ಮಾಸ್ಟರ್ ಪ್ಲಾನ್ ಇನ್ನೂ ಭ್ರೂಣಾವಸ್ಥೆಯಲ್ಲಿದೆ
TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯ ತುಮಕೂರು-ಗುಬ್ಬಿ-ಶಿರಾ-ಕೊರಟಗೆರೆ-ಮಧುಗಿರಿ ತಾಲ್ಲೋಕುಗಳ ಸುಮಾರು ಒಂದು ಲಕ್ಷ ಎಕರೆ ಪ್ರದೇಶದ ಈ ನಕ್ಷೆಯಲ್ಲಿರುವ ಸುಮಾರು 20000 ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದ ಇಂಡಸ್ಟ್ರಿಯಲ್ ಮತ್ತು ಕಮರ್ಷಿಯಲ್ ಹಬ್ ತಲೆ ಎತ್ತಲಿದೆ.
ತುಮಕೂರು ತ್ರಿವಳಿ ನಗರವಾಗಿ ಹೊರಹೊಮ್ಮಲಿದೆ. ಸುಮಾರು 84 ಕೀಮೀ ಸುತ್ತಳತೆಯ ಫೆರಿ-ಫೆರಿಯಲ್ ರಿಂಗ್ ರಸ್ತೆ ನಿರ್ಮಾಣವಾಗಲಿದೆ. ತುಮಕೂರು ನಗರದಿಂದ ಫೆರಿ-ಫೆರಿಯಲ್ ರಿಂಗ್ ರಸ್ತೆವರೆಗೆ ಅದ್ಭುತವಾದ ರೇಡಿಯಲ್ ರಸ್ತೆಗಳು ನಿರ್ಮಾಣವಾಗಲಿವೆ.
ಈ ಮಧ್ಯೆ ಇರುವ ಸರ್ಕಾರಿ ಜಮೀನು ನಿರುದ್ಯೋಗಿಗಳ ಪಾಲಿಗೆ ವರದಾನವಾಗಲಿವೆ. ಒಂದು ಅಂದಾಜಿನ ಪ್ರಕಾರ ಸುಮಾರು 3000 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಈ ಜಮೀನನ್ನು ಸರ್ಕಾರ ಬಗರ್ ಹುಕುಂ ಯೋಜನೆಯಡಿಯಲ್ಲಿ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ.
ಅಲ್ಲಲ್ಲಿ ಇರುವ ಸರ್ಕಾರಿ ಜಮೀನಿಗೆ ರಸ್ತೆಗಳನ್ನು ನಿರ್ಮಿಸುವ ಮೂಲಕ ಉತ್ತಮ ಸಂಪರ್ಕ ಕಲ್ಪಿಸಲಾಗುವುದು. ಈ ಮಧ್ಯೆ ಇರುವ ಸುಮಾರು ಒಂದು ಲಕ್ಷ ಎಕರೆ ರೈತರ ಜಮೀನಿಗೆ ನದಿ ನೀರಿನಿಂದ ಮೈಕ್ರೋ ಇರ್ರಿಗೇಷನ್ ಮಾಡಲಾಗುವುದು.
ಈ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಕೆರೆಗಳು ನದಿ ನೀರಿನಿಂದ ತುಂಬಲಿವೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ ಎಸ್ ಬಸವರಾಜ್ ರವರ ಅಧ್ಯಕ್ಷತೆಯ ಜಿಲ್ಲಾಮಟ್ಟದ ದಿಶಾ ಸಮಿತಿಯ ನಿರ್ಣಯದ ಮೇರೆಗೆ ವಿಶಿಷ್ಟವಾದ ಅನೇಕ ಯೋಜನೆಗಳ ಕನಸು ನನಸು ಮಾಡಲು ಸದ್ದುಗದ್ದಲವಿಲ್ಲದೆ ಪ್ರಸ್ತಾವನೆ ಸಿದ್ಧವಾಗುತ್ತಿದೆ.
- ವಸಂತನರಾಸಪುರದ ಇಂಡಸ್ಟ್ರಿಯಲ್ ನೋಡ್.ಈಗಾಗಲೇ ಚಾಲನೆಯಲ್ಲಿದೆ.
- ಅಂತರರಾಷ್ಟ್ರೀಯ ಮಟ್ಟದ ಏರ್ ಪೋರ್ಟ್.
- ಸುಮಾರು 50 ಟಿ.ಎಂ.ಸಿ ಅಡಿ ನೀರಿನ ಸಾಮರ್ಥ್ಯದ ವಾಟರ್ ಬ್ಯಾಂಕ್.
- ಲಾಲ್ ಬಾಗ್ ಮಾದರಿ ಉಧ್ಯಾನವನ.
- ಗುಡ್ಡಗಳ ಹಸೀರೀಕರಣ.
- ಅರಣ್ಯ ಪ್ರದೇಶಗಳ ಹಸೀರಕರಣ.
- ಮೃಗಾಲಯ.
- ಕರಾಬುಹಳ್ಳಗಳ ಸಮಗ್ರ ಅಭಿವೃದ್ಧಿ.
- ಮೆಟ್ರೋ ಯೋಜನೆ.
- ಸಬ್ ಅರ್ಬನ್ ರೈಲು ಯೋಜನೆ.
- ಸುಮಾರು 74 ಕೀಮೀ ಉದ್ದದ ಬೆಂಗಳೂರು ಫೆರಿ-ಫೆರಿಯಲ್ ರಿಂಗ್ ರಸ್ತೆಗೂ- ಸುಮಾರು 84 ಕೀಮೀ ಉದ್ದದ ತುಮಕೂರು ಫೆರಿ-ಫೆರಿಯಲ್ ರಿಂಗ್ ರಸ್ತೆಗೂ ಕೇವಲ 7-8 ಕೀಮಿ ಅಂತರವಿರಲಿದೆ. ಈ ಎರಡರ ಮಧ್ಯೆ 10 ಪಥದ ರಸ್ತೆ ನಿರ್ಮಾಣವಾಗಲಿದೆ.
- ಹೀಗೆ ಸುಂದರವಾದ ಗ್ರೀನ್ ಫೀಲ್ಡ್ ಯೋಜನೆಯ ಪರಿಕಲ್ಪನೆಯ ಚಿಗರು ಮೊಳಕೆಯೊಡೆಯುತ್ತಿದೆ.
ಕನಸುಗಾರರು ಕೈಜೋಡಿಸಬಹುದು.