22nd December 2024
Share

  ಭೂ ಕಬಳಿಕೆ ಟಾಸ್ಕ್ ಪೋರ್ಸ್: .ಟಿ.ರಾಮಸ್ವಾಮಿ ಅಧ್ಯಕ್ಷ ?

TUMAKURU:SHAKTHIPEETA FOUNDATION

ರಾಜ್ಯ ಸರ್ಕಾರ ರಾಜ್ಯದ ‘ಭೂ ಕಬಳಿಕೆ ಟಾಸ್ಕ್ ಪೋರ್ಸ್’ ರಚಿಸಿ,  ಪಕ್ಷಬೇಧ ಮರೆತು ಶ್ರೀ ಎ.ಟಿ.ರಾಮಸ್ವಾಮಿಯವರನ್ನು ಅಧ್ಯಕ್ಷರನ್ನಾಗಿ ಮಾಡಲು ಚಿಂತನೆ ನಡೆಸಿದೆಯಂತೆ.

ರಾಮಸ್ವಾಮಿಯವರ ಕುಟುಂಬದವರು ಮಾತ್ರ ಬೇಡ ಎಂದು ಪಟ್ಟು ಹಿಡಿದಿದ್ದಾರಂತೆ, ಆದಕ್ಕೆ ಮುಖ್ಯಮಂತ್ರಿಯವರು ಝಡ್ + ಸೆಕ್ಯುರಿಟಿ’ ಕೊಡುತ್ತೇವೆ, ಭಯಪಡಬೇಡಿ ರಾಜ್ಯದ ಸಾಲ ತೀರಿಸಲು ಅನೂಕೂವಾಗಲಿದೆ. ಅವರ ಪ್ರಕಾರ ಬೆಂಗಳೂರು ನಗರ ಸುತ್ತಮುತ್ತವೇ ರೂ 5 ಲಕ್ಷ ಕೋಟಿ ಹಣ ಸರ್ಕಾರದ ಬೊಕ್ಕಸಕ್ಕೆ ಬರಲಿದೆ ಎಂದು ಸಮಾದಾನ ಪಡಿಸುತ್ತಿದ್ದಾರಂತೆ.

 ಭೂ ಕಬಳಿಕೆದಾರರು ರಾಮಸ್ವಾಮಿಯವರಿಗೆ ಪರಿಣಾಮಕಾರಿ ಸುಫಾರಿ ತಂಡಕ್ಕೆ ಹುಡುಕಾಟ ಆರಂಭಿಸುವುದೋ ಅಥವಾ ‘ಸೂಟ್ ಕೇಸ್ ಸಿದ್ಧಪಡಿಸಿಕೊಳ್ಳುವುದೋ ಎಂಬ ಚರ್ಚೆ ಆರಂಭಿಸಿದ್ದಾರಂತೆ.

 ಒಂದು ವೇಳೆ ಸರ್ಕಾರ ಕಠೀಣವಾಗಿ ನಿರ್ಧಾರ ಕೈಗೊಂಡಲ್ಲಿ ಒಂದು ‘ದೊಡ್ಡ ಇತಿಹಾಸ ಸೃಷ್ಠಿಸಲಿದೆ. ಆದರೇ ಭೂ ಕಬಳಿಗೆ ಕೈಜೋಡಿಸಿರುವ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಪುಢಾರಿಗಳಿಗೆ ಹೊಸದಾಗಿ ಜೈಲು ಕಟ್ಟಡ ನಿರ್ಮಾಣ ಮಾಡಲು ಅರ್ಧ ಹಣ ಬೇಕಾಗುವುದು.

ಆದ್ದರಿಂದ ಜೈಲು ನಿರ್ಮಾಣದ ಹಣ ಉಳಿಸಲು, ಸರ್ಕಾರ ಭೂ ಕಬಳಿಕೆದಾದರರಿಗೆ ಒನ್ ಟೈಮ್ ಸೆಟ್ಲ್ ಮೆಂಟ್ ಯೋಜನೆ ಘೋಷಣೆ ಮಾಡಿದರೂ, ಸರ್ಕಾರದ ಸಾಲ ತೀರಲಿದೆ. ಭೂ ಕಬಳಿಕೆ ದಾರರಿಗೆ ಪ್ರತಿ ವರ್ಷ ಕಪ್ಪಕಾಣಿಕೆ ನೀಡುವ ಪರಿಪಾಠವೂ ನಿಲ್ಲಲಿದೆ ಎಂಬ ಆಲೋಚನೆ ಮಾಡುತ್ತಿದ್ದಾರಂತೆ.

ಚರ್ಚೆ ಮಾಡಿ ಸುಮ್ಮನಾದರೆ, ಅರಸೀಕೆರೆ ಶಾಸಕರಾದ ಶ್ರೀ ಶಿವಲಿಂಗೇಗೌಡರು ಸದನದಲ್ಲಿ ಹೇಳಿದ ಪ್ರಕಾರ ಮುಂದಿನ ಚುನಾವಣೆಗೆ ರಾಜಕಾರಣಿಗಳಿಗೆ ಅನೂಕೂಲವಂತೂ ಗ್ಯಾರಂಟಿ ಎಂದು ಜನರೂ ಗುಸು, ಗುಸು ಚರ್ಚೆ ಆರಂಭಿಸಿದ್ದಾರಂತೆ.

ಭೂಕಬಳಿಕೆ ಚರ್ಚೆ, ಕರ್ನಾಟಕ ಜನರಿಗೆ ಒಂದು ಜೋಕ್ಸ್ ಆಗಿದೆ.

ಸುಮ್ಮನೆ ಹಾಗೆಜನರ ಭಾವನೆ ಅಷ್ಟೆ.

 ?