27th July 2024
Share

ತುಮಕೂರು ನಗರದ ಉದ್ಯಾನವನಗಳ ಜಿಐಎಸ್ ಟ್ಯಾಗ್: ಸನ್ಮಾನ

TUMAKURU:SHAKTHIPEETA FOUNDATION

ತುಮಕೂರು ನಗರದ ಉದ್ಯಾನವನಗಳನ್ನು ಹುಡುಕುವ ಕೆಲಸ 2001 ರಿಂದ ಮಾರುತಿ ನಗರದ ಪ್ರಹ್ಲಾದ್ ರಾವ್ ಪಾರ್ಕ್ ನಿಂದ ಆರಂಭಿಸಲಾಗಿದೆ. ಸುಮಾರು 21 ವರ್ಷಗಳ ನಿರಂತರ ಹೋರಾಟದಿಂದ ನಗರದ ಉದ್ಯಾನವನಗಳನ್ನು ಪಟ್ಟಿ ಮಾಡಲು ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀ ಉಮಾಶಂಕರ್ ಚಾಲನೆ ನೀಡಿದ್ದರು.

ಟೂಡಾ ಮತ್ತು ನಗರಸಭೆ ಆಯುಕ್ತರಾಗಿದ್ದ ಶ್ರೀ ಆದರ್ಶಕುಮಾರ್ ರವರು ಉದ್ಯಾನವನ ಪಟ್ಟಿ ಮಾಡಿ ನೋಟಿಫೀಕೇಷನ್ ಮಾಡಿದ್ದು ಇತಿಹಾಸ.

ಅಂದಿನಿಂದ ಶ್ರೀ ಜಿ.ಎಸ್.ಬಸವರಾಜ್ ರವರು,ಈಗ ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿ ಗಣೇಶ್ ರವರು ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸೇರಿದಂತೆ ನಗರದ ಆನೇಕ ಪರಿಸಾಕ್ತರು ನಿರಂತರವಾಗಿ ಉದ್ಯಾನವನಗಳ ಬೆನ್ನು ಹತ್ತಿದ್ದಾರೆ,

ಕೇವಲ 28 ಸರ್ವೇನಂಬರ್ ಗಳ ಉದ್ಯಾನವನಗಳ ಜಿಐಎಸ್ ಲೇಯರ್ ಮಾಡುವುದು ಮಾತ್ರ ಬಾಕಿ ಇದೆ, ಇನ್ನೂ ಒಂದೆರಡು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಪಾಲಿಕೆ ಆಯುಕ್ತೆ ಶ್ರೀ ಮತಿ ರೇಣುಕರವರು ನಿಖರವಾಗಿ ಹೇಳಿದರು.

ಸಂಸದ ಜಿ.ಎಸ್.ಬಸವರಾಜ್ ರವರು ನಗರದ ಎಲ್ಲಾ ಉದ್ಯಾನವನಗಳ ಜಿಐಎಸ್ ಲೇಯರ್ ಪೂರ್ಣಗೊಳಿಸಿದ ದಿನವೇ ಶ್ರಮಿಸಿದ ಎಲ್ಲರಿಗೂ ಸನ್ಮಾನ ಮಾಡಲಾಗುವುದು ಎಂದು ಪ್ರಕಟಿಸಿದರು.

ಆಯುಕ್ತೆ ರೇಣುಕರವರಿಗೆ ನಾನು ಪ್ರಶ್ನೆ ಹಾಕಿದೆ, ನೋಡಿ ಜಿಐಎಸ್ ಲೇಯರ್ ಮಾಡಿ ಇತಿಹಾಸ ಅಪ್ ಡೇಟ್ ಮಾಡಲು ನಿಮ್ಮಿಂದ ಸಾಧ್ಯಾವಾಗದಿದ್ದರೆ, ಕನ್ಸಲ್ ಟೆಂಟ್ ಗಳಿಗೆ ನೀಡಿಯಾದರೂ ಮಾಡಿ ಎಂದಾಗ, ಆಯಕ್ತರು ನೋಡಿ ಸಾರ್ ನಾವು ಸಂಪೂರ್ಣವಾಗಿ ಜಿ.ಐ.ಎಸ್. ಲೇಯರ್ ಮಾಡಿ ಪೂರ್ಣಗೊಳಿಸುತ್ತೇವೆ.ಇದು ನಾನು ಮಾಡಿರುವ ಪ್ರತಿಜ್ಞೆ ಎಂದು ಖಡಕ್ ಆಗಿ ಹೇಳಿದ ಮಾತು ನನಗೆ ನಿಜಕ್ಕೂ ಮೆಚ್ಚುಗೆ ಆಗಿದೆ. ಅಧಿಕಾರಿಗಳು ಈ ರೀತಿ ಆತ್ಮವಿಶ್ವಾಸದೊಂದಿಗೆ ಕಾರ್ಯ ನಿರ್ವಹಿಸುವುದು ಸ್ವಾಗತಾರ್ಹ.

ಇಷ್ಟು ಚರ್ಚೆ ನಡೆದಿದ್ದು ಸಂಸದರು ನಡೆಸಿದ ತುಮಕೂರು ಮಹಾನಗರ ಪಾಲಿಕೆಯ ಜೀವವೈವಿಧ್ಯ ದಾಖಲಾತಿ ಸಭೆಯಲ್ಲಿ. ಬಹುಷಃ ಈ ದೇಶದಲ್ಲಿ ಜೀವ ವೈವಿದ್ಯ ದಾಖಲಾತಿ ಸಭೆ ನಿರಂತರವಾಗಿ ನಡೆಯುತ್ತಿರುವುದು ತುಮಕೂರು ಮಹಾನಗರ ಪಾಲಿಕೆಯಲ್ಲಿ ಮಾತ್ರ ಇರಬಹುದು.

ಜಿಲ್ಲೆಯ ಯಾವುದೇ ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಭೆ ಮಾಡಿದ ಮಾಹಿತಿ ಇನ್ನೂ ನನಗೆ ದೊರಕಿಲ್ಲ.