22nd December 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಮೌಲ್ಯ ಮಾಪನವಾಗಬೇಕಾದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಮೌಲ್ಯಮಾಪನವಾಗಲೇ ಬೇಕು. ಜಲಶಕ್ತಿ ಸಚಿವಾಲಯಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆಗಳ ಮಾಹಿತಿಗಳ ಸಹಿತಿ ಜಿಐಎಸ್ ಲೇಯರ್ ಮಾಡಲೇ ಬೇಕಿದೆ.

ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರೆಯಬೇಕಾದಲ್ಲಿ ನಿಖರವಾದ ಡಾಟಾ ಬೇಸ್ ಮಾಡುವುದು ಅಗತ್ಯವಾಗಿದೆ. ಈ ಕೆಲಸ ಮಾಡಲೆಂದೇ ACIWRM  ಸ್ಥಾಪನೆಯಾಗಿರುವುದು. ಆದ್ದರಿಂದ ಇವರಿಗೆ ಬೇಕಾದ ಡಾಟಾ ವನ್ನು ಸಂಭಂಧಿಸಿದ ಇಲಾಖೆಗಳಿಂದ ರವಾನಿಸುವ ಹೊಣೆಗಾರಿಕೆ ಮಹತ್ವದ್ದಾಗಿದೆ.

ರಾಜ್ಯ ಮಟ್ಟದ ನಕ್ಷೆಯಲ್ಲಿ ಇರುವ ಲೇಯರ್‍ಗಳಿಗೆ ವಿಧಾನಸಭಾ ಕ್ಷೇತ್ರದ ಲೇಯರ್ ಕೂರಿಸುವುದು ಕಷ್ಟದ ಕೆಲಸವಲ್ಲ. ಅಪೂರ್ಣ ಮಾಹಿತಿ ಸಂಗ್ರಹಿಸುವುದು ಒಂದು ಪವಾಡ.  ACIWRM  ಮುಖ್ಯಸ್ಥರಾದ ಶ್ರೀ ಶಿವಕುಮಾರ್‍ರವರು, ಅತಿ ಶೀಘ್ರದಲ್ಲಿ ಅಗತ್ಯವಿರುವ ಮಾಹಿತಿ ಪಟ್ಟಿ ಮಾಡಿ ಇಲಾಖೆಗಳಿಗೆ ರವಾನಿಸುವುದಾಗಿ ಖಚಿತ ಭರವಸೆ ನೀಡಿದ್ದಾರೆ.

ಜಿಐಎಸ್ ವಿಭಾಗದವರು ಡಾಟಾ ನೀಡಿದಲ್ಲಿ ಹಗಲು ಇರಳು ಕೆಲಸ ಮಾಡಿಕೊಡುತ್ತೇವೆ ಸಾರ್, ನಮಗೂ ಆಸೆ ಇದೆ. ಭಾರತ ದೇಶದಲ್ಲಿಯೇ ಡಾಟಾ ಬೇಸ್ ನಲ್ಲಿ ನಾವು ಮೊದಲಿಗರಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಜಕ್ಕೂ ಈ ಭಾವನೆ ಒಳ್ಳೆಯದಾಗಿದೆ. ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಕಾಲ ಬಂದಿದೆ ಎಂಬ ಭಾವನೆ ನನ್ನದಾಗಿದೆ.