27th July 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯಿಂದ ದಿನಾಂಕ:07.02.2012 ರಂದು ಸಮಗ್ರ ಜಲಸಂಪನ್ಮೂಲ ನಿರ್ವಹಣೆಗೆ ನೈಪುಣ್ಯತಾ ಕೇಂದ್ರ AC-IWRM ಸ್ಥಾಪಿಸಿದೆ. ಇದೊಂದು ಒಳ್ಳೆಯ ಸಂಸ್ಥೆ. ಇವರು ಈ ವೇಳೆಗೆ ರಾಜ್ಯದ ಒಂದೊಂದು ಹನಿ ನೀರಿನ ಮಾಹಿತಿಯನ್ನು ಬೆರಳ ತುದಿಯಲ್ಲಿ ಇಟ್ಟುಕೊಂಡಿರಬೇಕಿತ್ತು.

ಪಾಪ ಈ ಸಂಸ್ಥೆಯ ಪತ್ರಕ್ಕೆ ನೀರಾವರಿ ಇಲಾಖೆಗಳಲ್ಲಿನ ಅಂಗಸಂಸ್ಥೆಗಳು ಸ್ಪಂಧಿಸುತ್ತಿಲ್ಲವಂತೆ, ಯಾವ ದಾಖಲೆಗಳನ್ನು ಕೇಳಿದರು ಕೊಡುತ್ತಿಲ್ಲವಂತೆ. ಇಲ್ಲಿರುವ ಸಿಬ್ಬಂಧಿ ಸರಿಯಾಗಿ ಕಾರ್ಯನಿರ್ವಹಿಸಿದರೆ, ಒಂದೆರಡು ವರ್ಷದಲ್ಲಿ ಪರಿಪೂರ್ಣವಾದ ಮಾಹಿತಿಯನ್ನು ಒಂದೇ ಕಡೆ ಸಂಗ್ರಹಮಾಡಬಹುದು.

ನಾನು ಅದರ ಮುಖ್ಯಸ್ಥರಿಗೆ ಹೇಳಿದೆ, ನೋಡಿ ಈ ಸಂಸ್ಥೆಯಲ್ಲಿ ಈ ಡಾಟಾ ಸಂಗ್ರಹಣೆಗೆ ಒಬ್ಬರನ್ನು ನೇಮಿಸಿಕೊಳ್ಳಿ, ಬೆಳಿಗ್ಗೆ ಎದ್ದರೆ ಆತ ವಿವಿಧ ಸಂಸ್ಥೆಗಳಿಗೆ ಬೇಟಿ ನೀಡಿ ನಿಮಗೆ ಅವಶ್ಯಕತೆಯಿರುವ ಮಾಹಿತಿಯನ್ನು ಸಂಗ್ರಹಿಸುವ ಕೆಲಸವನ್ನಷ್ಟೆ ಮಾಡಬೇಕು. ಒಂದು ಪ್ರಯತ್ನ ಮಾಡಿ ನೋಡೋಣ ಎಂಬ ಸಲಹೆ ನೀಡಿದ್ದೇನೆ. ಇವರನ್ನು ‘ಡಾಟಾ ಸಂಗ್ರಹ ಮಾಡುವ ರೌಡಿ ಎನ್ನ ಬೇಕೆ ಎಂದು ಒಬ್ಬರು ಹಾಸ್ಯ ಮಾಡಿದರು.

‘ಯಾವುದೇ ಇಲಾಖೆಯಲ್ಲಿ ಬಿಲ್ ಬರೆಯುವುದು, ಎಂಬಿ ಬುಕ್ ಬರೆಯುವುದು ಹಾಗೂ ಇರುವ ಹಣ ಖರ್ಚು ಮಾಡಿದರೆ ಸಾಕಾಪ್ಪ ಎನ್ನುತ್ತಿದ್ದರೆ, ಬ್ಯಾಂಕ್ ನಲ್ಲಿ ಸಾಲ ವಸೂಲಿಗೆ. ವಾಹನಗಳನ್ನು ಸೀಜ್ ಮಾಡಲು ನೇಮಕ ಮಾಡಿಕೊಳ್ಳುವ  ರೀತಿ, ಡಾಟಾ ಸಂಗ್ರಹಣೆಗೂ ನೇಮಕ ಮಾಡಿಕೊಳ್ಳ ಬೇಕಂತೆ ಎಂದು ಅವರು ನಕ್ಕಿರಬಹುದು ಎನಿಸಿತು’.

ನಾನೇ ಒಂದು ತೀರ್ಮಾನಕ್ಕೆ ಬಂದಿದ್ದೇನೆ, ನಾನು ಆ ಕಚೇರಿಗೆ ಹೋದಾಗ  ನೀವೂ ಏನೇನು ಮಾಡಬೇಕು ಎಂಬ ಬಗ್ಗೆ ಒಳ್ಳೆಯ ರೀತಿಯಲ್ಲಿ ಚರ್ಚೆ ಮಾಡುವ ಮೂಲಕ ಅವರನ್ನು ಹುರಿದುಂಬಿಸುತ್ತಿದ್ದೇನೆ.

ಕರ್ನಾಟಕದಲ್ಲಿ ಎಷ್ಟು ಡ್ಯಾಂಗಳು ಇವೆ ಎಂದಾಗ 231 ಡ್ಯಾಂಗಳ ಪಟ್ಟಿಯನ್ನು ನೀಡಿದರು. ಇವು ಯಾವ ಯಾವ ನಿಗಮ ಅಥವಾ ಇಲಾಖೆಯಡಿ ಬರುತ್ತವೆ ಎಂದಾಗ, ಸಾರ್ ಅವರು ನಮಗೆ ಸರಿಯಾದ ಮಾಹಿತಿ ನೀಡಿಲ್ಲ, ಕೇಂದ್ರ ಸರ್ಕಾರದ ವೆಬ್‍ಸೈಟ್ ಒಂದರಲ್ಲಿ ಪ್ರಿಂಟ್ ತೆಗೆದು ಇಟ್ಟುಕೊಳ್ಳಲಾಗಿದೆ ಎಂದಾಗ ನನಗೆ ಶಾಕ್ ಆಯಿತು.

ನಿಗಮಗಳಿಗೆ ಬರೆದ ಪತ್ರಗಳ ಪ್ರತಿ ನೀಡಿ ಎಂದಾಗ, ಸಾರ್ ಈಗ ಬರೆಯುತ್ತೇವೆ, ಸೆಂಟ್ರಲ್ ವಾಟರ್ ಕಮೀಷನ್ ಒಂದು ಡ್ಯಾಂ ಬಗ್ಗೆ ಏನೇನು ಮಾಹಿತಿ ಸಂಗ್ರಹಿಸಬೇಕು ಎಂಬ ಪಟ್ಟಿ ಮಾಡಿದೆ ಎಂದು ತಿಳಿಸಿದರು.

ಆ ಪಟ್ಟಿ ಪ್ರಕಾರ ಒಂದು ಟೇಬಲ್ ಮಾಡಿ, ಅವರು ಖಾಲಿ ಬಿಟ್ಟಿರುವ ಜಾಗ ಭರ್ತಿ ಮಾಡುವಂತಿದ್ದರೆ ಎಲ್ಲಾ ಮಾಹಿತಿ ದೊರೆಯಲಿದೆ, ಪತ್ರ ಬರೆದರೆ ಅವರು ನಿಮಗೆ ಬೇಕಾದ ಮಾಹಿತಿ ನೀಡುವುದಿಲ್ಲ, ಅವರಿಗೆ ಬೇಕಾಗಿದ್ದು ನೀಡಿ ಕೈತೊಳೆದು ಕೊಳ್ಳುತ್ತಾರೆ ಎಂದಾಗ ಅವರು ಹೌದು ಸಾರ್ ಎಂದಿದ್ದಾರೆ. ಮತ್ತೆ ಕಚೇರಿಗೆ ಬೇಟಿ ನೀಡಿದಾಗ ಅವರು ಏನು ಮಾಡಿದ್ದಾರೆ ನೋಡೋಣ!

ಕೇಂದ್ರ ಜಲಶಕ್ತಿ ಸಚಿವಾಲಯದ ಸದಸ್ಯ ಹಾಗೂ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್,ಬಸವರಾಜ್ ರವರು ಪತ್ರ ಬರೆದು ಮಾಹಿತಿ ನೀಡಲು ಮನವಿ ಮಾಡಿದ್ದಾರೆ. ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರು ಒಂದು ಸಭೆ ಮಾಡಿ ಸಂಸದರು ಕೇಳಿದ ಮಾಹಿತಿ ನೀಡಿ ಸಭೆ ನಡವಳಿಕೆ ಮಾಡಿದ್ದಾರೆ.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮೂಲಕ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಜಲಗ್ರಂಥ’ ಸಿದ್ಧಪಡಿಸಲು ಶಕ್ತಿಪೀಠ ಫೌಂಡೇಷನ್ ಮತ್ತು ಕೆ.ಆರ್.ಸೋಹನ್ ಡಾಟಾ ಗಳ ಬೆನ್ನು ಹತ್ತಿದ್ದೇವೆ ಆದರೂ ಮಾಹಿತಿ ದೊರೆಯುತ್ತಿಲ್ಲ.

ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಪಡೆಯಲು ಆರಂಭಿಸಿದರೆ ಕಡೇ ಪಕ್ಷ ನಿಗದಿತ ಸಮಯಕ್ಕೆ ಏನಾದರೂ ಕೊಡಲೇ ಬೇಕು. ನೋಡೋಣ ನನಗೆ ಅಗತ್ಯವಿರುವ ಮಾಹಿತಿಗಳನ್ನು ಮಾಡಿಸಲೇ ಬೇಕು ಎಂಬ  ಛಲ ನನ್ನದಾಗಿದೆ.

ಎಲ್ಲಾ ಆದ ಮೇಲೆ ನಾವು ಈ ರೀತಿ ಕೆಲಸ ಮಾಡಿದ್ದೇವೆ ಎಂದು ಪ್ರಶಸ್ತಿ’ಯನ್ನಾದರೂ ಅವರು ಪಡೆಯಲಿ.