22nd December 2024
Share

TUMAKURU:SHAKTHIPEETA FOUNDATION

ಜಲಗ್ರಂಥ ಮೌಲ್ಯ ಮಾಪನ ವರದಿಯಲ್ಲಿ ಮುಚ್ಚು ಮರೆ ಅವಶ್ಯ ಕತೆಯಿಲ್ಲ. ಸರ್ಕಾರಕ್ಕೆ ನೀಡುವ ಮೊದಲೇ ವ್ಯಾಪಕ ಚರ್ಚೆ ಆಗಬೇಕು, ಎಲ್ಲಾ ಹಂತದಲ್ಲೂ ಪರ-ವಿರೋಧ ಅಭಿಪ್ರಾಯಗಳು ವರದಿಯಲ್ಲಿಯೇ ಲಿಖಿತವಾಗಿ ದಾಖಲೆ ಆಗಬೇಕು ಎಂಬುದು ನನ್ನ ಅನಿಸಿಕೆ.

ನಾನು ಮಾಡಲು ಉದ್ದೇಶಿರುವುದು ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ ಸರ್ಕಾರ ಕೇಂದ್ರದಿಂದ ಹೆಚ್ಚಿಗೆ ಅನುದಾನ ಪಡೆಯುವ ಕಾರ್ಯತಂತ್ರವಾಗಿದೆ. ಅದ್ದರಿಂದ ಆನೇಕರ ಅಭಿಪ್ರಾಯ, ಆನೇಕ ವರದಿಗಳ ಪ್ರಮುಖ ಅಂಶಗಳನ್ನು ವರದಿಯಲ್ಲಿ ಉಲ್ಲೇಖ ಮಾಡುವುದು ಅಗತ್ಯವಾಗಿದೆ.

ಸರ್ಕಾರವನ್ನು ಜೊತೆ ಜೊತೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಜ್ಜುಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ನಮ್ಮ ವಿಷನ್ ಗ್ರೂಪ್ ನದ್ದಾಗಿದೆ.

ಓದುಗರು ಮೌನವಾದರೆ ನಾನು ಏನು ಮಾಡಲಿ. ಬಹಳಷ್ಟು ಜನ ಸಲಹೆ ನೀಡುತ್ತಿದ್ದಾರೆ, ನಿಜಕ್ಕೂ ನನಗೆ ಹೆಮ್ಮೆ ಎನಿಸುತ್ತಿದೆ.