22nd December 2024
Share

TUMAKURU:SHAKTHIPEETA FOUNDATION

 ಸುಮಾರು 210 ಅಂಶಗಳ ಪಟ್ಟಿ ಮಾಡಿದೆ. ಈ ಕೆಳಕಂಡ ಪತ್ರ ಬರೆಯಲಾಗಿದೆ. ಅನಗತ್ಯ ವಿಚಾರಗಳಿದ್ದಲ್ಲಿ ಅಥವಾ ರಿಪೀಟ್ ಆಗಿದ್ದಲ್ಲಿ ಬದಲಾವಣೆ ಮಾಡಿಕೊಂಡು, ಅಗತ್ಯ ಅಂಶಗಳನ್ನು ಸೇರ್ಪಡೆ ಮಾಡಿಕೊಂಡು ಒಂದು ಕರಡು ಪ್ರಸ್ತಾವನೆಯ ಅಂಶಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ಎಲ್ಲಾ ವರ್ಗದವರ ಅಭಿಪ್ರಾಯ ಪಡೆದು, ನಂತರ ಅಂತಿಮ ವರದಿ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಮನವಿ ಮಾಡಲಾಗಿದೆ.

  ಎಲ್ಲಾ ವಿಚಾರದಲ್ಲೂ ಪಾರದರ್ಶಕತೆಯಿಂದ ಇರುವುದು ಅಗತ್ಯವಾಗಿದೆ, ನಮ್ಮದು ಯಾವಾಗಲೂ ರಿಯಲ್ ಟೈಮ್ ವರದಿ. ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಒಂದು ತಂಡ ಸಮರೋಪಾದಿಯಲ್ಲಿ ಮಾಹಿತಿ ಸಂಗ್ರಹಿಸಲು ಟೊಂಕಕಟ್ಟಿ ನಿಂತಿದೆ ಎಂದರೆ ತಪ್ಪಾಗಲಾರದು. ಎಲ್ಲಾ ಇಲಾಖೆಗಳಿಗೂ ಪತ್ರ ಬರೆದು ಅನುಸರಣೆ ಮಾಡಲು ಇಲಾಖಾವಾರು ನೋಡೆಲ್ ಆಫೀಸರ್ ನೇಮಿಸಿದ್ದಾರೆ. ಇದೊಂದು ಮಾಹಿತಿ ಸಂಗ್ರಹಿಸುವ ನಾಗಾಲೋಟ ಎಂದರೆ ಅತಿಶಯೋಕ್ತಿಯಲ್ಲ.

  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮಾಹಿತಿ ಕೋರಿ ಬರೆದ ಪತ್ರಕ್ಕೆ ಸಹಿ ಹಾಕುವಾಗ, ಈ ಮಾಹಿತಿಯನ್ನು ಈ ಕಾ¯ಕ್ಕೆ ಕೊಡುವುದಿಲ್ಲ ಎಂದು ಹಾಸ್ಯಮಾಡಿದ್ದರು.

ಶೀಘ್ರದಲ್ಲಿ ಒಂದು ಜನ ಜಾಗೃತಿ ಆಂದೋಲನ ಕೈಗೊಳ್ಳಲು ರೂಪುರೇಷೆ ಸಿದ್ಧವಾಗುತ್ತಿದೆ. ಈ ಜಲಗ್ರಂಥ ವರದಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಲಹೆಗಳನ್ನು ಸೇರ್ಪಡೆ ಮಾಡಿ, ಮಾನ್ಯ ಮುಖ್ಯ ಮಂತ್ರಿಯವರಿಗೆ ವರದಿ ಸಲ್ಲಿಸಲಾಗುವುದು.

   ದಿನಾಂಕ:26.03.2022 ರಂದು ಬರೆದ ಪತ್ರ.

ಗೆ.

ಮುಖ್ಯ ಇಂಜಿನಿಯರ್

ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ.

ಆನಂದ್ ರಾವ್ ಸರ್ಕಲ್, ಬೆಂಗಳೂರು

ಮಾನ್ಯರೇ

ವಿಷಯ: ಜಲಶಕ್ತಿ ಯೋಜನೆಗಳ ಮೌಲ್ಯಮಾಪನ ಮತ್ತು ಜಲಗ್ರಂಥದ ಮಾಹಿತಿ ಬಗ್ಗೆ.

ಉಲ್ಲೇಖ:

  1. ದಿನಾಂಕ:02.02.2022  ರಂದು ಜಲಸಂಪನ್ಮೂಲ ಇಲಾಖೆಯಿಂದ ತಮಗೆ ಬಂದಿರುವ ಪತ್ರ.
  2. ದಿನಾಂಕ:10.03.2022  ರಂದು ಜಲಸಂಪನ್ಮೂಲ ಇಲಾಖೆಯಿಂದ ತಮಗೆ ಬಂದಿರುವ ಪತ್ರ.
  3. ದಿನಾಂಕ:22.03.2022 ರಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದೊಂದಿಗೆ ಮಾಡಿಕೊಂಡಿರುವ ಎಂ.ಓ.ಯು.

 ನಾನು ಈಗಾಗಲೇ ತಮ್ಮೊಂದಿಗೆ ಮತ್ತು ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಮೂರು ದಿವಸ ಚರ್ಚೆಸಿದ್ದೇನೆ. ಮೇಲ್ಕಂಡ ಉಲ್ಲೇಖಗಳಂತೆ ಕರ್ನಾಟಕ ರಾಜ್ಯದ ಒಂದೊಂದು ಹನಿ ನೀರಿನ ಡಿಜಿಟಲ್ ಡಾಟಾ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಮತ್ತು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಹೆಚ್ಚು ಅನುದಾನ ಪಡೆಯಲು ಕೈಗೊಳ್ಳ ಬೇಕಾಗಿರುವ ಕಾರ್ಯತಂತ್ರಗಳ ವರದಿ ತಯಾರಿಸಲು ಕಾರ್ಯಾರಂಭ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

  ಈ ಹಿನ್ನಲೆಯಲ್ಲಿ ಈ ಪತ್ರದೊಂದಿಗೆ ಲಗತ್ತಿಸಿರುವ ಪಟ್ಟಿಯಲ್ಲಿನ 210 ಅಂಶಗಳ ಬಗ್ಗೆ ಹಾಗೂ ಈಗಾಗಲೇ ಸರ್ಕಾರದಿಂದ ಬಂದಿರುವ ಪತ್ರಗಳಲ್ಲಿನ ಅಂಶಗಳ ಬಗ್ಗೆ ಮತ್ತು ತಮ್ಮ ಐಡಿಯಾ ಗಳು ಸೇರಿದಂತೆ ವಿಷಯವಾರು ಮಾಹಿತಿ ಅಗತ್ಯವಿದೆ.

 ತಮ್ಮ ಇಲಾಖೆಯಲ್ಲಿ ಹಾಲಿ ಇರುವ ಮಾಹಿತಿಗಳು, ಬೇರೆ ಇಲಾಖೆಗಳಿಂದ ಮಾಹಿತಿ ತರಿಸಿಕೊಳ್ಳಲು ಕೈಗೊಂಡಿರುವ ಕ್ರಮಗಳು ಹಾಗೂ ಎಲ್ಲೂ ಮಾಹಿತಿ ದೊರೆಯದಿದ್ದರೆ, ಯಾವ ರೀತಿ ಮಾಹಿತಿ ಸಂಗ್ರಹಿಸಬೇಕು ಎಂಬ ಬಗ್ಗೆ ವರದಿ ಸಿದ್ಧಪಡಿಸಿಕೊಳ್ಳಲು ಈ ಮೂಲಕ ಕೋರಿದೆ.

ತಾವೂ ಬಗ್ಗೆ ಒಂದು ಸಭೆ ಆಯೋಜಿಸಿ ಕಾಲಮಿತಿ ನಿಗದಿಗೊಳಿಸಲು  ಮನವಿ ಮಾಡಲಾಗಿದೆ.

ವಂದನೆಗಳೊಂದಿಗೆ                                            ತಮ್ಮ ವಿಶ್ವಾಸಿ

                                                  (ಕುಂದರನಹಳ್ಳಿ ರಮೇಶ್)

                       ಸದಸ್ಯರು, ರಾಜ್ಯ ಮಟ್ಟದ ದಿಶಾ ಸಮಿತಿ, ಕೇಂದ್ರ ಸರ್ಕಾರ