22nd December 2024
Share

 TUMAKURU:SHAKTHI PEETA FOUNDATION

ಹಿರಿಯಾರು ತಾಲ್ಲೋಕು ವಾಣಿವಿಲಾಸ ಕಾಲುವೆಯಯ ಅಕ್ಕ-ಪಕ್ಕ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡುವ ಮಹತ್ವದ ಯೋಜನೆಯ ಬಗ್ಗೆ ಚಿತ್ರದುರ್ಗ ಜಿಲ್ಲಾ ಭಧ್ರ ಮೇಲ್ಧಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಶ್ರೀ ರಾಘವನ್ ಅಧ್ಯಕ್ಷತೆಯಲ್ಲಿ ದಿನಾಂಕ:15.03.2022 ರಂದು ಸಭೆ ನಡೆಯಿತು.

2015 ರಲ್ಲಿ ಕಾಲುವೆಯ ಅಕ್ಕ-ಪಕ್ಕ ಇರುವ ನಿಗಮದ ಜಮೀನು ಗುರುತಿಸುವ ಕೆಲಸವನ್ನು ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಆರಂಭ ಮಾಡಿತ್ತು. ರಾಣಿಬೆಣ್ಣೂರಿನ ಜಿಐಎಸ್ ತಜ್ಞ ಶ್ರೀ ಬಸವರಾಜ್ ಸುರಣಗಿ, ಬೆಂಗಳೂರಿನ ಪ್ರೀತಿ ಕ್ಯಾಂಡ್ ಕಂಪನಿಯ ಶ್ರೀ ವೇದಾನಂದಾಮೂರ್ತಿ ಯರವರ ಸಹಕಾರದಿಂದ 5 ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 90 ಎಕರೆ ಸರ್ಕಾರಿ ಜಮೀನು ಗುರುತಿಸಿ ಅಂದಿನ ಮುಖ್ಯ ಇಂಜಿನಿಯರ್ ರವರಾದ ಶ್ರೀ ಶಿವಕುಮಾರ್ ರವರಿಗೆ ನೀಡಲಾಗಿತ್ತು.

ನಂತರ ಅಂದಿನ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಮತ್ತು ವಿಶ್ವೇಶ್ವರಯ್ಯ ಜಲ ನಿಗಮದ ಎಂಡಿಯವರಾದ ಶ್ರೀ ಕೆ.ಜೈಪ್ರಕಾಶ್ ರವರಿಗೆ ಗ್ರೀನ್ ಕಾರಿಡಾರ್ ಯೋಜನೆಯ ಮನವರಿಕೆ ಮಾಡಿದಾಗ   ಕಾಲುವೆಯ ಅಕ್ಕ-ಪಕ್ಕದ ಜಮೀನು ಗುರುತಿಸಿಸಲು ಸೂಚಿಸಿದ್ದರು.

ಇಇ ಯವರಾದ ಶ್ರೀ ಶಿವಕುಮಾರ್ ರವರು, ನಂತರ ಬಂದ ಶ್ರೀ ಚಂದ್ರಹಾಸ್ ರವರು, ನಂತರ ಬಂದ ಶ್ರೀ ಪ್ರಮೀತ್ ರವರು ಮೂರು ಜನರು ಬಂದರೂ ಯೋಜನೆಗೆ ಟೆಂಡರ್ ಕರೆಯಲು ಆಗಲಿಲ್ಲ. ಶ್ರೀ ಪ್ರಮೀತ್ ರವರು  ಪ್ರಕ್ರೀಯೆ ಆರಂಭಿಸಿದ್ದರು. ಈಗ ಬಂದಿರುವ ಇಇ ಶ್ರೀ ಚಂದ್ರಮೌಳಿಯವರು ಚಾಲನೆ ನೀಡಿದ್ದಾರೆ.

ನೋಡಿ ನಾನು ಏಕೆ ಹೇಳುತ್ತಿದ್ದೇನೆ ಎಂದರೆ ನಿಗಮದ ಜಾಗ ಗರುತಿಸುವ ಕೆಲಸ ಆರಂಭಿಸಲು ನಾಲ್ಕು ಜನ ಇಇ ಕಾಲದಲ್ಲೂ ಚಟುವಟಿಕೆ ನಡೆಯುತ್ತಿದೆ. ಸ್ವತಃ ಮುಖ್ಯ ಇಂಜಿನಿಯರ್ ಆಸಕ್ತಿ ವಹಿಸಿದ್ದರೂ, ಹಿಂದಿನ ಎಂಡಿಯವರ ಜೊತೆಗೆ ಹಾಲಿ ನಿಗಮದ ಎಂಡಿಯವರಾದ ಶ್ರೀ ಲಕ್ಷಣ ರಾವ್ ಪೇಶ್ವೆರವರು ಆಸಕ್ತಿ ವಹಿಸಿದ್ದರೂ ವಿಳಂಭವಾಯಿತು.

ಆದರೂ ಪರವಾಗಿಲ್ಲ ಇದು ಸರ್ಕಾರಿ ಕೆಲಸದೇವರ ಕೆಲಸ, ಈಗ ಈ ಯೋಜನೆ ಜಾರಿಗೆ ಚಾಲನೆ ದೊರೆತಿದೆ. ಮುಖ್ಯ ಇಂಜಿನಿಯರ್ ಶ್ರೀ ರಾಘವನ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸ್ವತಃ ಮುಖ್ಯ ಇಂಜಿನಿಯರ್ ಕಾಲುವೆಯ ಅಕ್ಕ-ಪಕ್ಕ ಸುತ್ತಾಡಿ, ಗತ ಕಾಲದಲ್ಲಿ ನಿರ್ಮಾಣ ಮಾಡಿರುವ ಬಹುತೇಕ ಹಲವಾರು ಕಟ್ಟಡಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಾನು ಸಹ ಕಾಲುವೆಯ ಮೇಲೆ ಸುತ್ತಾಡಿ ಜನರು ಹೇಳುವ ಪ್ರಕಾರ ಪ್ರವಾಸಿ ಮಂದಿರ, ಹೆಣ ಸುಡುವ ಕಟ್ಟಡ ಇತ್ಯಾದಿ ಇದ್ದವು ಎಂಬ ಅಭಿಪ್ರಾಯಗಳನ್ನು ಸಂಗ್ರಹ ಮಾಡಿದ್ದೇನೆ.

ಈ ಗ್ರೀನ್ ಕಾರಿಡಾರ್ ಅನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಮಾಡಲೇ ಬೇಕು’ ಎಂಬ ಅಭಿಪ್ರಾಯವನ್ನು  ಶ್ರೀ ರಾಘವನ್ ವ್ಯಕ್ತ ಪಡಿದ್ದಾರೆ. ಹಾಗೂ ಯೋಜನೆಯ ರೂಪು ರೇಷೆ ನಿರ್ಧರಿಸಲು ಕ್ರಮ ಕೈಗೊಂಡಿದ್ದಾರೆ.

ಇಇ ರವರಾದ ಶ್ರೀ ಚಂದ್ರಮೌಳಿಯವರು ಚಿತ್ರದುರ್ಗ ಜಿಲ್ಲೆಯವರಾಗಿದ್ದು, ನಿವೃತ್ತಿಯಾಗುವ ಕೊನೆ ದಿವಸಗಳಲ್ಲಿ ಇಂಥಹ ಪವಿತ್ರವಾದ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದು ಖುಷಿ ವ್ಯಕ್ತ ಪಡಿಸಿದ್ದಾರೆ. ಈಗ ಸರ್ಕಾರಿ ಜಮೀನು ಗುರುತಿಸಿದ ನಂತರ ಗ್ರೀನ್ ಕಾರಿಡಾರ್ ರೂಪುರೇಷೆ ನಿರ್ಧರಿಸಲು ಚಿಂತನೆ ನಡೆಸಿದ್ದಾರೆ.

ವಾಟರ್ ಯೂನಿವರ್ಸಿಟಿ ಕಡತ ಗಾಢ ನಿದ್ದೆ ಹೊಡೆಯುತ್ತಿದೆ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮನವಿ ಮೇರೆಗೆ ತುಮಕೂರಿನ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಅಂದಿನ ಮುಖ್ಯ ಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರ್ ಸ್ವಾಮಿರವರಿಗೆ ಪತ್ರ ಬರೆದ ಹಿನ್ನಲೆಯಲ್ಲಿ, ಅಂದಿನ ಮುಖ್ಯ ಇಂಜಿನಿಯರ್ ಶ್ರೀ ಶಿವಕುಮಾರ್ ರವರು ಈ ಸರ್ಕಾರಿ ಜಾಗದಲ್ಲಿ ವಾಟರ್ ಯೂನಿವರ್ಸಿಟಿ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಮುರುಘಾ ಮಠದ ಶ್ರೀ ಶರಣರು ಮತ್ತು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ರಾಮಲು ರವರು ಪತ್ರ ಬರೆದರೂ ಅದು ಕಡತದಲ್ಲಿ ಇನ್ನೂ ಗಾಢ ನಿದ್ದೆ ಹೊಡೆಯುತ್ತಿದೆ.

ಪ್ರವಾಸಿ ತಾಣ

ಹಿರಿಯೂರಿನ ವಿಧಾನಸಭಾ ಸದಸ್ಯರಾದ ಶ್ರೀ ಮತಿ ಪೂರ್ಣಿಮಾ ಶ್ರೀನಿವಾಸ್ ರವರು ಹಿರಿಯೂರಿನ ನಗರ ಪ್ರದೇಶದಲ್ಲಿ ಕಾಲುವೆಯ ಪಕ್ಕ, ಪ್ರವಾಸಿ ತಾಣವಾಗಿ ನಿರ್ಮಾಣ ಮಾಡುವ ಬಗ್ಗೆ ಬಹಳ ಹಿಂದೆ ನನ್ನೊಂದಿಗೆ ಚರ್ಚೆ ನಡೆಸಿದ್ದರು. ಪಕ್ಕಾ ಮಾಹಿತಿ ಸಿಗುವವರೆಗೂ  ಏನೂ ಮಾಡಲು ಸಾಧ್ಯವಾವಾಗಿರಲಿಲ್ಲ. ಇನ್ನೂ ಒಂದೆರಡು ತಿಂಗಳಿನಲ್ಲಿ ಅವರ ಕನಸಿಗೆ ಸ್ಪಷ್ಠ ರೂಪುರೇಷೆ ಸಿದ್ಧವಾಗಲಿದೆ.

ಮಧ್ಯೆ ಕರ್ನಾಟಕದ ವಾಟರ್ ಬ್ಯಾಂಕ್

ವಾಣಿ ವಿಲಾಸ ಡ್ಯಾಂ ಮಧ್ಯೆ ಕರ್ನಾಟಕದ ವಾಟರ್ ಬ್ಯಾಂಕ್ ಆಗಬೇಕು ಎಂಬ ಚಿಂತನೆಯನ್ನು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಕಂಡಿದ್ದರು. ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ನದಿ ನೀರಿನ ಮೂಲಕ ಸುಮಾರು 30 ಟಿ.ಎಂ.ಸಿ ಅಡಿ ನೀರು ನಿಲ್ಲಿಸುವ ಚಿಂತನೆ ಮಾಡಿದ್ದಾರೆ.

ಈ ಯೋಜನೆ ಬಗ್ಗೆ ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರವರು ಸಹ ಕನಸು ಕಂಡಿದ್ದರು, ಈಗ ಏಕೋ ಮೌನವಾಗಿದ್ದಾರೆ.

ಒಬ್ಬ ಇಂಜಿನಿÀಯರಿಂಗ್ ವಿದ್ಯಾರ್ಥಿ ಅಘಿನಾಶಿನ ನೀರನ್ನು ತುಂಬಿಸುವ ಪ್ರಾಜೆಕ್ಟ್ ವರ್ಕ್ ಮಾಡಿ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆಯೂ ನಿರಂತರವಾಗಿ ಚರ್ಚೆನಡೆಯುತ್ತಿದೆ.

ಜಲಸಂಪನ್ಮೂಲ ಕಾರ್ಯದರ್ಶಿಯವರಾಗಿದ್ದ ಶ್ರೀ ಅನಿಲ್ ಕುಮಾರ್ ರವರು ವಾಟರ್ ಬ್ಯಾಂಕ್ ಯೋಜನೆಯ  ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಈಗ ಮುಖ್ಯ ಮಂತ್ರಿಯವರ ಆಪ್ತ ಕಾರ್ಯದರ್ಶಿಯವರಾಗಿದ್ದಾರೆ, ಆದರೂ ಯೋಜನೆ ವೇಗ ಪಡೆಯಲಿಲ್ಲ ಎಂಬ ಕೊರಗು ನನ್ನದಾಗಿದೆ.

ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಈ ಯೋಜನೆಗೆ ಯಾರು ‘ಪಾದಯಾತ್ರೆ’ಮಾಡುತ್ತಾರೆ ಕಾದು ನೋಡೋಣ ?