23rd June 2024
Share

ಮಾಸ್ಟರ್ ಪ್ಲಾನ್ ಇನ್ನೂ ಭ್ರೂಣಾವಸ್ಥೆಯಲ್ಲಿದೆ

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ತುಮಕೂರು-ಗುಬ್ಬಿ-ಶಿರಾ-ಕೊರಟಗೆರೆ-ಮಧುಗಿರಿ ತಾಲ್ಲೋಕುಗಳ ಸುಮಾರು ಒಂದು ಲಕ್ಷ ಎಕರೆ ಪ್ರದೇಶದ ಈ ನಕ್ಷೆಯಲ್ಲಿರುವ ಸುಮಾರು 20000 ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದ ಇಂಡಸ್ಟ್ರಿಯಲ್ ಮತ್ತು ಕಮರ್ಷಿಯಲ್ ಹಬ್ ತಲೆ ಎತ್ತಲಿದೆ.

ತುಮಕೂರು ತ್ರಿವಳಿ ನಗರವಾಗಿ ಹೊರಹೊಮ್ಮಲಿದೆ. ಸುಮಾರು 84 ಕೀಮೀ ಸುತ್ತಳತೆಯ ಫೆರಿ-ಫೆರಿಯಲ್ ರಿಂಗ್ ರಸ್ತೆ ನಿರ್ಮಾಣವಾಗಲಿದೆ. ತುಮಕೂರು ನಗರದಿಂದ ಫೆರಿ-ಫೆರಿಯಲ್ ರಿಂಗ್ ರಸ್ತೆವರೆಗೆ ಅದ್ಭುತವಾದ ರೇಡಿಯಲ್ ರಸ್ತೆಗಳು ನಿರ್ಮಾಣವಾಗಲಿವೆ.

ಈ ಮಧ್ಯೆ ಇರುವ ಸರ್ಕಾರಿ ಜಮೀನು ನಿರುದ್ಯೋಗಿಗಳ ಪಾಲಿಗೆ ವರದಾನವಾಗಲಿವೆ. ಒಂದು ಅಂದಾಜಿನ ಪ್ರಕಾರ ಸುಮಾರು 3000 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಈ ಜಮೀನನ್ನು ಸರ್ಕಾರ ಬಗರ್ ಹುಕುಂ ಯೋಜನೆಯಡಿಯಲ್ಲಿ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ.

ಅಲ್ಲಲ್ಲಿ ಇರುವ ಸರ್ಕಾರಿ ಜಮೀನಿಗೆ ರಸ್ತೆಗಳನ್ನು ನಿರ್ಮಿಸುವ ಮೂಲಕ ಉತ್ತಮ ಸಂಪರ್ಕ ಕಲ್ಪಿಸಲಾಗುವುದು. ಈ ಮಧ್ಯೆ ಇರುವ ಸುಮಾರು ಒಂದು ಲಕ್ಷ ಎಕರೆ ರೈತರ ಜಮೀನಿಗೆ ನದಿ ನೀರಿನಿಂದ ಮೈಕ್ರೋ ಇರ್ರಿಗೇಷನ್ ಮಾಡಲಾಗುವುದು.

ಈ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಕೆರೆಗಳು ನದಿ ನೀರಿನಿಂದ ತುಂಬಲಿವೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ ಎಸ್ ಬಸವರಾಜ್ ರವರ ಅಧ್ಯಕ್ಷತೆಯ ಜಿಲ್ಲಾಮಟ್ಟದ ದಿಶಾ ಸಮಿತಿಯ ನಿರ್ಣಯದ ಮೇರೆಗೆ ವಿಶಿಷ್ಟವಾದ ಅನೇಕ ಯೋಜನೆಗಳ ಕನಸು ನನಸು ಮಾಡಲು ಸದ್ದುಗದ್ದಲವಿಲ್ಲದೆ ಪ್ರಸ್ತಾವನೆ ಸಿದ್ಧವಾಗುತ್ತಿದೆ.

 1. ವಸಂತನರಾಸಪುರದ ಇಂಡಸ್ಟ್ರಿಯಲ್ ನೋಡ್.ಈಗಾಗಲೇ ಚಾಲನೆಯಲ್ಲಿದೆ.
 2. ಅಂತರರಾಷ್ಟ್ರೀಯ ಮಟ್ಟದ ಏರ್ ಪೋರ್ಟ್.
 3. ಸುಮಾರು 50 ಟಿ.ಎಂ.ಸಿ ಅಡಿ ನೀರಿನ ಸಾಮರ್ಥ್ಯದ ವಾಟರ್ ಬ್ಯಾಂಕ್.
 4. ಲಾಲ್ ಬಾಗ್ ಮಾದರಿ ಉಧ್ಯಾನವನ.
 5. ಗುಡ್ಡಗಳ ಹಸೀರೀಕರಣ.
 6. ಅರಣ್ಯ ಪ್ರದೇಶಗಳ ಹಸೀರಕರಣ.
 7. ಮೃಗಾಲಯ.
 8. ಕರಾಬುಹಳ್ಳಗಳ ಸಮಗ್ರ ಅಭಿವೃದ್ಧಿ.
 9. ಮೆಟ್ರೋ ಯೋಜನೆ.
 10. ಸಬ್ ಅರ್ಬನ್ ರೈಲು ಯೋಜನೆ.
 11. ಸುಮಾರು 74 ಕೀಮೀ ಉದ್ದದ ಬೆಂಗಳೂರು ಫೆರಿ-ಫೆರಿಯಲ್ ರಿಂಗ್ ರಸ್ತೆಗೂ- ಸುಮಾರು 84 ಕೀಮೀ ಉದ್ದದ ತುಮಕೂರು ಫೆರಿ-ಫೆರಿಯಲ್ ರಿಂಗ್ ರಸ್ತೆಗೂ ಕೇವಲ 7-8 ಕೀಮಿ ಅಂತರವಿರಲಿದೆ. ಈ ಎರಡರ ಮಧ್ಯೆ 10 ಪಥದ ರಸ್ತೆ ನಿರ್ಮಾಣವಾಗಲಿದೆ.
 12. ಹೀಗೆ ಸುಂದರವಾದ ಗ್ರೀನ್ ಫೀಲ್ಡ್ ಯೋಜನೆಯ ಪರಿಕಲ್ಪನೆಯ ಚಿಗರು ಮೊಳಕೆಯೊಡೆಯುತ್ತಿದೆ.

ಕನಸುಗಾರರು ಕೈಜೋಡಿಸಬಹುದು.