24th July 2024
Share

TUMAKURU:SHAKTHI PEETA FOUNDATION

ಗ್ರಾಮೀಣ ಪ್ರದೇಶದಲ್ಲಿ ಕುರುಡಿ ಎನ್ನುವದಕ್ಕಿಂತ ಚನ್ನಕ್ಕ ಎನ್ನುವುದೇ ಲೇಸು ಎಂಬ ಒಂದು ಗಾದೆ ಮಾತಿದೆ,

ಜಲಗ್ರಂಥ ‘ ಮೌಲ್ಯ ಮಾಪನ ವರದಿ ಮಾಡುವ ಕೆಲಸವನ್ನು ಆರಂಭಿಸಲಾಗಿದೆ. ನೀರಾವರಿಗೆ ಸಂಭಂಧಿಸಿದ ಪ್ರತಿಯೊಂದು ಇಲಾಖೆಗೂ ಭೇಟಿ ನೀಡುತ್ತಿದ್ದೇನೆ, ಬೆಂಗಳೂರಿನ ಕೆಲವು ಇಲಾಖೆಗಳಲ್ಲಿನ ಕೆಳಹಂತದ ಅಧಿಕಾರಿಗಳ ಮತ್ತು ನೌಕರರ ಸಂಪರ್ಕ ಹೊಸದಾಗಿ ಆಗಬೇಕಿದೆ. ಕಡತದ ಅನುಸರಣೆ ಮಾಡಬೇಕಾದಲ್ಲಿ ಅವರೊಂದಿಗೆ ಚರ್ಚೆ ಮಾಡುವ ಹಂತದಲ್ಲಿ ನನಗೆ ನಾಚಿಕೆಯಾಗುವಂತೆ ವರ್ತೀಸುತ್ತಾರೆ, ಪ್ರತಿ ಕಡತಕ್ಕು ಲಂಚ ನೀಡಬೇಕು ಎಂಬ ಅನಿಮಿಯತ ಒಪ್ಪಂದ ಆಗೀದೆಯೇ ಎಂಬ ಅನುಮಾನ ನನಗೆ ಬಂದಿದೆ.

‘ಜೊತೆಗೆ ಪ್ರತಿ ಒಂದು ಪೇಪರ್ ಪಡೆಯಲು ಕಾಯಲೇ ಬೇಕು, ಅವರಿಗೆ ಮಾತ್ರ ಕೆಲಸ, ನಾವೂ ಕೆಲಸ ಇಲ್ಲದ ಅಬ್ಬೆ ಪಾರಿಗಳೇನೋ ಎಂಬಂತೆ ವರ್ತಿಸುವವರು ಇದ್ದಾರೆ. ಕೆಲವರಿಗೆ ಸೌಜನ್ಯಕ್ಕೂ ಮಾತನಾಡಿಸುವ ಔದಾರ್ಯ ಇಲ್ಲದಾಗಿದೆ’.

ತುಮಕೂರು ಜಿಲ್ಲೆಯಲ್ಲಿ ಕೆಲಸ ಮಾಡಿರುವ ಅಧಿಕಾರಿಗಳು ಮತ್ತು ನೌಕರರು ಇದ್ದ ಕಚೇರಿಗಳಲ್ಲಿ ಮಾತ್ರ ಒಳ್ಳೆಯ ಸ್ಪಂದನೆ ಇರುತ್ತದೆ.

ಉಳಿದ ಕಚೇರಿಗಳಲ್ಲಿ ಮಾಮೂಲು ಎಂಬಂತೆ ಇರುವ ವರ್ತನೆ ಅನುಭವ ಆಗಿದೆ. ನಾನು ಬಹಳ ತಾಳ್ಮೆಯಿಂದ  ಕುರುಡಿ ಎನ್ನುವದಕ್ಕಿಂತ ಚೆನ್ನಕ್ಕ ಎನ್ನುವುದೇ ಲೇಸು ಎಂಬ ಗಾದೆಗೆ ಅನುಗುಣವಾಗಿ ನಡೆದುಕೊಳ್ಳುತ್ತೇದ್ದೇನೆ,

‘ಈ ರೀತಿ ಆದರೇ ಇನ್ನೂ ನೂರು ವರ್ಷವಾದರೂ ಡಾಟಾ ಸಂಗ್ರಹಿಸಲು ಸಾಧ್ಯಾವಾಗುವುದಿಲ್ಲ ಎಂಬ ಅನುಭವ ನನಗೆ ಈಗಾಗಲೇ ಆಗಿದೆ’.

ಇನ್ನೂ ಮುಂದೆ ಯಾವ ಇಲಾಖೆಯ ಅಧಿಕಾರಿ ಮತ್ತು ನೌಕರರು ಎಷ್ಟು ಸಮಯ ಹಾಳು ಮಾಡುತ್ತಿದ್ದಾರೆ, ಡಾಟಾ ನೀಡಲು ಎಷ್ಟು ಸತಾಯಿಸುತ್ತಿದ್ದಾರೆ, ಎಂಬ ಬಗ್ಗೆ ಇ-ಪೇಪರ್ ನಲ್ಲಿ ಬರೆಯಲು ನಿರ್ಧರಿಸಲಾಗಿದೆ.

ಬರವಣಿಯನ್ನು ಮಾನ್ಯ ಮುಖ್ಯಮಂತ್ರಿಯವರಿಗೆ, ಪ್ರಧಾನ ಮಂತ್ರಿಯವರಿಗೆ, ವಿರೋಧ ಪಕ್ಷಗಳ ನಾಯಕರಿಗೆ ಮತ್ತು ಆಯಾ ಇಲಾಖೆಯ ಸಚಿವರುಗಳಿಗೆ ಮತ್ತು ಉನ್ನತ ಅಧಿಕಾರಿಗಳಿಗೂ ಲಿಂಕ್ ಮಾಡಲು ನಿರ್ಧಾರ ಮಾಡಿದ್ದೇನೆ’.

ನೀವೇನಂತಿರಾ?