಳ ಮಂಜೂರಾತಿ ಆಗದಿದ್ದರೆ, ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿಗೆ ಬಹಳ ಕಷ್ಟವಾಗಲಿದೆ. ನೀರಿನ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜನತಾದಳ ಜನರ ಭಾವನೆಗಳನ್ನು ಬಡಿದು ಎಬ್ಬಿಸುವ ಕೆಲಸವನ್ನು ಈಗಾಗಲೇ ಆರಂಭಿಸಿದ್ದಾರೆ.

ಆದ್ದರಿಂದ ರಾಜ್ಯದ ಸಮಸ್ಯೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುವರೇ ಕಾದು ನೋಡಬೇಕು. ಮುಖ್ಯಮಂತ್ರಿಯವರು ಮತ್ತು ಅವರ ಜಲತಂಡ ಕಲಿತಿರುವ ಎಲ್ಲಾ ಕಸರತ್ತುಗಳ ಪ್ರಯೋಗ ಮಾಡುತ್ತಿದ್ದಾರೆ.

ನಮ್ಮ ರಾಜ್ಯದ 40 ಜನ ಸಂಸದರು ಪಕ್ಷಬೇಧ ಮರೆತು ಪ್ರಧಾನಿಯವರನ್ನು ಬೇಟಿಯಾಗುವರೇ ಅಥವಾ ಗೌರಮ್ಮನವರ ಮೌನ ವಹಿಸಿದರೆ, ಗಂಗೆ ಅವರ ಪಾಲಿಗೆ —- ಬರೆಯಲಿದ್ದಾಳೆ.