TUMAKURU:SHAKTHIPEETA FOUNDATION
ಮುಂದಿನ ‘ವಿಶ್ವ ಪರಿಸರ ದಿವಸದ ಕಾಲಮಿತಿ ನಿಗಧಿ ಗೊಳಿಸಿ,’ ಈ ಕೆಳಕಂಡವರಿಗೆ ಹೊಣೆಗಾರಿಕೆ ನೀಡಲು ಪಾಲಿಕೆ ಆಯುಕ್ತರಾದ ಶ್ರೀ ಮತಿ ರೇಣುಕರವರೊಂದಿಗೆ ದಿನಾಂಕ:19.03.2022 ರಂದು ಸಂಜೆ 5 ಗಂಟೆಗೆ ಸಮಾಲೋಚನೆ ನಡೆಸಲಾಯಿತು.ಜೊತೆಯಲ್ಲಿ ದಿಶಾ ಸಮಿತಿ ಸದಸ್ಯರಾದ ಶ್ರೀ T.R.ರಘೋತ್ತಮ್ ರಾವ್ ರವರು ಇದ್ದರು ಸೋಮವಾರ ಈ ಹೊಣೆಗಾರಿಕೆ ಬಗ್ಗೆ ಕಚೇರಿ ಆದೇಶ ನೀಡುವ ಮೂಲಕ ಚಾಲನೆ ನೀಡುವ ಭರವಸೆಯನ್ನು ಆಯುಕ್ತರು ನೀಡಿದ್ದಾರೆ.
- ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಸರ್ವೆ ನಂಬರ್ ಗಳ ಪಟ್ಟಿ- ನಗರ ಪಾಲಿಕೆ ಸರ್ವೆಯರ್ಸ್.
- ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಸರ್ವೆ ನಂಬರ್ ಗಳ ವಾರು ಲೇ-ಔಟ್ ಪಟ್ಟಿ – ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ
- ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಸರ್ವೆ ನಂಬರ್‍ಗಳವಾರು ಲೇ-ಔಟ್‍ವಾರು ಉಧ್ಯಾನವನಗಳ ಪಟ್ಟಿ – ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ
- ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಅಭಿವೃದ್ಧಿ ಆಗದೇ ಇರುವ ಪ್ರತಿಯೊಂದು ಉಧ್ಯಾನವನಗಳಿಗೆ ಮುಳ್ಳುತಂತಿ ಮತ್ತು ನಾಮಫಲಕ ಹಾಕಲು ಅಂದಾಜು ಪಟ್ಟಿ- ನಗರ ಪಾಲಿಕೆ ವಾರ್ಡ್‍ವಾರು ಇಂಜಿನಿಯರ್.
- ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಅಭಿವೃದ್ಧಿ ಆಗದೇ ಇರುವ ಪ್ರತಿಯೊಂದು ಉಧ್ಯಾನವನಗಳಿಗೆ ಗಿಡಗಳನ್ನು ಹಾಕಿ ಮೂರು ವರ್ಷ ನಿರ್ವಹಣೆ ಮಾಡಲು ತಗಲುವ ಅಂದಾಜು ಪಟ್ಟಿ- ಆಯುಷ್ ಇಲಾಖೆ, ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆ.
- ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಯೊಂದು ಉಧ್ಯಾನವನಗಳ ಶುಚಿತ್ವ – ಪಾಲಿಕೆ ಆರೋಗ್ಯ ವಿಭಾಗ
- ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಯೊಂದು ವಾರ್ಡ್‍ವಾರು ಉಧ್ಯಾನವನಗಳ ಅಂತಿಮ ಪಟ್ಟಿಗೆ ಆಯಾ ವಾರ್ಡ್ ಕಾರ್ಪೋರೇಟರ್ ಮತ್ತು ಮೇಯರ್ ಅನುಮೋದನೆ.
- ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಯೊಂದು ಉಧ್ಯಾನವನಗಳ ಜಿಐಎಸ್ ಲೇಯರ್- ನಗರ ಪಾಲಿಕೆ ಜಿಐಎಸ್/ಡಾಟಾ ವಿಂಗ್.
- ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಯೊಂದು ಉಧ್ಯಾನವನಗಳ ಜಿಐಎಸ್ ಲೇಯರ್ ಅಧಿಕೃತ ಘೋಷಣೆ ಸಾರ್ವಜನಿರ ಆಕ್ಷೇಪಣೆಗೆ ಆಹ್ವಾನ- ಆಯುಕ್ತರು ಪಾಲಿಕೆ.
ಇಷ್ಠು ಮಾಡಿದರೆ ಕಳೆದ 21 ವರ್ಷಗಳಿಂದ ನಡೆದು ಬಂದು ಹೋರಾಟದ ಅಂತಿಮ ರೂಪು ದೊರೆಯಲಿದೆ. ಶ್ರಮಿಸಿದ ಎಲ್ಲರಿಗೂ ನಾಗರೀಕ ಸನ್ಮಾನದ ಜೊತೆಗೆ ಪ್ರತಿಯೊಂದು ಉಧ್ಯಾನವನದ ಮೌಲ್ಯಮಾಪನಕ್ಕೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ಪಾಲಿಕೆ ಪತ್ರ ಬರೆಯುವುದು.
‘ಒಂದು ವೇಳೆ ಈ ಬಾರಿಯೂ ವಿಫಲವಾದರೆ, ವಿಶ್ವ ಪರಿಸರ ದಿವಸದಿಂದ ಧರಣೆ ಕೂರುವುದಾಗಿಯೂ ತಿಳಿಸಿದ್ದೇನೆ’.