22nd December 2024
Share

TUMAKURU:SHAKTHIPEETA FOUNDATION

ಕೇಂದ್ರ ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಬೆಂಗಳೂರಿನಲ್ಲಿ  CAUVERY WATER REGULATON COMMITTEE(CWRC) ಕೇಂದ್ರ ಕಛೇರಿ ಶೀಘ್ರದಲ್ಲಿ ಆರಂಭವಾಗಲಿದೆ.

CAUVERY WATER REGULATON COMMITTEE(CWRC) ವ್ಯಾಪ್ತಿಗೆ ಬರುವ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳು ಒಟ್ಟಾಗಿ ಸೇರಿ ನೀರಿನ ಹಂಚಿಕೆ ಆಧಾರದಲ್ಲಿಯೇ ಹಣಕಾಸು ಹಂಚಿಕೆ ಮಾಡಿಕೊಂಡು ಕಛೇರಿ ನಿರ್ವಹಣೆ ಮಾಡಲು ಕೇಂದ್ರ ಜಲಶಕ್ತಿ ಸಚಿವಾಲಯ ರೂಪುರೇಷೆ ನಿರ್ಧರಿಸಿದೆಯಂತೆ.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರು ಮತ್ತು ಉತ್ಸಾಹಿ ಇಂಜಿನಿಯರ್‍ಗಳಾದ ಶ್ರೀಮತಿ ಮಾನಸ ಮತ್ತು ಶ್ರೀ ಉಮೇರ ರವರೊಂದಿಗೆ ನೂತನ ಕಛೇರಿಯನ್ನು ವೀಕ್ಷಣೆ ಮಾಡಲಾಯಿತು.

ಬೆಂಗಳೂರಿನ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಓರಾಯಿನ್ ಮಾಲ್ ಎದುರು ಇರುವ ಕೆ.ಆರ್.ಡಿ.ಸಿ.ಎಲ್ ನ ಸಂಪರ್ಕಸೌಧದ 6 ನೇ ಮಹಡಿಯಲ್ಲಿ ಈ ಕಛೇರಿ ಆರಂಭವಾಗಲಿದೆ.