28th March 2024
Share

TUMAKURU:SHAKTHI PEETA FOUNDATION

ವಿಶ್ವ ಜಲ ದಿನದೊಂದು ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಮುಖ್ಯ ಇಂಜಿನಿಯರ್ ಶ್ರೀ ಅರವಿಂದ ದೇವಣ್ಣ ಕಣಗಿಲ ರವರೊಂದಿಗೆ ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ನೂತನವಾಗಿ ಬಂದಿರುವ ಸಿಇ ರವರು ಎಸ್.ಇ.ಶ್ರೀಮತಿ ಸುಜಾತ ಜಾಧವ್ ರವರೊಂದಿಗೆ ಚರ್ಚೆ ನಡೆಸಿ, ಒಂದೆರಡು ದಿವಸದಲ್ಲಿ ಇದೂವರೆಗೂ ನಡೆದಿರುವ ಪತ್ರವ್ಯವಹಾರಗಳ ಬಗ್ಗೆ, ಇಲಾಖಾವಾರು ಅಗತ್ಯವಿರುವ ಎಲ್ಲಾ ಅಂಶಗಳ ಬಗ್ಗೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದಿಂದ ಕರ್ನಾಟಕ ರಾಜ್ಯದಲ್ಲಿ ಯಾವ, ಯಾವ ಇಲಾಖೆಗಳ ಅಡಿಯಲ್ಲಿ ಯಾವ ಯಾವ ಯೋಜನೆಗಳಿಗೆ ಅನುದಾನ ಪಡೆಯಲಾಗಿದೆ, ಮುಂದೆ ಯಾವ ಯೋಜನೆಗಳಿಗೆ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸ ಬಹುದಾಗಿದೆ ಎಂಬ ಮಾಹಿತಿ ಸಂಗ್ರಹಿಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು.

ADVANCED CENTERE FOR INTEGRATED WATER RESOURCES MANAGEMENT         ಸಿದ್ಧಪಡಿಸಿರುವ KARNATAKA WATER RESOURCES INFORMATION SYSTEM ನಲ್ಲಿನ ಅಂಶಗಳ ಮತ್ತು ಅಗತ್ಯವಿರುವ ಪ್ರತಿಯೊಂದು ಅಂಶಗಳು ಮತ್ತು ಇಲಾಖಾವಾರು ಪಟ್ಟಿಮಾಡಿಕೊಂಡು ನಿಖರವಾದ ಮಾಹಿತಿ ಸಂಗ್ರಹಿಸುವ, ಈಗಾಗಲೇ ಹೊಣೆಗಾರಿಕೆ ಹಂಚಿಕೆ ಮಾಡಿರುವ ಮತ್ತು ಕಾಲಮಿತಿ ನಿಗದಿ ಪಡಿಸಿಕೊಳ್ಳುವÀ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಜೊತೆಯಲ್ಲಿ ಶ್ರೀ ವೇದಾನಂದಾಮೂರ್ತಿ ಇದ್ದರು.